Site icon Vistara News

Shoaib Malik : ಸಾನಿಯಾ ಡೈವೋರ್ಸ್​​ ಕೊಟ್ಟ ಬಳಿಕ ದಿಕ್ಕೆಟ್ಟ ಮಲಿಕ್; ​ಒಂದೇ ಓವರ್​ನಲ್ಲಿ 3 ನೋಬಾಲ್​

Sohaib Mailik

ನವದೆಹಲಿ: ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತೊಂದು ವಿವಾದದ ನಡುವೆ ಸಿಲುಕಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) 2024ರಲ್ಲಿ ಆಡುತ್ತಿರುವ ಆಲ್ರೌಂಡರ್, ಮೈದಾನದಲ್ಲಿ ತಮ್ಮ ವರ್ತನೆಗಳಿಂದ ಸುದ್ದಿಯಲ್ಲಿದ್ದಾರೆ. ಎಕ್ಸ್​ನಲ್ಲಿ ಕ್ರಿಕೆಟ್​ ಅಭಿಮಾನಿಗಳು ಮ್ಯಾಚ್ ಫಿಕ್ಸಿಂಗ್ ಬಗ್ಗೆ ಊಹಾಪೋಹಗಳನ್ನು ವ್ಯಕ್ತಪಡಿದ್ದಾರೆ. ಇತ್ತೀಚೆಗೆ ಸಾನಿಯಾ ಮಿರ್ಜಾ ಅವರಿಂದ ಬೇರ್ಪಟ್ಟು ಸನಾ ಜಾವೇದ್​ ಜತೆ ಮದುವೆಯಾಗಿದ್ದ ಮಲಿಕ್​ ಇದೀಗ ಮೋಸದಾಟ ಆಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಸೋಮವಾರ (ಜನವರಿ 22) ಫಾರ್ಚೂನ್ ಬರಿಶಾಲ್ ಮತ್ತು ಖುಲ್ನಾ ಟೈಗರ್ಸ್ ನಡುವಿನ ಪಂದ್ಯದ ಸಮಯದಲ್ಲಿ, ಶೋಯೆಬ್ ಮಲಿಕ್ ಇದುವರೆಗೆ ಯಾರೂ ಮಾಡದ ಕೆಟ್ಟ ಬೌಲಿಂಗ್ ಮಾಡಿದ್ದಾರೆ. ಸ್ಪಿನ್ನರ್ ಆಗಿರುವ ಆಲ್​ರೌಂಡರ್​ 3 ನೋ ಬಾಲ್​ಗಳನ್ನು ಎಸೆದಿದ್ದಾರೆ. ಅದೂ ಒಂದೇ ಓವರ್​ನಲ್ಲಿ ಎಂಬುದೇ ಅಚ್ಚರಿ.

ಇದನ್ನು ಓದಿ : Karun Nair : ಐಪಿಎಲ್​ನಲ್ಲಿ ಅನ್​ ಸೋಲ್ಡ್​​; ಕೌಂಟಿ ಕಡೆಗೆ ಹೊರಟ ಕನ್ನಡಿಗ

ಬರಿಶಾಲ್ ತಂಡದ ಪರ ಆಡುತ್ತಿರುವ ಶೋಯೆಬ್ ಮಲಿಕ್ ಈ ಪಂದ್ಯದಲ್ಲಿ ಕೇವಲ ಒಂದು ಓವರ್ ಮಾತ್ರ ಎಸೆದಿದ್ದರು. ಅದರಲ್ಲಿ ಅವರು ಪ್ರಮಾದಗಳನ್ನೇ ಮಾಡಿದ್ದರು. ಟೈಗರ್ಸ್​ ತಂಡದ ವೆಸ್ಟ್ ಇಂಡೀಸ್ ಬ್ಯಾಟರ್​ ಎವಿನ್ ಲೂಯಿಸ್ ಅವರು ಹೆಚ್ಚಿನ ನೋ ಬಾಲ್​ಗಳನ್ನು ಸದುಪಯೋಗ ಮಾಡಿಕೊಂಡರು. ಒಂದೇ ಓವರ್​ನಲ್ಲಿ 18 ರನ್​ಗಳನ್ನು ಹೊಡೆದರು. ಇದು ಎದುರಾಳಿ ತಂಡಕ್ಕೆ ರನ್​ ವೇಗ ಹೆಚ್ಚಿಸಲು ಮತ್ತು ಪಂದ್ಯವನ್ನು ಗೆಲ್ಲಲು ಸಹಾಯ ಮಾಡಿತು.

ಶೋಯೆಬ್ ಮಲಿಕ್ ಅವರ ಮೂರು ನೋ ಬಾಲ್ ಗಳ ಸಮೇತ ಎವಿನ್ ಲೂಯಿಸ್ 22 ಎಸೆತಗಳಲ್ಲಿ 53 ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಫಾರ್ಚೂನ್ ಬರಿಶಾಲ್ 187 ರನ್​ಗಳ ಬೃಹತ್ ಮೊತ್ತವನ್ನು ಸೇರಿಸಿತು ಮುಷ್ಫಿಕರ್ ರಹೀಮ್ ಅಜೇಯ 68 ರನ್ ಸಿಡಿಸಿದ್ದರು. ನಾಯಕ ತಮೀಮ್ ಇಕ್ಬಾಲ್ 40 ರನ್ ಗಳಿಸಿದರು. ಕೊನೆಯಲ್ಲಿ ಮಹಮದುಲ್ಲಾ ತಂಡಕ್ಕೆ ನಿರ್ಣಾಯಕ ರನ್​ಗಳನ್ನು ತಂದುಕೊಟ್ಟರು.

ಟೈಗರ್ಸ್​ ತಂಡದ ಪರ ಎವಿನ್ ಲೂಯಿಸ್ ಅವರಲ್ಲದೆ, ಅನಾಮುಲ್ ಹಕ್ (63) ಅರ್ಧಶತಕವನ್ನು ಗಳಿಸಿದರು, ಅಫಿಫ್ ಹುಸೇನ್ (41) ಮತ್ತು ಶಾಯ್ ಹೋಪ್ (25) ಉತ್ತಮ ಪ್ರದರ್ಶನ ನೀಡಿದರು.

ಟ್ವಿಟರ್​ನಲ್ಲಿ ಮಲಿಕ್​ ತರಾಟೆ

ಫಾರ್ಚೂನ್ ಬರಿಶಾಲ್ ಮತ್ತು ಖುಲ್ನಾ ಟೈಗರ್ಸ್ ನಡುವಿನ ಪಂದ್ಯದಲ್ಲಿ ಶೋಯೆಬ್ ಮಲಿಕ್ ಚೆಂಡಿನೊಂದಿಗೆ ಮಾಡಿದ ಪ್ರಮಾದವು ಆಟದ ಪ್ರಮುಖ ಚರ್ಚೆಯ ವಿಷಯವಾಯಿತು. ಸೋಲಿನ ಹಿಂದೆ ಆಲ್ರೌಂಡರ್ ಅವರ ಕಳಪೆ ಬೌಲಿಂಗ್ ಕಾರಣ ಎಂದು ಹಲವರು ದೂಷಿಸಿದರು. ಓವರ್​ನಲ್ಲಿ ಮೂರು ನೋ ಬಾಲ್​​ ಎಸೆದಿದ್ದಕ್ಕಾಗಿ ಎಕ್ಸ್​ನಲ್ಲಿ ಅಭಿಮಾನಿಗಳು ಅವರನ್ನು ತರಾಟೆಗೆ ತೆಗೆದುಕೊಂಡರು. ಅವರು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂದು ಆರೋಪಿಸಿದರು. ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ:

Exit mobile version