Site icon Vistara News

Rohit Sharma | ಸೆಮಿಗೂ ಮುನ್ನ ಟೀಮ್​ ಇಂಡಿಯಾಕ್ಕೆ ಶಾಕ್​; ನಾಯಕ ರೋಹಿತ್​ಗೆ ಗಾಯ ಅಭ್ಯಾಸ ಮೊಟಕು

rohit

ಅಡಿಲೇಡ್​: ಇಂಗ್ಲೆಂಡ್​ ವಿರುದ್ಧ ಗುರುವಾರ (ನವೆಂಬರ್ 10) ನಡೆಯಲಿರುವ ಟಿ20 ವಿಶ್ವ ಕಪ್​ನ ಸೆಮಿಫೈನಲ್​ಗೂ ಮುನ್ನ ಟೀಮ್​ ಇಂಡಿಯಾಕ್ಕೆ ಸಂಕಷ್ಟವೊಂದು ಎದುರಾಗಿದೆ. ತಂಡದ ನಾಯಕ ರೋಹಿತ್​ ಶರ್ಮಾ(Rohit Sharma) ಅಭ್ಯಾಸದ ವೇಳೆ ಗಾಯಗೊಂಡು ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಇದರಿಂದ ಭಾರತ ತಂಡಕ್ಕೆ ದೊಡ್ಡ ಆತಂಕವೊಂದು ಸೃಷ್ಟಿಯಾಗಿದೆ.

ಮಂಗಳವಾರ ನೆಟ್ಸ್​ನಲ್ಲಿ ರಘು ರಾಘವೇಂದ್ರ ಅವರಿಂದ ಥ್ರೋಡೌನ್‌ಗಳನ್ನು ಎದುರಿಸುತ್ತಿದ್ದಾಗ ಒಂದು ಶಾರ್ಟ್ ಬಾಲ್ ರೋಹಿತ್​ ಅವರ ಬಲ ಕೈಗೆ ಬಡಿಯಿತು. ತಕ್ಷಣವೆ ಗ್ಲೌಸ್​ ಕಳಚಿದ ರೋಹಿತ್​ ಶರ್ಮಾ ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರು. ನೆಟ್ಸ್​ನಲ್ಲಿ ಗಾಯವಾದ ತಕ್ಷಣ ಟೀಮ್ ಇಂಡಿಯಾ ವೈದ್ಯಕೀಯ ಸಿಬ್ಬಂದಿ ಓಡಿ ಬಂದು ರೋಹಿತ್​ಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ನೋವು ಅತಿಯಾದ ಕಾರಣ ಬ್ಯಾಟಿಂಗ್ ಅಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿದರು.

ರೋಹಿತ್ ಶರ್ಮಾ ಇಂಜುರಿ ಇದೀಗ ಭಾರತ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ನಾಯಕನೇ ಗಾಯಕ್ಕೆ ಗುರಿಯಾಗಿರುವುದು ಟೀಮ್​ ಮ್ಯಾನೇಜ್​ಮೆಂಟ್​ಗೆ ತಲೆನೋವಾಗಿದೆ. ಆದರೆ ರೋಹಿತ್ ಇಂಜುರಿ ಬಗ್ಗೆ ಬಿಸಿಸಿಐ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ.

ನೆಟ್ಸ್‌ನಿಂದ ನಿರ್ಗಮಿಸಿದ ರೋಹಿತ್ ಕೈಗೆ ಐಸ್‌ ಬಾಕ್ಸ್‌ ಮೇಲೆ ಕುಳಿತು ಇತರ ಆಟಗಾರರ ಅಭ್ಯಾಸವನ್ನು ವೀಕ್ಷಿಸುತ್ತ ಮೆಂಟಲ್​ ಕಂಡೀಷನಿಂಗ್​ ಕೋಚ್​ ಪ್ಯಾಡಿ ಅಪ್ಟನ್ ಅವರೊಂದಿಗೆ ಸುದೀರ್ಷವಾಗಿ ಚರ್ಚೆ ನಡೆಸಿದರು.

ಇದನ್ನೂ ಓದಿ | T20 World Cup | ಡೇವಿಡ್‌ ಮಲಾನ್‌ಗೆ ಗಾಯ; ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ ?

Exit mobile version