Site icon Vistara News

Shreyanka Patil: ಅಭಿಮಾನಿಯಿಂದ ಬಂತು ಆರ್​ಸಿಬಿ ಆಟಗಾರ್ತಿಗೆ ಮದುವೆ ಪ್ರಪೋಸಲ್; ಫೋಟೊ ವೈರಲ್

Shreyanka Patil

ಬೆಂಗಳೂರು: ಪ್ರಸಕ್ತ 2ನೇ ಆವೃತ್ತಿಯ ಡಬ್ಲ್ಯುಪಿಎಲ್(WPL 2024) ಟೂರ್ನಿಯ ಪಂದ್ಯವಾಳಿಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಕನ್ನಡಿಗರ ನೆಚ್ಚಿನ ತಂಡವಾದ ಆರ್​ಸಿಬಿ(RCB) ಸದ್ಯ ಆಡಿದ 2 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕಿಕೊಂಡಿದೆ. ಮಂಗಳವಾರ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಯೊಬ್ಬರು ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್(Shreyanka Patil) ಅವರಿಗೆ ಮದುವೆ ಪ್ರಸ್ತಾಪವನ್ನಿಟ್ಟಿ ಘಟನೆ ನಡೆದಿದೆ. ಅಭಿಮಾನಿಯ ಮದುವೆ ಪ್ರಪೋಸಲ್(Shreyanka Patil gets marriage proposal) ಕಂಡು ಆರ್​ಸಿಬಿ ತಂಡದ ಸಹ ಆಟಗಾರ್ತಿಯರು ಜೋರಾಗಿ ನಕ್ಕಿದ್ದಾರೆ. ಈ ವಿಡಿಯೊ ಮತ್ತು ಫೋಟೊ ವೈರಲ್​ ಆಗಿದೆ.

ಆರ್‌ಸಿಬಿ ಬ್ಯಾಟಿಂಗ್​ ಇನಿಂಗ್ಸ್​ನ ಏಳನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಯೊಬ್ಬ ‘ಶ್ರೇಯಾಂಕಾ ಪಾಟೀಲ್ ಅವರೇ ನೀವು ನನ್ನನ್ನು ಮದುವೆಯಾಗುತ್ತೀರಾ’ ಎಂದು ಬರೆದಿರುವ ಪೋಸ್ಟರ್ ಪ್ರದರ್ಶಿಸಿದ್ದಾರೆ. ಇದು ಪಂದ್ಯದ ದೊಡ್ಡ ಪದರೆಯಲ್ಲಿ ಕಂಡು ಬಂದಿದೆ. ಈತ ಉತ್ತರ ಕರ್ನಾಟಕದ ಅಭಿಮಾನಿಯೊಗಿದ್ದಾನೆ. ಉತ್ತರ ಕರ್ನಾಟಕ ಎಂದು ಕನ್ನಡದಲ್ಲಿಯೇ ಬರೆದಿದ್ದಾನೆ. ಶ್ರೇಯಾಂಕಾ ಪಾಟೀಲ್ ಕೂಡ ಉತ್ತರ ಕರ್ನಾಟಕ ಮೂಲದವರಾಗಿದ್ದಾರೆ.

ಇದನ್ನೂ ಓದಿ WPL 2024 : ಆರ್​ಸಿಬಿ ತಂಡಕ್ಕೆ ಸತತ ಎರಡನೇ ಜಯ, ಗುಜರಾತ್​ಗೆ ಹೀನಾಯ ಸೋಲು

ಇದು ಮಾತ್ರವಲ್ಲದೆ ಪುಟ್ಟ ಅಭಿಮಾನಿಯೊಬ್ಬಳು ಶ್ರೇಯಾಂಕ ಅವರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಸಣ್ಣ ಹುಡುಗಿಯೊಬ್ಬಳು ಬ್ಯಾನರ್‌ನಲ್ಲಿ, “ಶ್ರೇಯಾಂಕಾ, ನೀವು RCB ಮತ್ತು ಬೆಂಗಳೂರನ್ನು ಹೆಮ್ಮೆಪಡುತ್ತೀರಿ. ನಾವು ನಿಮ್ಮನ್ನು ನೋಡಲು ಬಂರುತ್ತೇನೆ” ಎಂದು ಬರೆದುಕೊಂಡಿದ್ದಾಳೆ.

ಶ್ರೇಯಾಂಕಾ ಕಳೆದ ಋತುವಿನಲ್ಲಿ RCB ಪರ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು, ಆದರೆ ಈ ವರ್ಷ ಅವರು ತಮ್ಮ ತಂಡದ ಎರಡೂ ಪಂದ್ಯಗಳಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. 21 ವರ್ಷದ ಶ್ರೇಯಾಂಕಾ ಭಾರತ ಪರ 2 ಏಕದಿನ ಪಂದ್ಯಗಳನ್ನಾಡಿ 4 ವಿಕೆಟ್​ ಪಡೆದಿದ್ದಾರೆ. ಟಿ20ಯಲ್ಲಿ 8 ವಿಕೆಟ್​ ಕಿತ್ತಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸ್ಮೃತಿ ಮಂಧಾನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ಉತ್ತಮ ಆಟ ಆಡಲಿಲ್ಲ. . ಬೆತ್ ಮೂನಿ ನೇತೃತ್ವದ ತಂಡವು ನಿಯಮಿತವಾಗಿ ವಿಕೆಟ್ ಗಳನ್ನು ಕಳೆದುಕೊಂಡ ಕಾರಣ ಕಡಿಮೆ ಮೊತ್ತ ಪೇರಿಸಿತು. ನಾಯಕಿ ಬೆತ್ ಮೂನಿ 7 ಎಸೆತಗಳಲ್ಲಿ 8 ರನ್ ಗಳಿಸಿ ನಿರ್ಗಮಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ಹರ್ಲೀನ್ ಡಿಯೋಲ್ 31 ಎಸೆತಗಳಲ್ಲಿ 22 ರನ್ ಗಳಿಸಿ ನಿರ್ಗಮಿಸಿದರು. ಫೋಬೆ ಲಿಚ್ಫೀಲ್ಡ್ ಗುಜರಾತ್ ಜೈಂಟ್ಸ್​ ತಂಡದ ಭರವಸೆಯಾಗಿದ್ದರು. ಆದರೆ ರೇಣುಕಾ ಸಿಂಗ್ ಅವರನ್ನು ಪೆವಿಲಿಯನ್​​ಗೆ ಕಳುಹಿಸಿದರು. ಗುಜರಾತ್ ಜೈಂಟ್ಸ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಲಷ್ಟೇ ಶಕ್ತವಾಯಿತು.

Exit mobile version