Site icon Vistara News

WPL 2024: ಶ್ರೇಯಾಂಕಾ ಪಾಟೀಲ್ ಅದ್ಭುತ ಫೀಲ್ಡಿಂಗ್​ ಕಂಡು ದಂಗಾದ ಆರ್​ಸಿಬಿ ಅಭಿಮಾನಿಗಳು

Shreyanka Patil

ಬೆಂಗಳೂರು: ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಮಾರ್ಚ್ 2 ರ ಶನಿವಾರದಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡಬ್ಲ್ಯುಪಿಎಲ್(WPL 2024)​ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ 7 ವಿಕೆಟ್​ಗಳ ಸೋಲಿಗೆ ತುತ್ತಾಯಿತು. ಆದರೆ ಈ ಪಂದ್ಯದಲ್ಲಿ ಆರ್​ಸಿಬಿ(RCB) ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್(Shreyanka Patil)​ ಮಾಡಿದ ಅದ್ಭತು ಫೀಲ್ಡಿಂಗ್​ನ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸೋಫಿ ಡಿವೈನ್​ ಅವರು ಎಸೆದ 2ನೇ ಓವರ್​ನ ಅಂತಿಮ ಎಸೆತದಲ್ಲಿ ಮುಂಬೈ ತಂಡದ ಬ್ಯಾಟರ್​ ಹೀಲಿ ಮ್ಯಾಥ್ಯೂಸ್​ ಚೆಂಡನ್ನು ಸಿಕ್ಸರ್​ ಕಡೆ ಬಾರಿಸಿದರು. ಇದೇ ವೇಳೆ ಲಾಂಗ್​ ಆನ್​ ನಲ್ಲಿ ಫೀಲ್ಡಿಂಗ್​ ನಡೆಸುತ್ತಿದ್ದ ಶ್ರೇಯಾಂಕ ಪಾಟೀಲ್ ಎತ್ತರಕ್ಕೆ ಜಿಗಿದು​ ಸಿಕ್ಸರ್​ಗೆ ಹೋಗುತ್ತಿದ್ದ ಚೆಂಡನ್ನು ತಡೆಯುವಲ್ಲಿ ಯಶಸ್ಸಿಯಾದರು.

ಡೈವಿಂಗ್​ ಮೂಲಕ ಕ್ಯಾಚ್​ ಹಿಡಿದ ಶ್ರೇಯಾಂಕಾ ನಿಯಂತ್ರಣ ಕಳೆದುಕೊಂಡ ಕಾರಣ ಚೆಂಡನ್ನು ಮೈದಾನದ ಒಳಗೆ ಎಸೆದು ತಾವು ಬೌಂಡರಿ ಲೈನ್​ನಿಂದ ಆಚೆ ಬಿದ್ದರು. ಕ್ಯಾಚ್​ ಹಿಡಿಯುವಲ್ಲಿ ವಿಫಲರಾದರೂ ಕೂಡ ಸಿಕ್ಸರ್​ ತಡೆದು ಗಮನಸೆಳೆದರು. ಅವರ ಈ ಸೂಪರ್​ ಮ್ಯಾನ್​ ರೀತಿಯ ಫೀಲ್ಡಿಂಗ್​ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಜತೆಗೆ ಈ ಫೀಲ್ಡಿಂಗ್​ ಪ್ರಯತ್ನಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. 21 ವರ್ಷದ ಶ್ರೇಯಾಂಕಾ ಭಾರತ ಪರ 2 ಏಕದಿನ ಪಂದ್ಯಗಳನ್ನಾಡಿ 4 ವಿಕೆಟ್​ ಪಡೆದಿದ್ದಾರೆ. ಟಿ20ಯಲ್ಲಿ 8 ವಿಕೆಟ್​ ಕಿತ್ತಿದ್ದಾರೆ.

ಇದನ್ನೂ ಓದಿ WPL 2024: ಸತತ 2ನೇ ಸೋಲಿಗೆ ತುತ್ತಾದ ಆರ್​ಸಿಬಿ; ಮುಂಬೈಗೆ 7 ವಿಕೆಟ್​ ಗೆಲುವು

ಈ ಹಿಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಆರ್​ಸಿಬಿ ಆಟಗಾರ್ತಿ ಜಾರ್ಜಿಯಾ ವೇರ್ಹ್ಯಾಮ್ ಇದೇ ರೀತಿ ಬೌಂಡರಿ ಲೈನ್​ನಲ್ಲಿ ಜಿಗಿದು ಸಿಕ್ಸರ್​ ಒಂದನ್ನು ತಡೆದಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು. ಜಾರ್ಜಿಯಾ ಅವರ ಫೀಲ್ಡಿಂಗ್​ ಕಂಡು ಲೇಡಿ ಎಬಿಡಿ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದರು.

ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಯೊಬ್ಬರು ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್(Shreyanka Patil) ಅವರಿಗೆ ಮದುವೆ ಪ್ರಸ್ತಾಪವನ್ನಿಟ್ಟಿ ಘಟನೆ ನಡೆದಿತ್ತು. ಅಭಿಮಾನಿಯ ಮದುವೆ ಪ್ರಪೋಸಲ್(Shreyanka Patil gets marriage proposal) ಕಂಡು ಆರ್​ಸಿಬಿ ತಂಡದ ಸಹ ಆಟಗಾರ್ತಿಯರು ಜೋರಾಗಿ ನಕ್ಕಿದ್ದಾರೆ. ಈ ವಿಡಿಯೊ ಮತ್ತು ಫೋಟೊ ವೈರಲ್​ ಆಗಿತ್ತು.

ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಯೊಬ್ಬ ‘ಶ್ರೇಯಾಂಕಾ ಪಾಟೀಲ್ ಅವರೇ ನೀವು ನನ್ನನ್ನು ಮದುವೆಯಾಗುತ್ತೀರಾ’ ಎಂದು ಬರೆದಿರುವ ಪೋಸ್ಟರ್ ಪ್ರದರ್ಶಿಸಿದ್ದಾರೆ. ಇದು ಪಂದ್ಯದ ದೊಡ್ಡ ಪದರೆಯಲ್ಲಿ ಕಂಡು ಬಂದಿದೆ. ಈತ ಉತ್ತರ ಕರ್ನಾಟಕದ ಅಭಿಮಾನಿಯೊಗಿದ್ದಾನೆ. ಉತ್ತರ ಕರ್ನಾಟಕ ಎಂದು ಕನ್ನಡದಲ್ಲಿಯೇ ಬರೆದಿದ್ದಾನೆ. ಶ್ರೇಯಾಂಕಾ ಪಾಟೀಲ್ ಕೂಡ ಉತ್ತರ ಕರ್ನಾಟಕ ಮೂಲದವರಾಗಿದ್ದಾರೆ.

Exit mobile version