Site icon Vistara News

Virat Kohli : ಕೊಹ್ಲಿಗೆ ಆಡಲಾಗದ ಲೆಗ್ ಸ್ಪಿನ್ನರ್​ ಆರ್​ಸಿಬಿಗೆ ಸೇರ್ಪಡೆ?

Shreyas Iyer

ಬೆಂಗಳೂರು: 2024 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜು ಕೆಲವೇ ದಿನಗಳಲ್ಲಿ ನಡೆಯಲಿರುವುದರಿಂದ ಫ್ರಾಂಚೈಸಿಗಳು ಸುಪ್ತ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲು ನಾನಾ ಪ್ರಯತ್ನಗಳನ್ನು ಮಾಡಲಿದೆ. ಅದೇ ರೀತಿ ಆಟಗಾರರ ಸ್ವಾಧೀನಕ್ಕಾಗಿ ತಮ್ಮ ತಂತ್ರಗಳನ್ನು ಪ್ರಯೋಗ ಮಾಡಲಿದೆ. ಐಪಿಎಲ್ ಪ್ರಶಸ್ತಿಯನ್ನು ಬರವನ್ನು ನೀಗಿಸುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇತ್ತೀಚೆಗೆ ಟ್ರಯಲ್ ಆಯೋಜಿಸಿತ್ತು, ಇದರಲ್ಲಿ ವಿವಿಧ ನಗರಗಳ ಅನೇಕ ಯುವಕರು ಭಾಗವಹಿಸಿದ್ದರು. ಅವರಲ್ಲಿ ಐಪಿಎಲ್​​ನ ಹಳೆಯ ತಾರೆಗಳಲ್ಲಿ ಒಬ್ಬರಾದ ಶ್ರೇಯಸ್ ಗೋಪಾಲ್ ಕೂಡ ಪಾಲ್ಗೊಂಡಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಅವರನ್ನು ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ ಬಿಡುಗಡೆ ಮಾಡಿದೆ. ಹೀಗಾಗಿ ತಂಡದಲ್ಲಿ ಲೆಗ್ ಸ್ಪಿನ್ನರ್​ ಇಲ್ಲದಂತಾಗಿದೆ. ಹೀಗಾಗಿ ಹರಾಜಿನಲ್ಲಿ ಅವರ ಪ್ರತಿಭಾವಂತ ಸ್ಥಳೀಯ ಸ್ಪಿನ್ನರ್​ಗಳನ್ನು ತಮ್ಮದಾಗಿಸಿಕೊಳ್ಳುವುದು ಆರ್​ಸಿಬಿ ತಂಡದ ಯೋಜನೆಯಾಗಿದೆ.

ಇದನ್ನೂ ಓದಿ : Rohit Sharma : ನಾಯಕತ್ವ ಬದಲಾವಣೆ; ಮುಂಬಯಿ ಇಂಡಿಯನ್ಸ್​ಗೆ 4 ಲಕ್ಷ ಫಾಲೋಯರ್ಸ್ ನಷ್ಟ

ಇನ್ನು ಶ್ರೇಯಸ್​ ಗೋಪಾಲ್ ಅತ್ಯುತ್ತಮ ಲೆಗ್ ಸ್ಪಿನ್ನರ್. ವಿರಾಟ್​ ಕೊಹ್ಲಿಗೂ ಅವರ ಎಸೆತವನ್ನು ಎದುರಿಸಲು ಕಷ್ಟವಾಗುತ್ತದೆ. ಐಪಿಎಲ್​ನಲ್ಲಿ ಒಟ್ಟು ಮೂರು ಬಾರಿ ಅವರನ್ನು ಔಟ್​ ಮಾಡಿದ್ದಾರೆ ಗೋಪಾಲ್​.

2019 ರ ಐಪಿಎಲ್ ಋತುವಿನಲ್ಲಿ, ಶ್ರೇಯಸ್ ಗೋಪಾಲ್ ರಾಜಸ್ಥಾನ್ ರಾಯಲ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದರು. 2020 ರ ಋತುವಿನಲ್ಲಿ 14 ಪಂದ್ಯಗಳಲ್ಲಿ 10 ವಿಕೆಟ್​ಗಳೊಂದಿಗೆ ನೀರಸ ಪ್ರದರ್ಶನ ನೀಡಿದ ಅವರು, 2021 ರಲ್ಲಿ ತಮ್ಮ ಪ್ರದರ್ಶನದಲ್ಲಿ ಕುಸಿತವನ್ನು ಕಂಡರು. ಮೂರು ಪಂದ್ಯಗಳಲ್ಲಿ ವಿಕೆಟ್ ಪಡೆಯದೆ ಉಳಿದರು. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಸನ್ರೈಸರ್ಸ್ ಹೈದರಾಬಾದ್ 2022ರ ಮೆಗಾ ಹರಾಜಿನಲ್ಲಿ ಕರ್ನಾಟಕದ ಸ್ಪಿನ್ನರ್ ಅನ್ನು ತನ್ನ ಮೂಲ ಬೆಲೆಗೆ ಆಯ್ಕೆ ಮಾಡಿಕೊಂಡಿತ್ತು. ಆದರೆ 2023 ರ ಐಪಿಎಲ್ ಹರಾಜಿನಲ್ಲಿ ಯಾವುದೇ ಖರೀದಿದಾರರು ಅವರಿಗೆ ಸಿಗಲಿಲ್ಲ. ಅದಕ್ಕೆ ಕಾರಣ ಅದಕ್ಕಿಂತ ಹಿಂದಿನ ಆವೃತ್ತಿಯಲ್ಲಿ ಕೇವಲ ಒಂದು ಬಾರಿ ಆಡುವ ಹನ್ನೊಂದರಲ್ಲಿ ಕಾಣಿಸಿಕೊಂಡಿದ್ದರು..

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ಪರ ಆಡಿದ್ದ ಅವರು ಕೇವಲ 7 ಪಂದ್ಯಗಳಲ್ಲಿ 12 ವಿಕೆಟ್​​ಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದರು. ಪ್ರಸ್ತುತ ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ನಂತರ ಐಪಿಎಲ್ 2024 ಹರಾಜಿನಲ್ಲಿ ಖರೀದಿದಾರರನ್ನು ಆಕರ್ಷಿಸುವ ಭರವಸೆ ಅವರಿಗಿದೆ.

ಅಚ್ಚರಿಯ ನಿರ್ಧಾರ; ಪಾಂಡ್ಯಗೆ ಮುಂಬಯಿ ಇಂಡಿಯನ್ಸ್​ ನಾಯಕತ್ವ ಪಟ್ಟ

ಮಹತ್ವದ ಬೆಳವಣಿಗೆಯೊಂದರಲ್ಲಿ, ಮುಂಬೈ ಇಂಡಿಯನ್ಸ್ ಐಪಿಎಲ್ 2024 ಋತುವಿಗೆ ಫ್ರಾಂಚೈಸಿಗೆ ಹಿಂದಿರುಗಿದ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸಿದೆ. ರೋಹಿತ್ ಶರ್ಮಾ ಅವರ 10 ವರ್ಷಗಳ ನಾಯಕತ್ವದ ನಂತರ ಹಾರ್ದಿಕ್​ ತಂಡದ ಮುಂದಾಳತ್ವ ವಹಿಸಿಕೊಂಡಿದ್ದಾರೆ. 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಐಪಿಎಲ್ ಚಾಂಪಿಯನ್ಸ್ ಪಟ್ಟದ ಕಡೆಗೆ ಮುನ್ನಡೆಸಿದ ಹಾರ್ದಿಕ್, ಎರಡು ವರ್ಷಗಳ ನಂತರ ಮುಂಬೈ ಇಂಡಿಯನ್ಸ್​ ತಂಡಕ್ಕೆ ಮರಳಿದ್ದರು. ಪಾಂಡ್ಯ ಅವರ ನೇಮಕದ ಹೊರತಾಗಿಯೂ 10 ವರ್ಷ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಅವರು ನಾಯಕತ್ವದ ಹೊರತಾಗಿಯೂ ತಂಡದಲ್ಲಿ ಮುಂದುವರಿಯುವರೇ ಎಂದು ಕಾದು ನೋಡಬೇಕಾಗಿದೆ.

“ಇದು ಪರಂಪರೆಯನ್ನು ನಿರ್ಮಿಸುವ ಭಾಗವಾಗಿದೆ ಮತ್ತು ಭವಿಷ್ಯಕ್ಕೆ ನಿರ್ಧಾರವಾಗಿದೆ. ಈ ತತ್ವಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ” ಎಂದು ತಂಡದ ಜಾಗತಿಕ ಪ್ರದರ್ಶನ ಮುಖ್ಯಸ್ಥ ಮಹೇಲಾ ಜಯವರ್ಧನೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ರೋಹಿತ್ ಶರ್ಮಾ ಅವರ ಅಸಾಧಾರಣ ನಾಯಕತ್ವಕ್ಕಾಗಿ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ. 2013 ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಅವರ ಅಧಿಕಾರಾವಧಿ ಅಸಮಾನ್ಯವಾಗಿದೆ. ಅವರ ನಾಯಕತ್ವವು ತಂಡಕ್ಕೆ ಸಾಟಿಯಿಲ್ಲದ ಯಶಸ್ಸನ್ನು ತಂದುಕೊಟ್ಟಿದೆ ಮಾತ್ರವಲ್ಲ, ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿ ಅವರ ಸ್ಥಾನವನ್ನು ಭದ್ರಪಡಿಸಿದೆ ಎಂದು ಹೇಳಿದ್ದಾರೆ.

Exit mobile version