Site icon Vistara News

Shreyas Iyer : ಬೆನ್​ಸ್ಟೋಕ್ಸ್​​ಗೆ ಅವರದ್ದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ ಶ್ರೇಯಸ್ ಅಯ್ಯರ್​!

Shreyas Iyer

ಬೆಂಗಳೂರು : ವಿಶಾಖಪಟ್ಟಣಂನಲ್ಲಿ ಸೋಮವಾರ (ಫೆಬ್ರವರಿ 5) ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್​ನಲ್ಲಿ ಭಾರತ 106 ರನ್​ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ತಂಡದ ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-1 ಸಮಬಲ ಸಾಧಿಸಿದೆ. ಪಂದ್ಯದುದ್ದಕ್ಕೂ ಭಾರತ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೊಂದು ಶ್ರೇಯಸ್ ಅಯ್ಯರ್ (Shreyas Iyer) ಅವರ ರನ್​ಔಟ್​. ಎರಡನೇ ಇನ್ನಿಂಗ್ಸ್​ನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ರನ್ ಔಟ್ ಮಾಡಿದರು. ಈ ಮೂಲಕ ಅವರು ಮತ್ತೊಂದು ಬಾರಿ ತಮ್ಮ ಅದ್ಭುತ ಫೀಲ್ಡಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು.

ಮಧ್ಯಮ ಕ್ರಮಾಂಕದ ಕುಸಿತದ ನಂತರ ಇಂಗ್ಲೆಂಡ್ ಆಟದ ಪರಿಸ್ಥಿತಿಯನ್ನು ಬದಲಾಯಿಸಲು ಯತ್ನಿಸುತ್ತಿದ್ದಾಗ ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ನಾಯಕನನ್ನು ಪೆವಿಲಿಯನ್​ಗೆ ಕಳುಹಿಸಿದರು. 399 ರನ್​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ನಾಲ್ಕನೇ ದಿನದಾಟದ ಆರಂಭದಲ್ಲಿ ಮೇಲುಗೈ ಸಾಧಿಸಿತ್ತು. ಬೆನ್​ ಸ್ಟೋಕ್ಸ್ ಮತ್ತು ಬೆನ್ ಫೋಕ್ಸ್ ಎಚ್ಚರಿಕೆಯಿಂದ ಆಡುತ್ತಿದ್ದರು. ಶ್ರೇಯಸ್ ಅಯ್ಯರ್ ಅವರ ಡೈರೆಕ್ಟ್​ ಥ್ರೋ ಬೆನ್​ಸ್ಟೋಕ್ಸ್​​ ಅವರನ್ನು ಪೆವಿಲಿಯನ್​ಗೆ ಕಳಹಿಸಿತು. ಬೆನ್ ಸ್ಟೋಕ್ಸ್ ಔಟಾದ ಕಾರಣ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು.

ಶ್ರೇಯಸ್ ಅಯ್ಯರ್ ಅವರು ಸ್ಟೋಕ್ಸ್ ಅವರನ್ನು ಔಟ್ ಮಾಡಿದ ಬಳಿಕ ಗೇಲಿ ಮಾಡಿದರು. ಎರಡನೇ ಇನ್ನಿಂಗ್ಸ್​ನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಕ್ಯಾಚ್​ ಹಿಡಿದು ಔಟ್ ಮಾಡಿದ ಸ್ಟೋಕ್ಸ್ ಪ್ರೇಕ್ಷಕರತ್ತ ಬೆರಳು ತೋರಿಸುವ ಮೂಲಕ ಸಂಭ್ರಮಿಸಿದರು. ಇಂಗ್ಲೆಂಡ್ ನಾಯಕ ಡ್ರೆಸ್ಸಿಂಗ್ ರೂಮ್ ಕಡೆಗೆ ನಡೆಯುತ್ತಿದ್ದಾಗ ಭಾರತದ ಬ್ಯಾಟರ್​​ ಕೂಡ ಅದೇ ರೀತಿ ಸಂಭ್ರಮಿಸಿದರು. 106 ರನ್​ಗಳ ಗೆಲುವಿನ ಮೂಲಕ ಭಾರತ 5 ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದೆ.

ರೋಹಿತ್ ಶರ್ಮಾ ಹಿಡಿದ ಈ ಕ್ಯಾಚ್​ಗೆ ಕ್ರಿಕೆಟ್ ಕ್ಷೇತ್ರದ ಮೆಚ್ಚುಗೆ, ಇಲ್ಲಿದೆ ವಿಡಿಯೊ

ವಿಶಾಖಪಟ್ಟಣಂ: ಇಲ್ಲಿನ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ (Ind vs eng) ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 106 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಓಲಿ ಪೋಪ್ (Ollie Pope) ಕ್ಯಾಚ್ ಹಿಡಿದು ಕ್ರಿಕೆಟ್​ ಕ್ಷೇತ್ರದ ಮೆಚ್ಚುಗೆ ಗಳಿಸಿದೆ.

ಪಂದ್ಯದಲ್ಲಿ ಆರ್ ಅಶ್ವಿನ್ ಸ್ಟಂಪ್​ಗೆ ಹತ್ತಿರವಾಗಿ ಬೌಲಿಂಗ್ ಮಾಡಿದರು. ಪೋಪ್ ಅದನ್ನು ಕಟ್ ಆಡಲು ಯತ್ನಿಸಿದರು. ಚೆಂಡು ಅಂಚಿಗೆ ತಾಗಿತು. ಚೆಂಡು ಮೊದಲ ಸ್ಲಿಪ್​ನಲ್ಲಿದ್ದ ರೋಹಿತ್ ಅವರ ಎಡಕ್ಕೆ ಭುಜದ ಎತ್ತರದಲ್ಲಿ ವೇಗವಾಗಿ ಹಾರಿತು. ಗಮನಾರ್ಹ ವೇಗದಲ್ಲಿ ರೋಹಿತ್ ಚೆಂಡನ್ನು ಹಿಡಿದರು ಅಲ್ಲದೆ ಪೋಪ್ ಅವರನ್ನು ಯಶಸ್ವಿಯಾಗಿ ಪೆವಿಲಿಯನ್​ಎ ಕಳುಹಿಸಿದರು.

ಭಾರತೀಯ ಕ್ರಿಕೆಟಿಗ ಮತ್ತು ಪಂದ್ಯದ ವೀಕ್ಷಕ ವಿವರಣೆಗಾರ ದಿನೇಶ್ ಕಾರ್ತಿಕ್​ ಈ ಕ್ಯಾಚ್​ ಅನ್ನು ಅದ್ಭುತ ಎಂದು ಬಣ್ಣಿಸಿದರು. ರೋಹಿತ್​ಗೆ ಚೆಂಡನ್ನು ಸ್ವೀಕರಿಸಲು ಒಂದು ಸೆಕೆಂಡಿಗಿಂತ ಕಡಿಮೆ ಅವಧಿ ಸಾಕಾಯಿತು ಎಂಬುದನ್ನು ಲೆಕ್ಕಾಚಾರ ಸಮೇತ ತೋರಿಸಿದರು. ನಿಖರವಾಗಿ 0.45 ಸೆಕೆಂಡುಗಳಲ್ಲಿ ಚೆಂಡು ರೋಹಿತ್​ ಬೊಗಸೆ ಸೇರಿತ್ತು. ಇದು ರೋಹಿತ್ ಅವರ ಅಸಾಧಾರಣ ಸ್ಲಿಪ್ ಫೀಲ್ಡಿಂಗ್ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.

Exit mobile version