Site icon Vistara News

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಕಿಕ್​ ಔಟ್​

Shreyas Iyer, Ishan Kishan

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2023-24ರ ಋತುವಿಗೆ (ಅ.1, 2023 ರಿಂದ ಸೆ.30, 2024 ರವರೆಗೆ) ಟೀಮ್ ಇಂಡಿಯಾ (ಹಿರಿಯ ಪುರುಷರ) ವಾರ್ಷಿಕ ಆಟಗಾರರ(BCCI Annual Contract) ಒಪ್ಪಂದ ಪಟ್ಟಿಯನ್ನು ಇಂದು ಪ್ರಕಟಿಸಿದೆ. ದೇಶೀಯ ಕ್ರಿಕೆಟ್​ ಆಡಲು ಅಸಡ್ಡೆ ತೋರಿದ ಯುವ ಆಟಗಾರರಾದ ಇಶಾನ್​ ಕಿಶನ್(Ishan Kishan)​ ಮತ್ತು ಶ್ರೇಯಸ್​ ಅಯ್ಯರ್(Shreyas Iyer)​ ಅವರನ್ನು ಈ ಒಪ್ಪಂದ ಪಟ್ಟಿಯಿಂದ ಬಿಸಿಸಿಐ ಕೈಬಿಟ್ಟಿದೆ.

“ಈ ಸುತ್ತಿನ ಶಿಫಾರಸುಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಲಾಗಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ” ಎಂದು ಬಿಸಿಸಿಐ ತನ್ನ ಹೇಳಿಯಲ್ಲಿ ತಿಳಿಸಿದೆ. ಈ ಮೂಲಕ ಆಯ್ಕೆ ಸಮಿತಿ ಮತ್ತು ಕೋಚ್​ ಅವರ ಮಾತುಗಳಿಗೆ ಕ್ಯಾರೆ ಎನ್ನದೆ ದೇಶೀಯ ಕ್ರಿಕೆಟ್​ ಆಡಲು ನಿರಾಕರಿಸಿದ್ದ ಉಭಯ ಆಟಗಾರರಿಗೆ ಬಿಸಿಸಿಐ ತಕ್ಕ ಪಾಠ ಕಲಿಸಿದೆ.

ಉಭಯ ಆಟಗಾರರನ್ನು ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಕೈಬಿಡುವ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿದ್ದವು. ಇಶಾನ್ ಕಿಶನ್ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲಿ ವಿರಾಮ ತೆಗೆದುಕೊಂಡಿದ್ದರು. ಬಳಿಕ ಅಫ್ಘಾನಿಸ್ತಾನ ವಿರುದ್ಧದ ಟಿ 20 ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರಲಿಲ್ಲ. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ರಾಷ್ಟ್ರೀಯ ತಂಡಕ್ಕೆ ಮರಳಲು ಇಶಾನ್ ಕಿಶನ್ ದೇಶೀಯ ರಣಜಿ ಟೂರ್ನಿಯ ಕೆಲ ಪಂದ್ಯಗಳನ್ನು ಆಡುವಂತೆ ಸೂಚನೆ ನೀಡಿದ್ದರು. ಆದಾಗ್ಯೂ, ಅವರು ತಮ್ಮ ರಾಜ್ಯ ತಂಡ ಜಾರ್ಖಂಡ್‌ಗಾಗಿ ರಣಜಿ ಟ್ರೋಫಿ ಆಡಿರಲಿಲ್ಲ. ಬದಲಾಗಿ ಐಪಿಎಲ್​ಗಾಗಿ ಹಾರ್ದಿಕ್​ ಪಾಂಡ್ಯ ಜತೆ ಅಭ್ಯಾಸ ನಡೆಸಿದ್ದರು.

ಇಶಾನ್​ ಅವರ ಈ ನಡೆಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಕೂಡ ಎಚ್ಚರಿಕೆ ನೀಡಿದ್ದರು. ಇದಕ್ಕೂ ಕೂಡ ಬಗ್ಗದ ಇಶಾನ್​ ಇದೀಗ ಬಿಸಿಸಿಐ ವಾರ್ಷಿಕ ಆಟಗಾರರ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಕೆಲವು ದಿನಗಳ ಹಿಂದೆ “ಕಿಶನ್ ಮತ್ತು ಅಯ್ಯರ್ ಅವರನ್ನು ಗುತ್ತಿಗೆ ಪಟ್ಟಿಯಿಂದ ಪಟ್ಟಿಯಿಂದ ಹೊರಗಿಡುವ ಸಾಧ್ಯತೆಯಿದೆ. ಏಕೆಂದರೆ ಬಿಸಿಸಿಐನ ಆದೇಶದ ಹೊರತಾಗಿಯೂ ಇಬ್ಬರೂ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿಲ್ಲ” ಎಂದು ವರದಿ ಮಾಡಿತ್ತು. ಇದೀಗ ಈ ವರದಿ ನಿಜವಾಗಿದೆ. ಉಭಯ ಆಟಗಾರರನ್ನು ಕೂಡ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.

ಗ್ರೇಡ್ Aನಲ್ಲಿ ನಾಲ್ಕು ಆಟಗಾರರು ಕಾಣಿಸಿಕೊಂಡಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡು ಸರಿ ಸುಮಾರು ಒಂದು ವರ್ಷಗಳಿಗಿಂತಲೂ ಕ್ರಿಕೆಟ್​ನಿಂದ ದೂರ ಉಳಿದಿರುವ ರಿಷಭ್​ ಪಂತ್​ ಅವರು ಗ್ರೇಡ್​ ‘ಬಿ’ಯಲ್ಲಿ ಸ್ಥಾನ ಪಡೆದಿದ್ದಾರೆ.

ಬಿಸಿಸಿಐ ಒಪ್ಪಂದದ ಆಟಗಾರರ ಸಂಪೂರ್ಣ ಪಟ್ಟಿ


ಗ್ರೇಡ್ A+ (4 ಕ್ರಿಕೆಟಿಗರು): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಮತ್ತು ರವೀಂದ್ರ ಜಡೇಜಾ.

ಗ್ರೇಡ್ ಎ (6 ಕ್ರಿಕೆಟಿಗರು): ಆರ್ ಅಶ್ವಿನ್, ಮೊ. ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.

ಗ್ರೇಡ್ ಬಿ (5 ಕ್ರಿಕೆಟಿಗರು) ಸೂರ್ಯಕುಮಾರ್ ಯಾದವ್, ರಿಷಭ್​ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.

ಗ್ರೇಡ್ ಸಿ (15 ಕ್ರಿಕೆಟಿಗರು) ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.

Exit mobile version