Site icon Vistara News

Ind vs pak : ಡೆಂಗ್ಯೂ ದೂರ; ಗಿಲ್​ ಮುಖದಲ್ಲಿ ನಗು, ಟೀಮ್ ಇಂಡಿಯಾಗೂ ಸಂತಸ

Shubman Gill

ನವದೆಹಲಿ: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 14) ನಡೆಯಲಿರುವ ಭಾರತ ಮತ್ತು ಪಾ ನಡುವಿನ ವಿಶ್ವಕಪ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಭರ್ಜರಿ ಉತ್ತೇಜನ ಸಿಕ್ಕಿದೆ. ಭಾರತದ ಆರಂಭಿಕ ಬ್ಯಾ ಶುಬ್ಮನ್ ಗಿಲ್ ಡೆಂಗ್ಯೂನಿಂದ ಚೇತರಿಸಿಕೊಂಡಿದ್ದಾರೆ. ಅವರು ಟೂರ್ನಿಯ ದೊಡ್ಡ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಪಾಕಿಸ್ತಾನ ವಿರುದ್ಧ ಗಿಲ್ ಆಡುವ ಸಾಧ್ಯತೆ ಶೇ.99ರಷ್ಟು ಇದೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಹೇಳಿದ್ದಾರೆ. ಭಾರತದ ಸ್ಟಾರ್ ಇಶಾನ್ ಕಿಶನ್ ಅವರಿಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ.

ರೋಹಿತ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಗಿಲ್ ನೆಟ್ಸ್​ನಲ್ಲಿ ಒಂದು ಗಂಟೆ ಬ್ಯಾಟಿಂಗ್ ಮಾಡಿದ್ದರು. ಫೀಲ್ಡಿಂಗ್ ಅಭ್ಯಾಸ ಮಾಡುವಾಗ ಆರಾಮದಾಯಕವಾಗಿ ಕಾಣುತ್ತಿದ್ದರು. ಆರಂಭಿಕ ಆಟಗಾರ ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಶಮಿ ಅವರನ್ನು ನೆಟ್ಸ್​ನಲ್ಲಿ ಎದುರಿಸಿದರು. ಹೈಡ್ರೇಟ್ ಆಗಿ ಉಳಿಯಲು ಸಮಯೋಚಿತ ಪಾನೀಯ ವಿರಾಮಗಳನ್ನು ತೆಗೆದುಕೊಂಡರು. ಗಿಲ್ ಆರಂಭದಲ್ಲಿ ಸ್ವಲ್ಪ ಚೆಂಡಿನೊಂದಿಗೆ ಸಂಪರ್ಕ ಕಳೆದಕೊಂಡರೂ ತಕ್ಷಣವೇ ಲಯವನ್ನು ಕಂಡುಕೊಂಡರು. ಇಬ್ಬರೂ ಬೌಲರ್ಗಳನ್ನು ಆರಾಮದಾಯಕವಾಗಿ ಎದುರಿಸಿದರು.

ಇದನ್ನೂ ಓದಿ : ICC World Cup 2023 : ಬಾಂಗ್ಲಾದೇಶ ವಿರುದ್ಧ ನ್ಯೂಜಿಲ್ಯಾಂಡ್​ಗೆ 8 ವಿಕೆಟ್​ ವಿಜಯ

ಭಾರತದ ಯುವ ಓಪನರ್ ಲಭ್ಯತೆ ಕುರಿತ ಅಂತಿಮ ನಿರ್ಧಾರವನ್ನು ಪಂದ್ಯಕ್ಕೆ ಸ್ವಲ್ಪ ಮೊದಲು ತೆಗೆದುಕೊಳ್ಳಲಾಗುವುದು ಎಂದು ರೋಹಿತ್ ಶರ್ಮಾ ಹೇಳಿದರು. ಶೇ.99ರಷ್ಟು ಅವರು (ಗಿಲ್) ಆಡಲಿದ್ದಾರೆ. ನಾವು ಅದರ ಬಗ್ಗೆ ನಾಳೆ (ಶನಿವಾರ) ನೋಡುತ್ತೇವೆ, “ಎಂದು ರೋಹಿತ್ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಚೆನ್ನೈನಿಂದ ಅಹಮದಾಬಾದ್​​ಗೆ ಪ್ರಯಾಣ

ಡೆಂಗ್ಯೂ ರೋಗನಿರ್ಣಯದ ನಂತರ ಗಿಲ್ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಅವರು ಗುರುವಾರ ಬ್ಯಾಟಿಂಗ್ ಅಭ್ಯಾಸದಲ್ಲಿ ಭಾಗವಹಿಸಲು ತಂಡದೊಂದಿಗೆ ಅಹಮದಾಬಾದ್​ಗೆ ಪ್ರಯಾಣಿಸಿದ್ದರು.

ಇದನ್ನೂ ಓದಿ : ICC World Cup 2023 : 31 ವರ್ಷಗಳ ಹಳೆಯ ದಾಖಲೆ ಮುರಿದ ಜೋ ರೂಟ್​

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಲು ಇಷ್ಟಪಡುವ ಶುಭ್​ಮನ್ ಗಿಲ್​ ಲಭ್ಯತೆಯಿಂದ ತಂಡಕ್ಕೆ ಹೆಚ್ಚಿನ ನೆರವು ದೊರೆಯಲಿದೆ. 23ರ ಹರೆಯದ ಆಟಗಾರ ಈ ಸ್ಟೇಡಿಯಮ್​ನಲ್ಲಿ 93ರ ಸರಾಸರಿಯಲ್ಲಿ ಟಿ20 ಹಾಗೂ ಟೆಸ್ಟ್ ಕ್ರಿಕೆಟ್​ನಲ್ಲಿ ಎರಡು ಶತಕಗಳನ್ನು ಬಾರಿಸಿದ್ದಾರೆ. ಗಿಲ್ ಈ ವರ್ಷ ಗಮನಾರ್ಹ ಫಾರ್ಮ್​ನಲ್ಲಿದ್ದಾರೆ. 20 ಏಕದಿನ ಪಂದ್ಯಗಳಲ್ಲಿ 72.35 ಸರಾಸರಿಯಲ್ಲಿ 1,230 ರನ್ ಗಳಿಸಿದ್ದಾರೆ. ಅವರು ಈ ವರ್ಷ ಐದು ಶತಕಗಳು ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ, ಅತ್ಯುತ್ತಮ 208 ರನ್ ಗಳಿಸಿದ್ದಾರೆ.

ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್, ಕೆ.ಎಲ್​ ರಾಹುಲ್​ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.

ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಖರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರವೂಫ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್.

Exit mobile version