Site icon Vistara News

Shubhman Gill : ಭಾರತ ತಂಡಕ್ಕೆ ಶುಭ್​ಮನ್​ ಗಿಲ್ ನಾಯಕ?

Shubhman Gill

ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಟಿ20 ಐ ಸರಣಿಗೆ ಭಾರತದ ತಂಡವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೂ ನಾಯಕತ್ವದ ರೇಸ್​ನಲ್ಲಿ ಹೊಸ ಸುಳಿವು ಸಿಕ್ಕಿದೆ. ಅಫ್ಘಾನಿಸ್ತಾನದ ರಶೀದ್ ಖಾನ್ ಎದುರು ಭಾರತದ ನಾಯಕನಾಗಿ ಆರಂಭಿಕ ಆಟಗಾರ ಶುಬ್ಮನ್ ಗಿಲ್ (Shubhman Gill) ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

2024ರ ಟಿ20 ವಿಶ್ವಕಪ್ ವರೆಗೆ ರೋಹಿತ್ ಶರ್ಮಾ ಮುಂದುವರಿಯುತ್ತಾರೆಯೇ ಎಂಬ ಬಗ್ಗೆ ಕುತೂಹಲ ಇನ್ನೂ ಇದೆ ಆದರೆ, ಹಿಟ್​ಮ್ಯಾನ್​​ ಅವರು ಮುಂದಿನ ವರ್ಷದ ಈವೆಂಟ್​​ನಲ್ಲಿ ಇರುತ್ತಾರೆಯೇ ಇರುತ್ತಾರೆಯೇ ಎಂಬುದು ಗೊತ್ತಿಲ್ಲ. ಹೀಗಾಗಿ ನಾಯಕತ್ವದ ಬಗ್ಗೆ ಹೆಚ್ಚಿನ ಅವಕಾಶಗಳು ಇಲ್ಲ.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಟಿ20 ತಂಡದ ನಾಯಕರಾದರು. ಆದರೆ ಅಕ್ಟೋಬರ್​ನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಅವರು ಪಾದದ ಗಾಯದಿಂದ ಅವರು ಹೊರಗುಳಿದಿದ್ದರು. ಅವರು ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಐಪಿಎಲ್ 2024 ರಲ್ಲಿ ನೇರವಾಗಿ ಮರಳುವ ಸಾಧ್ಯತೆಯಿದೆ.

ಭಾರತಕ್ಕೆ ಅಂಕ ಪಟ್ಟಿಯಲ್ಲಿಯೂ ಮೇಲೇರುವ ಸವಾಲು

ಕೇಪ್​ ಟೌನ್​: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ(India vs South Africa 2nd Test) ಟೆಸ್ಟ್​ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿರುವ ಭಾರತ ಇದೀಗ ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯಲು ಸಿದ್ಧವಾಗಿದೆ. ಬುಧವಾರ ಆರಂಭಗೊಳ್ಳಲಿರುವ ದ್ವಿತೀಯ ಟೆಸ್ಟ್ ಪಂದ್ಯ ರೋಹಿತ್​ ಪಡೆಗೆ ಸರಣಿ ಸೋಲು ತಪಿಸುವ, ಜತೆಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಮತ್ತೆ ಮೇಲೇರುವ 2 ಸವಾಲುಗಳಿವೆ.

ಇದನ್ನೂ ಓದಿ : IPL 2024 : ತವರು ಮೈದಾನವನ್ನೇ ಬದಲಿಸಿದ ಪಂಜಾಬ್​ ಕಿಂಗ್ಸ್​, ಮೊಹಾಲಿಯಲ್ಲಿಲ್ಲ ಪಂದ್ಯ!

ಭಾರತದ ಬ್ಯಾಟಿಂಗ್​ ವಿಭಾಗ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಾಣದ ಹೊರತು ಈ ಪಂದ್ಯವನ್ನು ಗೆಲ್ಲುವುದು ಅಸಾಧ್ಯ. ಬೌನ್ಸ್​ ಎಸೆತಗಳನ್ನು ಅನಗತ್ಯವಾಗಿ ಹೊಡೆಯುವ ಪ್ರಯತ್ನಕ್ಕೆ ಕೈ ಹಾಕಬಾರದು. ಮೊದಲ ಪಂದ್ಯದಲ್ಲಿಯೂ ಶ್ರೇಯಸ್​ ಅಯ್ಯರ್​, ಜೈಸ್ವಾಲ್​, ರೋಹಿತ್​ ಶರ್ಮ ಬೌನ್ಸ್​ ಎಸೆತವನ್ನು ಎದುರಿಸಲು ವಿಫಲವಾಗಿ ವಿಕೆಟ್​ ಕೈಚೆಲ್ಲಿದ್ದರು. ಆದ್ದರಿಂದ ಈ ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡುವುದು ಅಗತ್ಯ.

ವಿಕೆಟ್​ ಕೀಪಿಂಗ್​ ಜವಾಬ್ದಾರಿ ಹೊತ್ತಿರುವ ಕನ್ನಡಿಗ ಕೆ.ಎಲ್​ ರಾಹುಲ್​ ಮೊದಲ ಇನಿಂಗ್ಸ್​ನಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ ಶತಕ ಬಾರಿಸುವ ಮೂಲಕ ತಂಡಕ್ಕೆ ನರೆವಾಗಿದ್ದರು. ಆದರೆ, ದ್ವಿತೀಯ ಇನಿಂಗ್ಸ್​ನಲ್ಲಿ ವಿಫರಾಗಿದ್ದರು. ಈ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್​ ಮೇಲೆ ತಂಡ ಹೆಚ್ಚಿನ ಬರವಸೆ ಇರಿಸಿದೆ. ವಿರಾಟ್​ ಕೊಹ್ಲಿ ಎಡಗೈ ವೇಗಿ ಬರ್ಗರ್​ ಎಸೆತವನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಸೋಮವಾರ ಹೆಚ್ಚುವರಿ ಬ್ಯಾಟಿಂಗ್​ ಅಭ್ಯಾಸ ಕೂಡ ನಡೆಸಿದ್ದಾರೆ. ಒಟ್ಟಾರೆ ಬ್ಯಾಟಿಂಗ್​ ಮೇಲೆ ಭಾರತೀಯ ಬ್ಯಾಟರ್​ಗಳು ಹೆಚ್ಚಿನ ಫೋಕಸ್​ ಮಾಡಿದಂತಿದೆ.

Exit mobile version