Site icon Vistara News

Shubhman Gill : ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದ ಶುಭ್​ಮನ್​ ಗಿಲ್​​

Shubhman Gil

ಬೆಂಗಳೂರು: ಭಾರತ ತಂಡ ಯುವ ಬ್ಯಾಟರ್​ ಶುಬ್ಮನ್ ಗಿಲ್ (Shubhman Gill) 2023ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 2000 ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ 2023 ರ ಪಂದ್ಯದ ವೇಳೆ ಬಲಗೈ ಬ್ಯಾಟರ್​ ಈ ಮೈಲಿಗಲ್ಲನ್ನು ತಲುಪಿದರು.

ಯುವ ಆಟಗಾರನಿಗೆ ಈ ಸಾಧನೆ ಮಾಡಲು 17 ರನ್​ಗಳ ಅಗತ್ಯವಿತ್ತು. ವೇಗದಲ್ಲಿ ಬ್ಯಾಟ್ ಮಾಡಿದ ಅವರು ಗುರಿ ದಾಟಿದರು. ಗಿಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 1000 ಕ್ಕೂ ಹೆಚ್ಚು ರನ್ ಗಳಿಸಿದ ಇತರ ಭಾರತೀಯ ಬ್ಯಾಟರ್​​ಗಳಾಗಿದ್ದಾರೆ.

ಕುಸಾಲ್ ಮೆಂಡಿಸ್, ಡ್ಯಾರಿಲ್ ಮಿಚೆಲ್, ಮುಹಮ್ಮದ್ ವಸೀಮ್, ಬಾಬರ್ ಅಜಮ್, ಮಾರ್ನಸ್ ಲಾಬುಶೇನ್, ಏಡೆನ್ ಮಾರ್ಕ್ರಮ್, ಟ್ರಾವಿಸ್ ಹೆಡ್, ಬಾಂಗ್ಲಾದೇಶದ ನಜ್ಮುಲ್ ಹುಸೇನ್ ಶಾಂಟೊ, ಆಸಿಫ್ ಖಾನ್, ಡೆವೊನ್ ಕಾನ್ವೇ, ಹ್ಯಾರಿ ಟೆಕ್ಟರ್, ಮೊಹಮ್ಮದ್ ರಿಜ್ವಾನ್, ಪಥುಮ್ ನಿಸ್ಸಾಂಕಾ, ಡೇವಿಡ್ ವಾರ್ನರ್, ದಿಮುತ್ ಕರುಣರತ್ನೆ, ಟಾಮ್ ಲಾಥಮ್, ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್, ಹ್ಯಾರಿ ಬ್ರೂಕ್, ಧನಂಜಯ ಡಿ ಸಿಲ್ವಾ, ಉಸ್ಮಾನ್ ಖವಾಜಾ, ಟೆಂಬಾ ಬವುಮಾ, ಡೇವಿಡ್ ಮಲಾನ್. ಸದೀರಾ ಸಮರವಿಕ್ರಮ, ಮುಷ್ಫಿಕರ್ ರಹೀಮ್, ಬೆನ್ ಸ್ಟೋಕ್ಸ್, ಲಿಟನ್ ದಾಸ್ ಮತ್ತು ಕ್ವಿಂಟನ್ ಡಿ ಕಾಕ್ 100 ರನ್​ಗಳ ಸಾಧನೆ ಮಾಡಿದ ಇತರ ಬ್ಯಾಟರ್​ಗಳು.

43 ಪಂದ್ಯಗಳಲ್ಲಿ ಸಾಧನೆ

ಈ ವರ್ಷ 43 ಪಂದ್ಯಗಳನ್ನಾಡಿರುವ ಗಿಲ್, 49.60ರ ಸರಾಸರಿಯಲ್ಲಿ 2034 ರನ್ ಗಳಿಸಿದ್ದು 101.80ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದರಲ್ಲಿ ಏಳು ಶತಕಗಳು ಹಾಗೂ 9 ಅರ್ಧ ಶತಕಗಳು ಸೇರಿಕೊಂಡಿವೆ. ಅದೇ ರೀತಿ ಈ ವರ್ಷ ಏಕದಿನ ಕ್ರಿಕೆಟ್​​ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕೊಹ್ಲಿ, ನಿಸ್ಸಾಂಕಾ, ರೋಹಿತ್, ಮಿಚೆಲ್, ಬಾಬರ್ ಮತ್ತು ರಿಜ್ವಾನ್ ಅವರೊಂದಿಗೆ ಈ ವರ್ಷ ಏಕದಿನ ಪಂದ್ಯಗಳಲ್ಲಿ 1000 ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿದ್ದಾರೆ.

ಸಚಿನ್​, ಹೇಡನ್ ದಾಖಲೆ ಸರಿಗಟ್ಟಿದ ಗಿಲ್​

ಈ ಮಧ್ಯೆ, ಗಿಲ್ 2023 ರಲ್ಲಿ ತಮ್ಮ 27 ನೇ ಇನ್ನಿಂಗ್ಸ್​ಗಳಲ್ಲಿ 1500 ಏಕದಿನ ರನ್​ಗಳ ಪೂರೈಸಿದ್ದಾರೆ, ಈ ಮೂಲಕ ಸಚಿನ್ ತೆಂಡೂಲ್ಕರ್ (27) ಮತ್ತು ಮ್ಯಾಥ್ಯೂ ಹೇಡನ್ (27) ಅವರೊಂದಿಗೆ ಕ್ಯಾಲೆಂಡರ್ ವರ್ಷದಲ್ಲಿ ವೇಗವಾಗಿ 1500 ಏಕದಿನ ರನ್ ಗಳಿಸಿದ ಜಂಟಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ : Virat Kohli: ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ರಾರಾಜಿಸಿದ ಕಿಂಗ್​ ಕೊಹ್ಲಿ ಕಟೌಟ್

ಏಕದಿನ ಮಾದರಿಯಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಹಶೀಮ್ ಆಮ್ಲಾ ದಾಖಲೆಯನ್ನು ಗಿಲ್ ಮುರಿದಿದ್ದರು. ಇತ್ತೀಚೆಗೆ, ಅವರು ಏಕದಿನ ಪಂದ್ಯಗಳಲ್ಲಿ ನಂ.1 ಬ್ಯಾಟರ್​ ಆಗಿ ಬಾಬರ್ ಪಾರಮ್ಯವನ್ನು ಕೊನೆಗೊಳಿಸಿದ್ದರು. ಇದಲ್ಲದೆ, ಎಂಎಸ್ ಧೋನಿ ನಂತರ ಏಕದಿನ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕವನ್ನು ತಲುಪಿದ ಎರಡನೇ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. ಈ ವರ್ಷದ ಆರಂಭದಲ್ಲಿ, ಯುವ ಆಟಗಾರ ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಬಾರಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದರು.

Exit mobile version