ಧರ್ಮಶಾಲಾ: ಭಾರತ ತಂಡದ ಯುವ ಬ್ಯಾಟರ್ ಶುಬ್ಮನ್ ಗಿಲ್ (Shubman Gill) ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ವೇಗವಾಗಿ 2000 ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಭಾನುವಾರ ಪಾತ್ರರಾಗಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಕಪ್ ಪಂದ್ಯ ವೇಳೆ ಅವರು ಈ ಸಾಧನೆ ಮಾಡದಿದ್ದಾರೆ. ಅವರು ಏಕ ದಿನ ಕ್ರಿಕೆಟ್ನಲ್ಲಿ 38 ಇನಿಂಗ್ಸ್ಗಳಲ್ಲಿ ಎರಡು ಸಹಸ್ರ ರನ್ಗಳ ಗಡಿ ದಾಟಿದ ಸಾಧನೆ ಮಾಡಿದ್ದಾರೆ.
2011 ರಲ್ಲಿ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ ತಮ್ಮ 40ನೇ ಇನ್ನಿಂಗ್ಸ್ನಲ್ಲಿ 2000 ರನ್ಗಳ ದಾಖಲೆ ಮಾಡಿದ್ದರು. ಹೀಗಾಗಿ ಕಳೆದ 12 ವರ್ಷಗಳ ಅವಧಿಯಲ್ಲಿ ಅವರೇ ಅತಿ ವೇಗದ 2000 ರನ್ಗಳ ಸರದಾರ ಎನಿಸಿಕೊಂಡಿದ್ದರು. ಇದೀಗ ಗಿಲ್ ಆ ದಾಖಲೆಯನ್ನು ಮುರಿದಿದ್ದಾರೆ. ಗಿಲ್ ಇನ್ನೂ ಎರಡು ಕಡಿಮೆ ಇನಿಂಗ್ಸ್ಗಳನ್ನು ಆಡಿದ್ದಾರೆ.
ಬಲಗೈ ಬ್ಯಾಟರ್ ಶುಬ್ಮನ್ ಗಿಲ್ ಭಾರತ ಪರವಾಗಿ ಅತಿ ವೇಗದ 2000 ರನ್ ಬಾರಿಸಿ ಖ್ಯಾತಿ ಪಡೆದಿದ್ದ ಧವನ್ ಅವರ ದಾಖಲೆಯನ್ನೂ ಮುರಿದಿದ್ದಾರೆ. 2014ರ ನವೆಂಬರ್ 9ರಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಧವನ್ 2000 ರನ್ಗಳ ಗಡಿ ದಾಟಿದ್ದರು. ಅದಕ್ಕಾಗಿ ಅವರು 48 ನೇ ಇನಿಂಗ್ಸ್ ತೆಗೆದುಕೊಂಡಿದ್ದರು.
14 ರನ್ಗಳ ಅಗತ್ಯವಿತ್ತು
ಗಿಲ್ ದಾಖಲೆ ಬಗ್ಗೆ ಹೇಳುವುದಾದರೆ ನ್ಯೂಜಿಲ್ಯಾಂಡ್ ವಿರುದ್ಧದದ ಪಂದ್ಯದಕ್ಕೆ ಮೊದಲ ಈ ಮೈಲಿಗಲ್ಲನ್ನು ತಲುಪಲು ಅವರಿಗೆ ಕೇವಲ 14 ರನ್ಗಳ ಅಗತ್ಯವಿತ್ತು. ಅವರು ಅದನ್ನು ಅತ್ಯಂತ ಸುಲಭವಾಗಿ ದಾಟಿದರು. ಏಳನೇ ಓವರ್ನ ನಾಲ್ಕನೇ ಎಸೆತದಲ್ಲಿ, ಶುಬ್ಮನ್ ಗಿಲ್, ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಅವರ ಎಸೆತವನ್ನು ಕವರ್ ಡ್ರೈವ್ ಮೂಲಕ ಬೌಂಡರಿ ಗೆರೆ ದಾಟಿಸಿ ಈ ದಾಖಲೆ ಬರೆದರು.
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ ಶುಬ್ಮನ್ ಗಿಲ್ ಬ್ಯಾಟಿಂಗ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅನಾರೋಗ್ಯದ ಕಾರಣ ಯುವ ಆಟಗಾರ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ತಂಡಕ್ಕೆ ಮರಳಿದ್ದರು. ಅಲ್ಲಿ ಅವರು ಮಿಂಚಲಿಲ್ಲ. ಶಾಹೀನ್ ಶಾ ಅಫ್ರಿದಿ ಅವರ ವಿಕೆಟ್ ಉರುಳಿಸಿದ್ದರು.
ಇದನ್ನೂ ಓದಿ: Rohit Sharma : ಗಾಯದ ನೋವಿಗೆ ಮೈದಾನವನ್ನೇ ಶಪಿಸಿದ ರೋಹಿತ್ ಶರ್ಮಾ
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 19 ರಂದು ನಜ್ಮುಲ್ ಹುಸೇನ್ ಶಾಂಟೊ ನೇತೃತ್ವದ ಬಾಂಗ್ಲಾದೇಶವನ್ನು ಭಾರತ ಎದುರಿಸಿದಾಗ ಗಿಲ್ ಹಾಲಿ ವಿಶ್ವ ಕಪ್ನಲ್ಲಿ ತಮ್ಮ ಮೊದಲ ಅರ್ಧ ಶತಕವನ್ನು ಬಾರಿಸಿದ್ದರು. ಅವರು 55 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ಗಳೊಂದಿಗೆ 53 ರನ್ ಗಳಿಸಿದ್ದರು. ಅಲ್ಲಿ ಮೆಹಿದಿ ಹಸನ್ ಮಿರಾಜ್ ಅವರ ವಿಕೆಟ್ ಪಡೆದರು.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗಿಲ್ 26 ರನ್ ಗಳಿಸಿ ವೇಗದ ಬೌಲರ್ ಲಾಕಿ ಫರ್ಗುಸನ್ ಅವರ 14ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು