Site icon Vistara News

IND vs ZIM ODI | ಜಿಂಬಾಬ್ವೆ ವಿರುದ್ಧ ಶತಕ ಬಾರಿಸಿ ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಶುಬ್ಮನ್‌ ಗಿಲ್‌

ICC ODI RANKING

ಹರಾರೆ : ಭಾರತ ತಂಡದ ಯುವ ಬ್ಯಾಟರ್‌ ಶುಬ್ಮನ್‌ ಗಿಲ್‌ ಭಾರತದ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಬ್ಯಾಟಿಂಗ್‌ ದಾಖಲೆಯೊಂದನ್ನು ಮುರಿದಿದ್ದಾರೆ. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ (IND vs ZIM ODI) ಮೂರನೇ ಪಂದ್ಯದಲ್ಲಿ ೧೩೦ ರನ್‌ ಬಾರಿಸುವ ಮೂಲಕ ಈ ಅವರು ಈ ಸಾಧನೆ ಮಾಡಿದ್ದಾರೆ.

ಶುಬ್ಮನ್‌ ಗಿಲ್‌ ಅವರು ೮೨ ಎಸೆತಗಳಲ್ಲಿ ಶತಕ ಪೂರೈಸುವ ಜತೆಗೆ ತಮ್ಮ ೨೦ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಬಾರಿಸಿದರು. ೯೭ ಎಸೆತಗಳಲ್ಲಿ ೧೩೦ ರನ್‌ ಬಾರಿಸಿದ ಅವರು ಜಿಂಬಾಬ್ವೆ ನೆಲದಲ್ಲಿ ಆ ತಂಡದ ವಿರುದ್ಧ ಗರಿಷ್ಠ ರನ್‌ ಬಾರಿಸಿದ ದಾಖಲೆ ತಮ್ಮೆಸರಿಗೆ ಬರೆದುಕೊಂಡರು. ೧೯೯೮ರಲ್ಲಿ ಸಚಿನ್‌ ತೆಂಡೂಲ್ಕರ್‌ ಅವರು ೧೨೭ ರನ್‌ ಬಾರಿಸಿದ್ದು ಇದುವರೆಗಿನ ಗರಿಷ್ಠ ರನ್‌ ಆಗಿತ್ತು. ಗಿಲ್‌ ಇನಿಂಗ್ಸ್‌ನಲ್ಲಿ ೧೫ ಫೋರ್‌ ಹಾಗೂ ಒಂದು ಸಿಕ್ಸರ್‌ಗಳು ಸೇರಿಕೊಂಡಿವೆ.

ಶುಬ್ಮನ್‌ ಗಿಲ್‌ ೨೦೧೯ರಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಅಂತೆಯೇ ಕಳೆದ ತಿಂಗಳು ನಡೆದ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆ ವೆಸ್ಟ್‌ ಇಂಡೀಸ್‌ ವಿರುದ್ಧ ಅಜೇಯ ೯೮ ರನ್‌ ಬಾರಿಸಿದ್ದರು. ಅಂತೆಯೇ ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಅಜೇಯ ೮೨ ರನ್ ಗಳಿಸಿದ್ದರು.

ಭಾರತ ತಂಡದಲ್ಲಿ ಕಡಿಮೆ ಅವಕಾಶಗಳನ್ನು ಪಡೆಯುತ್ತಿರುವ ಶುಬ್ಮನ್‌ ಗಿಲ್‌, ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡು ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.

ಗಿಲ್‌ ಅವರ ಶತಕ ಹಾಗೂ ಇಶಾನ್‌ ಕಿಶನ್‌ (೫೦) ಅವರ ಅರ್ಧ ಶತಕದ ನೆರವಿನಿಂದ ಭಾರತ ತಂಡ ಜಿಂಬಾಬ್ವೆ ವಿರುದ್ಧ ನಿಗದಿತ ೫೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೨೮೯ ರನ್‌ ಬಾರಿಸಿದೆ.

ಇದನ್ನೂ ಓದಿ | Team India | ಗಿಲ್‌ಗೆ ಲಕ್‌, ಚೆನ್ನಾಗಿ ಆಡಿದ್ದಕ್ಕೆ ಸಿಕ್ಕಿತು ನಾಯಕನ ಪಟ್ಟ!

Exit mobile version