Site icon Vistara News

Shubman Gill : ಫಿಟ್ನೆಸ್ ಟೆಸ್ಟ್​​ನಲ್ಲಿ ಪಾಸಾದ ಗಿಲ್​; ರಾಜ್​ಕೋಟ್​ ಟೆಸ್ಟ್​ಗೆ ಲಭ್ಯ

Shubman GIll

ರಾಜ್​​ಕೋಟ್​ : ಇಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್​​ ಶುಭ್​ಮನ್​ ಗಿಲ್ ಆಡಲು ಅನುಮತಿ ನೀಡಲಾಗಿದೆ. ಬೆರಳಿನ ಗಾಯದಿಂದ ಚೇತರಿಸಿಕೊಂಡ ನಂತರ ಅವರು ತಂಡವನ್ನು ಸೇರಲು ಸಜ್ಜಾಗಿದ್ದಾರೆ. ಎರಡನೇ ಟೆಸ್ಟ್​ನ 4 ನೇ ದಿನದಂದು ಬೆರಳಿನ ಗಾಯದ ಭೀತಿಯ ನಂತರ ಗಿಲ್ ಅವರ ಫಿಟ್ನೆಸ್​ ಬಗ್ಗೆ ಯಾವುದೇ ಆತಂಕಗಳಿಗೆ ಈ ಸಕಾರಾತ್ಮಕ ಸುದ್ದಿ ತೆರೆ ಎಳೆದಿದೆ.

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು ಈ ಶುಕ್ರವಾರ ಆನ್​ಲೈನ್​ನಲ್ಲಿ ಸಭೆ ಸೇರಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಲಿದ್ದಾರೆ. ಗಿಲ್ ಸಂಪೂರ್ಣ ಫಿಟ್ನೆಸ್​ ಮರಳಿರುವುದು ತಂಡದ ಆಯ್ಕೆಗಳಿಗೆ ಉಪಯುಕ್ತ ಆಯ್ಕೆ ಸಿಕ್ಕಂತಾಗಿದೆ.

ಫಾರ್ಮ್​​ ಕುಸಿತದಿಂದ ಹೆಣಗಾಡುತ್ತಿದ್ದ 24 ವರ್ಷದ ಆಟಗಾರ ಎರಡನೇ ಇನ್ನಿಂಗ್ಸ್​ನಲ್ಲಿ 104 ರನ್ (ಶತಕ) ಗಳಿಸುವ ಮೂಲಕ ಅದ್ಭುತ ಪುನರಾಗಮನ ಮಾಡಿದ್ದರು. ತಂಡದ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಿದ್ದರು. ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿದರು.

ಎರಡನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರ ಅದ್ಭುತ ದ್ವಿಶತಕ, ಗಿಲ್ ಅವರ ಅದ್ಭುತ ಭಾರತದ ಬ್ಯಾಟಿಂಗ್ ಲೈನ್ಅಪ್​​ ಬಲವಾಗಿತ್ತು. ಗಿಲ್ ಫಾರ್ಮ್​ಗೆ ಮರಳಿರುವುದು ತಂಡದ ಪಾಲಿಗೆ ಸಂತಸದ ಸುದ್ದಿಯಾಗಿತ್ತು. 3ನೇ ದಿನದಾಟದಲ್ಲಿ ಇಂಗ್ಲೆಂಡ್​​ನ ಎರಡನೇ ಇನಿಂಗ್ಸ್​ನಲ್ಲಿ ಫೀಲ್ಡಿಂಗ್ ಮಾಡುವಾಗ ಬೆರಳಿಗೆ ಗಾಯವಾಗಿದ್ದು ಫಿಟ್ನೆಸ್ ಬಗ್ಗೆ ಕಳವಳ ವ್ಯಕ್ತಗೊಂಡಿತ್ತು. ಗಿಲ್ ಅವರ ಬೆರಳಿನಲ್ಲಿನ ನೋವಿನ ಪ್ರಮಾಣವನ್ನು ನಿರ್ಣಯಿಸಲು ಸ್ಕ್ಯಾನ್​​ಗೆ ಒಳಗಾಗಿದ್ದರು.

ಇದನ್ನೂ ಓದಿ : Virat kohli : ಒಂದೇ ಬಾರಿಗೆ 110 ಕೋಟಿ ರೂಪಾಯಿ ಕಳೆದುಕೊಳ್ಳಲಿದ್ದಾರೆ ವಿರಾಟ್​ ಕೊಹ್ಲಿ

ನಾನು ಸ್ಕ್ಯಾನ್​ಗೆ ಒಳಗಾಗಬೇಕಾಯಿತು. ಆದ್ದರಿಂದ ಅವರು ಸಂಜೆ ನನ್ನ ಬೆರಳಿನ ನೋವನ್ನು ಪರೀಕ್ಷಿಸಲು ತ್ವರಿತವಾಗಿ ನನ್ನನ್ನು ಕರೆದೊಯ್ದರು ಎಂದು ಗಿಲ್​ ಎರಡನೇ ಟೆಸ್ಟ್ ನಂತರ ಹೇಳಿದ್ದರು. ಇದಕ್ಕೂ ಮುನ್ನ ತಂಡದ ಮ್ಯಾನೇಜ್ಮೆಂಟ್ ಕೂಡ ಗಿಲ್ ಅವರ ಗಾಯವನ್ನು ದೃಢಪಡಿಸಿ ಹೇಳಿಕೆ ಬಿಡುಗಡೆ ಮಾಡಿತ್ತು ಬೆರಳಿನ ಗಾಯವು ಅವರನ್ನು ಬದಿಗಿಡುವ ಮೊದಲು ಗಿಲ್ ಸ್ಲಿಪ್ ನಲ್ಲಿ ನಾಲ್ಕು ಕ್ಯಾಚ್​ಗಳನ್ನು ಹಿಡಿಯುವ ಮೂಲಕ ತಮ್ಮ ಫೀಲ್ಡಿಂಗ್ ಪರಾಕ್ರಮ ತೋರಿಸಿದರು. ಸ್ಕ್ಯಾನ್ ನಿಂದ ಹಿಂದಿರುಗಿದ ನಂತರ ಅವರು ಚೆನ್ನಾಗಿದ್ದಾರೆ ಎಂದು ಗಿಲ್ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದರು.

ದ್ರಾವಿಡ್​ ಶ್ಲಾಘನೆ

ಎರಡನೇ ಟೆಸ್ಟ್ ನಲ್ಲಿ ಶತಕ ಬಾರಿಸಿದ ಶುಬ್ಮನ್ ಗಿಲ್ ಅವರನ್ನು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಶ್ಲಾಘಿಸಿದ್ದಾರೆ. ಒತ್ತಡದಲ್ಲಿ ಶಾಂತವಾಗಿ ಉಳಿಯುವ ಮತ್ತು ಹೆಚ್ಚು ಮುಖ್ಯವಾದಾಗ ಸ್ಕೋರ್ ಮಾಡುವ ಗಿಲ್ ಅವರ ಸಾಮರ್ಥ್ಯವನ್ನು ದ್ರಾವಿಡ್ ಶ್ಲಾಘಿಸಿದ್ದರು. ಮಾಜಿ ಕ್ರಿಕೆಟಿಗರಾದ ಕೆವಿನ್ ಪೀಟರ್ಸನ್ ಮತ್ತು ಯುವರಾಜ್ ಸಿಂಗ್ ಕೂಡ ಉದಯೋನ್ಮುಖ ತಾರೆಯನ್ನು ಶ್ಲಾಘಿಸಿದ್ದರು.

ಸವಾಲಿನ ಅವಧಿಯಿಂದ ಚೇತರಿಸಿಕೊಳ್ಳುವ ಮತ್ತು ಒತ್ತಡದಲ್ಲಿ ಬ್ಯಾಟಿಂಗ್​ ಮಾಡುವ ಗಿಲ್ ಅವರ ಸಾಮರ್ಥ್ಯವು ಅವರ ಪಾತ್ರವನ್ನು ಒತ್ತಿಹೇಳುತ್ತದೆ. ಕೊಹ್ಲಿಯ ಅನಿಶ್ಚಿತ ಸ್ಥಿತಿಯು ಬ್ಯಾಟಿಂಗ್ ಕ್ರಮಾಂಕದಲ್ಲಿ ಹೆಜ್ಜೆ ಇಡುವ ಜವಾಬ್ದಾರಿಯನ್ನು ಗಿಲ್ ಮೇಲೆ ಹಾಕುತ್ತದೆ.

Exit mobile version