Site icon Vistara News

ICC World Cup 2023 : ಶುಭ್​ಮನ್​ ಗಿಲ್​ಗೆ ಡೆಂಗ್ಯೂ ಜ್ವರ; ವಿಶ್ವ ಕಪ್​ನಲ್ಲಿ ಭಾರತಕ್ಕೆ ಹಿನ್ನಡೆ

Shubhman Gill

ಚೆನ್ನೈ: ಭಾರತ ತಂಡದ ಯುವ ಆರಂಭಿಕ ಬ್ಯಾಟರ್​ ಶುಬ್ಮನ್ ಗಿಲ್ ಡೆಂಗ್ಯೂನಿಂದ ಬಳಲುತ್ತಿದ್ದಾರೆ ಎಂಬುದಾಗಿ ಸುದ್ದಿಯಾಗಿದೆ. ಇದರಿಂದ ವಿಶ್ವ ಕಪ್​ಗೆ (ICC World Cup 2023) ಸಜ್ಜಾಗಿರುವ ಭಾರತಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾನುವಾರ (ಅಕ್ಟೋಬರ್ 8) ಆಸ್ಟ್ರೇಲಿಯಾ ವಿರುದ್ಧದ ಭಾರತದ ಮೊದಲ ವಿಶ್ವಕಪ್ ಪಂದ್ಯದಲ್ಲಿ 24 ವರ್ಷದ ಗಿಲ್​ ಆಡುವ ಸಾಧ್ಯತೆಯಿಲ್ಲ. ಬಲಗೈ ಬ್ಯಾಟರ್​ 2023 ರರಲ್ಲಿ ಏಕ ದಿನ ಮಾದರಿಯಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದವರಾಗಿರುವುದರಿಂದ ಮೊದಲ ಪಂದ್ಯದ ಅನುಪಸ್ಥಿತಿಯು ತಂಡದ ಪಾಲಿಗೆ ದೊಡ್ಡ ಹಿನ್ನಡೆಯಾಗಿದೆ.

ದೈನಿಕ್ ಜಾಗರಣ್ ವರದಿಗಳ ಪ್ರಕಾರ, ಗಿಲ್ ಗುರುವಾರದ ತರಬೇತಿ ಅವಧಿಯಲ್ಲಿ ಡೆಂಗ್ಯೂನಿಂದ ಬಳಲುತ್ತಿದ್ದರು. ಭಾರತವು ಶುಕ್ರವಾರ ತ್ತೊಂದು ತರಬೇತಿ ಅವಧಿಯನ್ನು ಹೊಂದಿರುತ್ತದೆ. 24 ವರ್ಷದ ಆಟಗಾರ ಅದರ ಭಾಗವಾಗಿರುವುದಿಲ್ಲ ಎನ್ನಲಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ವಿಶ್ವಕಪ್ ಪಂದ್ಯದಲ್ಲಿ ಗಿಲ್ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಅವರ ಬದಲಿಗೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬುದಾಗಿ ವರದಿ ಮಾಡಲಾಗಿದೆ.

ರಾಹುಲ್ ಅಥವಾ ಇಶಾನ್​

ಒಂದು ವೇಳೆ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಚೇತರಿಸಿಕೊಳ್ಳಲು ವಿಫಲವಾದರೆ, ಇನ್ನಿಂಗ್ಸ್ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇಶಾನ್ ಕಿಶನ್ ಅಥವಾ ಕೆಎಲ್ ರಾಹುಲ್ ಆಡಲು ಇಳಿಯಬೇಕೇ ಎಂಬ ಬಗ್ಗೆ ಭಾರತ ತನ್ನ ಆಯ್ಕೆಗಳನ್ನು ಪರಿಶೀಲಿಸಲಿದೆ. ಪ್ಲೇಯಿಂಗ್ ಇಲೆವೆನ್​ನಲ್ಲಿ ಗಿಲ್​ ಅನುಪಸ್ಥಿತಿಯು ತಂಡಕ್ಕೆ ಹಿನ್ನಡೆಯಾಗಿದೆ.

ಗಿಲ್ ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ಅದ್ಭುತ ದ್ವಿಶತಕ ಗಳಿಸಿದ್ದರು. ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಸ್ವಲ್ಪ ಕುಸಿತವನ್ನು ಹೊರತುಪಡಿಸಿ, ಅವರು ನಂಬಲಾಗದ ಸ್ಥಿರತೆಯನ್ನು ತೋರಿಸಿದ್ದರು. ಇಂಡಿಯನ್ ಪ್ರೀಮಿಯರ ಲೀಗ್​ನಲ್ಲಿ 890 ರನ್​ಗಳೊಂದಿಗೆ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಇತ್ತೀಚಿನ ಏಷ್ಯಾ ಕಪ್​ನಲ್ಲಿ 302 ರನ್ಗಳೊಂದಿಗೆ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಕಳೆದ ಕೆಲವು ಇನಿಂಗ್ಸ್​​ಗಳಲ್ಲಿ ಅವರು 104, 74, 27, 121, 19, 58 ಮತ್ತು 67 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ICC World Cup 2023 : ಮೊದಲ ಪಂದ್ಯದಲ್ಲಿಯೇ ವಿಶೇಷ ದಾಖಲೆ ಬರೆದ ನ್ಯೂಜಿಲ್ಯಾಂಡ್​ನ ರಚಿನ್​, ಕಾನ್ವೆ

ವಿಶ್ವಕಪ್​ಗೆ ಮುಂಚಿತವಾಗಿ, ಭಾರತೀಯ ತಂಡವು ಅನಿಶ್ಚಿತತೆಯ ವಾತಾವರಣವನ್ನು ಹೊಂದಿತ್ತು. ಬಳಿಕ ಸರಿ ಹೋಗಿತ್ತು. ಹಲವಾರು ಅಗ್ರ ತಾರೆಯರು ಗಾಯದ ನಂತರ ಪುನರಾಗಮನ ಮಾಡಿದ್ದರು. ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ದೀರ್ಘ ವಿರಾಮದ ನಂತರ ತಂಡಕ್ಕೆ ಮರಳಿದ್ದರು. ಏಷ್ಯಾಕಪ್ ವೇಳೆ ಸ್ಪಿನ್ನರ್ ಅಕ್ಷರ್ ಪಟೇಲ್ ಗಾಯಗೊಂಡಿದ್ದು, ಅವರ ಬದಲಿಗೆ ರವಿಚಂದ್ರನ್ ಅಶ್ವಿನ್ ಅವರನ್ನು ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Exit mobile version