ಅಹಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ತಂಡ 6 ವಿಕೆಟ್ಗಳ ಸೋಲು ಕಂಡಿತು. ಇದೇ ಪಂದ್ಯದಲ್ಲಿ ಶುಭಮನ್ ಗಿಲ್(Shubman Gill) ಅವರು ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಜೊಲ್ಲು ಸುರಿಸಿದ ವಿಡಿಯೊ ವೈರಲ್(viral video) ಆಗಿದೆ. ಈ ವಿಡಿಯೊಗೆ ‘ಮೆನ್ ವಿಲ್ ಬಿ ಮೆನ್” ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಡೆಲ್ಲಿ ತಂಡ ಗೆಲುವು ಸಾಧಿಸಿದನ್ನು ಕಂಡು ಗ್ಯಾಲರಿಯಲ್ಲಿದ್ದ ಹುಡುಗಿಯೊಬ್ಬಳು ಚಪ್ಪಾಳೆ ತಟ್ಟುತ್ತಾ ತಂಡಕ್ಕೆ ಅಭಿನಂದಿಸಿದ್ದಾಳೆ. ಇದೇ ವೇಳೆ ಗಿಲ್ ಈ ಹುಡುಗಿಯನ್ನು ಕಂಡು ವಾಹ್… ಎಂಬ ಸನ್ನೆ ಮಾಡಿದರು. ಈ ದೃಶ್ಯ ಪಂದ್ಯದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಂದ್ಯ ಸೋತರೂ ಈ ಹುಡಿಯನ್ನು ಕಂಡ ಗಿಲ್ ಎಲ್ಲ ಚಿಂತೆಯನ್ನು ಮರೆತರು.
Men will be men – IPL versionpic.twitter.com/XZM3MxWLt6
— Keh Ke Peheno (@coolfunnytshirt) April 18, 2024
ಗಿಲ್ ಅವರ ಈ ವಿಡಿಯೊ ಕಂಡ ಕೆಲ ನೆಟ್ಟಿಗರು ಸಾರಾ ತೆಂಡೂಲ್ಕರ್ ಕಂಡರೆ ನಿಮಗೆ ಮಾರಿ ಹಬ್ಬ ಕಂಡಿತ ಎಂದು ತಮಾಷೆಯ ಕಮೆಂಟ್ ಮಾಡಿದ್ದಾರೆ. ಪಂದ್ಯಕ್ಕೂ ಮುನ್ನವೇ ನಿಮ್ಮ ತಂಡದ ಆಟಗಾರರು ಈ ಹುಡುಗಿಯನ್ನು ಕಂಡಿರಬೇಕು, ಹೀಗಾಗಿ ಆಟದಲ್ಲಿ ಏಕಾಗ್ರತೆ ಕಳೆದುಕೊಂಡು ಕಳಪೆ ಪ್ರದರ್ಶನ ತೋರಿ ಸೋಲು ಕಂಡಿದ್ದು ಎಂದು ಕಾಲೆಳೆದಿದ್ದಾರೆ.
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಡೆಲ್ಲಿ(Delhi Capitals) ತಂಡಕ್ಕೆ. ಬೌಲರ್ಗಳು ತಮ್ಮ ಘಾತಕ ದಾಳಿಯ ಮೂಲಕ ಎದುರಾಳಿ ಗುಜರಾತ್ ತಂಡವನ್ನು 89 ರನ್ಗಳಿಗೆ ಆಲೌಟ್ ಮಾಡಿದರು. ಸಾಧಾರಣ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ 8.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 92 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ IPL 2024 POINTS TABLE: ಗುಜರಾತ್ ಮಣಿಸಿ ಅಂಕಪಟ್ಟಿಯಲ್ಲಿ 3 ಸ್ಥಾನ ಜಿಗಿತ ಕಂಡ ಡೆಲ್ಲಿ
ಚೇಸಿಂಗ್ ವೇಳೆ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರ ಈ ಆಕ್ರಮಣಕಾರಿ ಬ್ಯಾಟಿಂಗ್ನಿಂದಾಗಿ 2 ಓವರ್ ಮುಕ್ತಾಯಗೊಳ್ಳುವ ಮುನ್ನವೇ ತಂಡಕ್ಕೆ 25 ರನ್ ಹರಿದುಬಂತು. ಆದರೆ ಇವರ ಈ ಆಟ ಹೆಚ್ಚು ಹೊತ್ತು ಸಾಗಲಿಲ್ಲ. ಸ್ಪೆನ್ಸರ್ ಜಾನ್ಸನ್ ಎಸೆದ ವೈಡ್ ಲೆಂತ್ ಬಾಲ್ನ ಮರ್ಮವನರಿಯದೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಅವರ ಗಳಿಕ 10 ಎಸೆತಗಳಿಂದ 20 ರನ್. ಈ ವಿಕೆಟ್ ಪತನದ ಬಳಿಕ ಆಡಲಿಳಿದ ಅಭಿಷೇಕ್ ಪೋರೆಲ್(15) ಮತ್ತು ಶಾಯ್ ಹೋಪ್(19) ಬೇಗನೆ ವಿಕೆಟ್ ಕಳೆದುಕೊಂಡು ತಂಡಕ್ಕೆ ಆತಂಕ ತಂದೊಡ್ಡಿದರು. ಈ ವೇಳೆ ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ನಾಯಕ ಪಂತ್(16) ಮತ್ತು ಸುಮೀತ್ ಕುಮಾರ್(9) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಗುಜರಾತ್ ಪರ ಸಂದೀಪ್ ವಾರಿಯರ್ 2 ವಿಕೆಟ್ ಕಿತ್ತರು.
ಇನಿಂಗ್ಸ್ ಆರಂಭಿಸಿದ ಗುಜರಾತ್ ತಂಡದ ಬ್ಯಾಟರ್ಗಳು ಡೆಲ್ಲಿ ಬೌಲರ್ಗಳಾದ ಇಶಾಂತ್ ಶರ್ಮ, ಮುಕೇಶ್ ಕುಮಾರ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಕರಾರುವಾಕ್ ಬೌಲಿಂಗ್ ಎದುರು ಅಬ್ಬರಿಸಲು ವಿಫಲರಾದರು. ನಾಯಕ ಶುಭಮನ್ ಗಿಲ್(8), ವೃದ್ಧಿಮಾನ್ ಸಾಹಾ(2), ಡೇವಿಡ್ ಮಿಲ್ಲರ್(2), ಅಭಿನವ್ ಮನೋಹರ್(8) ಮತ್ತು ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾನ್ನಾಡಿದ ಶಾರುಖ್ ಖಾನ್(0) ಸಿಂಗಲ್ ಡಿಜಿಟ್ಗೆ ಸೀಮಿತರಾಗಿ ಪೆವಿಲಿಯನ್ ಪರೇಡ್ ನಡೆಸಿದರು. 8ನೇ ಕ್ರಮಾಂಕದಲ್ಲಿ ಆಡಲಿಳಿದ ರಶೀದ್ ಖಾನ್ ಏಕಾಂಗಿ ಹೋರಾಟ ನಡೆಸಿ 24 ಎಸೆತಗಳಿಂದ 31 ರನ್ ಚಚ್ಚಿ ತಂಡದ ಮೊತ್ತವನ್ನು 80ರ ಗಡಿ ದಾಟಿಸಿ ಮಾನ ಉಳಿಸಿದರು.