ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2023ರಲ್ಲಿ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟರ್ ಶುಬ್ಮನ್ ಗಿಲ್ ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. ಭಾನುವಾರ ತಮ್ಮ ಸತತ ಎರಡನೇ ಶತಕವನ್ನು ಗಳಿಸಿದ್ದು, ಆರ್ಸಿಬಿ ವಿರುದ್ದ ಗುಜರಾತ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ. ಅವರ ಆಟದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 16ನೇ ಆವೃತ್ತಿಯಿಂದ ನಿರ್ಗಮಿಸಿತು. ಗೆಲುವು ಮತ್ತು ಸೋಲು ಕ್ರೀಡೆಯ ಭಾಗವಾಗಿದ್ದರೂ, ಕುಚೇಷ್ಠೆಯ ಅಭಿಮಾನಿ ವರ್ಗ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ. ಆರ್ಸಿಬಿ ಸೋಲಿಗೆ ಕಾರಣರಾದ ಶುಭ್ಮನ್ ಗಿಲ್ ಅವರನ್ನು ಸಾಮಾಜಿಕ ಜಾಲತಾಣಗಳ ಮೂಲಕ ನಿಂದಿಸಿದ್ದಾರೆ. ಅಷ್ಟಕ್ಕೂ ಸಮಾಧಾನಗೊಳ್ಳದೆ, ಶುಭ್ಮನ್ ಅವರ ಸಹೋದರಿ ಶಹನೀಲ್ ವಿರುದ್ಧವೂ ಅವಾಚ್ಯ ನಿಂದನೆಗಳನ್ನು ಮಾಡಿದ್ದಾರೆ.
ಗಿಲ್ ಅವರ ಸಹೋದರಿ ಶಹನೀಲ್ ಗಿಲ್ ಅವರು ಪಂದ್ಯದ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು “ಎಂತಹ ಸಂಪೂರ್ಣ ದಿನ” ಎಂದು ಬರೆದಿದ್ದಾರೆ. ಈ ಪೋಸ್ಟ್ಗೆ ಹಲವಾರು ಅಭಿಮಾನಿಗಳು ದ್ವೇಷಪೂರಿತ ಕಾಮೆಂಟ್ಗಳನ್ನು ಹಾಕಿದ್ದಾರೆ. ಅಣ್ಣ ಮತ್ತು ತಂಗಿಯನ್ನು ನಿಂದಿಸಿದ್ದಾರೆ.
ಶುಭ್ಮನ್ ಗಿಲ್ ತಮ್ಮ ತಂಡವನ್ನು ಸೋಲಿಸಿದ ಹೊರತಾಗಿಯೂ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಅವರನ್ನು ಅಭಿನಂದಿಸಿದ್ದರು. ಈ ಮೂಲಕ ಅವರು ಗಿಲ್ ಅವರ ಆಟವನ್ನು ಮೆಚ್ಚಿ ಮಾತನಾಡಿದ್ದರು.
ಗಿಲ್ ಮತ್ತು ಅವರ ಸಹೋದರಿಯನ್ನು ಗುರಿಯಾಗಿಸಿಕೊಂಡು ಆಕ್ರಮಣಕಾರಿ ಕಾಮೆಂಟ್ಗಳಿಗೆ ಪ್ರತಿಕ್ರಿಯೆಯಾಗಿ, ಹಲವಾರು ಅಭಿಮಾನಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ನಿಂದನೆಗೆ ಕಾರಣರಾದವರನ್ನು ಟೀಕಿಸಿದ್ದಾರೆ..
ಶುಬ್ಮನ್ ಗಿಲ್ ಮತ್ತು ಅವರ ಸಹೋದರಿಗಾಗಿ ಇಂದು ಟ್ವೀಟ್ಗಳನ್ನು ನೋಡಿ. ವಾಮಿಕಾಗೆ ಅತ್ಯಾಚಾರದ ಬೆದರಿಕೆ ಹಾಕಿದ ಐಐಟಿ ಪದವೀಧರನನ್ನು ಕೊಹ್ಲಿ ಮತ್ತು ಅನುಷ್ಕಾ ಕ್ಷಮಿಸಿದಾಗ ನಾನು ದ್ವೇಷಿಸುತ್ತಿದ್ದೆ. ಈ ಹುಡುಗರಲ್ಲಿ ಕೆಲವರು ಜೈಲುಗಳ ಹಿಂದೆ ಇರಬೇಕು ಮತ್ತು ವೃತ್ತಿಜೀವನವನ್ನು ಹಾಳುಮಾಡಬೇಕು. ಇದೆಲ್ಲವನ್ನೂ ನಿಲ್ಲಿಸಲು ಅವರಿಗೆ ದೊಡ್ಡ ಶಿಕ್ಷೆಯಾಗಬೇಕು ಎಂದು ನೆಟ್ಟಿಗರರೊಬ್ಬರು ಬರೆದಿದ್ದಾರೆ.
“ಅನಾರೋಗ್ಯದಿಂದ ಬಳಲುತ್ತಿರುವ ಕೆಲವು ಕೊಹ್ಲಿ ಅಭಿಮಾನಿಗಳು ಗಿಲ್ ಮತ್ತು ಅವರ ಕುಟುಂಬವನ್ನು (ವಿಶೇಷವಾಗಿ ಅವರ ಸಹೋದರಿ) ನಿಂದಿಸುತ್ತಿದ್ದಾರೆ. ಈ ವಿಷತ್ವ ಹೊಂದಿರುವ ಈ ಅಭಿಮಾನಿಗಳು ಸೃಷ್ಟಿಸಿದ ನಕಾರಾತ್ಮಕ ಶಕ್ತಿಯು ಕೆಟ್ಟ ಪರಿಣಾಮ ಬೀರುತ್ತಿದೆ. ಗಿಲ್ ಭಾರತೀಯ ಕ್ರಿಕೆಟ್ನ ಭವಿಷ್ಯದ ಸೂಪರ್ಸ್ಟಾರ್ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.