Site icon Vistara News

ಗಿಲ್​ ಆರೋಗ್ಯ ವಿಚಾರದಲ್ಲಿ ಭಾರಿ ಗೊಂದಲ; ಯಾವುದು ಸತ್ಯ, ಯಾವುದು ಸುಳ್ಳು?

shubman gill health condition

ಬೆಂಗಳೂರು: ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಟೀಮ್​ ಇಂಡಿಯಾದ ಸ್ಟಾರ್​ ಆರಂಭಿಕ ಆಟಗಾರ ಶುಭಮನ್​ ಗಿಲ್(Shubman Gill) ಅವರ ಆರೋಗ್ಯ ವಿಚಾರದಲ್ಲಿ ಕ್ಷಣ ಕ್ಷಣಕ್ಕೂ ಭಾರಿ ಗೊಂದಲ ಸೃಷ್ಟಿಯಾಗಿದೆ. ಒಂದು ಬಾರಿ ಗಿಲ್​ ಅವರು ವಿಶ್ವಕಪ್​ ಟೂರ್ನಿಯಿಂದ ಹೊರಬೇಳಲಿದ್ದಾರೆ ಎಂದರೆ, ಇನ್ನೊಂದು ಬಾರಿ ಗಿಲ್​ ಸಂಪೂರ್ಣ ಚೇತರಿಕೆ ಕಂಡು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ.

ಬುಧವಾರ ಬೆಳಗ್ಗೆ ವರದಿಯಾದ ಪ್ರಕಾರ ಶುಭಮನ್​ ಗಿಲ್ ಅವರಿಗೆ ಪ್ಲೇಟ್ಲೆಟ್ ಕುಸಿದಿತ್ತು. ಆಸ್ಪತ್ರೆಯಿಂದ ಡಿಸ್ಜಾರ್ಜ್​ ಆಗಿದ್ದರೂ ಅವರಿಗೆ ಪದೇಪದೆ ಆರೋಗ್ಯ ಏರುಪೇರು ಕಾಣಿಸುತ್ತಿದೆ ಹೀಗಾಗಿ ಅವರು ವಿಶ್ವಕಪ್​ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ ಎಂದು ಬಿಸಿಸಿಐ ವೈದ್ಯಕೀಯ ಮೂಲಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿತ್ತು. ಅಲ್ಲದೆ ಗಿಲ್​ ಸ್ಥಾನಕ್ಕೆ ಬದಲಿ ಆಟಗಾರನಾಗಿ ಋತುರಾಜ್​ ಗಾಯಕ್ವಾಡ್(ruturaj gaikwad)​ ಅಥವಾ ಯಶಸ್ವಿ ಜೈಸ್ವಾಲ್(yashasvi jaiswal)​ ಅವರನ್ನು ಆಯ್ಕೆ ಮಾಡಲಾಗುವುದು ಎಂದು ವರದಿಯಾಗಿತ್ತು.

ಅಹಮದಾಬಾದ್​ಗೆ ಪ್ರಯಾಣ

ಈಗ ಬಂದ ವರದಿಯ ಪ್ರಕಾರ ಶುಭಮನ್​ ಗಿಲ್​ ಅವರು ಇಂದು(ಬುಧವಾರ) ಚೆನ್ನೈಯಿಂದ ಅಹಮದಾಬಾದ್​ಗೆ ವಿಮಾನ ಏರಲಿದ್ದಾರೆ ಎಂದು ಬಿಸಿಸಿಐ ವೈದ್ಯಕೀಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. “ಗಿಲ್ ಅವರು ಇಂದು ಚೆನ್ನೈನಿಂದ ಅಹಮದಾಬಾದ್‌ಗೆ ಪ್ರಯಾಣಿಸಲಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ” ಎಂದು ಹೇಳಿರುವುದಾಗಿ ವರದಿಯಾಗಿದೆ. ಒಟ್ಟಾರೆ ಗಿಲ್​ ಅವರ ಆರೋಗ್ಯ ವಿಚಾರದಲ್ಲಿ ಬರುತ್ತಿರುವ ಸುದ್ದಿಗಳು ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದನ್ನು ನಂಬುವುದೇ ಗೊಂದಲವಾಗಿದೆ.

ಇದನ್ನೂ ಓದಿ Pakistan vs Sri Lanka: ಒಂದೇ ಪಂದ್ಯದಲ್ಲಿ 4 ಶತಕ; ವಿಶ್ವಕಪ್​ನಲ್ಲಿ ಇದು ವಿಶ್ವದಾಖಲೆ

2 ಪಂದ್ಯಗಳಿಗೆ ಅಲಭ್ಯ

ಡೆಂಗ್ಯೂ ಜ್ವರದ ಕಾರಣ ಗಿಲ್ ಆಸ್ಟ್ರೇಲಿಯಾ(IND vs AUS) ವಿರುದ್ಧದ ಪಂದ್ಯದಿಂದ ಹೊರಗುಳಿದ್ದರು. ಅವರ ಬದಲು ಎಡಗೈ ಆಟಗಾರ ಇಶಾನ್​ ಕಿಶನ್​ಗೆ(Ishan Kishan) ಅವಕಾಶ ನೀಡಲಾಗಿತ್ತು. ಬುಧವಾರ ನಡೆಯುವ ಅಫಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಅವರು ಅಲಭ್ಯರಾಗಿದ್ದಾರೆ. ಈ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿತ್ತು.

ಅಕ್ಟೋಬರ್​ 14ಕ್ಕೆ ಇಂಡೋ-ಪಾಕ್​ ಕದನ

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಇಂಡೋ-ಪಾಕ್​ ಕದನ ಅಕ್ಟೋಬರ್​ 14ರಂದು ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

ಶುಭಮನ್​ ಗಿಲ್​ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದರು. ಏಷ್ಯಾ ಕಪ್​ನಲ್ಲಿ ಶತಕ ಮತ್ತು ಅರ್ಧಶತಕ ಬಾರಿಸಿ ಒಟ್ಟು 302 ರನ್​ ಗಳಿಸಿ ಪ್ರಚಂಡ ಬ್ಯಾಟಿಂಗ್​ ನಿರ್ವಹಣೆ ತೋರಿದ್ದರು. ವಿಶ್ವಕಪ್​ನಲ್ಲಿಯೂ ಅವರ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟಿತ್ತು. ಆದರೆ ದುರಾದೃಷ್ಟಕ್ಕೆ ಅವರಿಗೆ ಡೆಂಗ್ಯೂ ಬಾಧಿಸಿ ಎಲ್ಲ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ ಲೀಗ್​ನಲ್ಲಿ 890 ರನ್​ಗಳೊಂದಿಗೆ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಕಳೆದ ಕೆಲವು ಇನಿಂಗ್ಸ್​​ಗಳಲ್ಲಿ ಅವರು 104, 74, 27, 121, 19, 58 ಮತ್ತು 67 ರನ್ ಗಳಿಸಿದ್ದಾರೆ. ಈಗಾಗಲೇ ಒಂದು ದ್ವಿಶತಕವನ್ನು ಕೂಡ ಬಾರಿಸಿದ್ದಾರೆ.

Exit mobile version