Site icon Vistara News

ಶುಭಮನ್​ ಗಿಲ್​ ಆರೋಗ್ಯದ ಬಗ್ಗೆ ಬಿಗ್​ ಅಪ್‌ಡೇಟ್​ ನೀಡಿದ ಕೋಚ್​ ದ್ರಾವಿಡ್​

Dravid provides major update on Shubman Gill condition

ಚೆನ್ನೈ: ಟೀಮ್​ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್​ ಗಿಲ್(shubman gill)​ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ವಿಶ್ವಕಪ್(icc world cup 2023) ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ತಂಡದ ಕೋಚ್​ ರಾಹುಲ್​ ದ್ರಾವಿಡ್​(rahul dravid) ಅಪ್‌ಡೇಟ್ ನೀಡಿದ್ದು ಗಿಲ್​ ಅವರನ್ನು ಇನ್ನೂ ತಂಡದಿಂದ ಹೊರಗಿಡಲಾಗಿಲ್ಲ ಎಂದಿದ್ದಾರೆ.

ಶುಕ್ರವಾರ ಸಂಜೆ ಗಿಲ್​ ಆರೋಗ್ಯದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ರಾಹುಲ್​ ದ್ರಾವಿಡ್, ಶುಭಮನ್​ ಗಿಲ್​​ ಆರೋಗ್ಯ ಸುಧಾರಿಸುತ್ತಿದೆ. ಯಾವುದೇ ಆತಂಕವಿಲ್ಲ. ಅವರಲ್ಲಿ ಡೆಂಗ್ಯೂವಿನ ಪ್ರಾಥಮಿಕ ಲಕ್ಷಣಗಳು ಮಾತ್ರ ಕಂಡುಬಂದಿದೆ. ಹೀಗಾಗಿ ಅವರುನ್ನು ತಂಡದಿಂದ ಹೊರಗಿಡಲಾಗಿಲ್ಲ ಎಂದಿದ್ದಾರೆ. ದ್ರಾವಿಡ್​ ಅವರ ಈ ಮಾತು ಕೇಳಿದ್ದೇ ತಡ ಚಿಂತೆಯಲ್ಲಿದ್ದ ಟೀಮ್​ ಇಂಡಿಯಾ ಅಭಿಮಾನಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನೂ ಸಮಯವಿದೆ

ಆಸ್ಟ್ರೇಲಿಯಾ ವಿರುದ್ದದ ಪಂದ್ಯಕ್ಕೆ ಶುಭಮನ್​ ಗಿಲ್​ ಅವರ ಅಲಭ್ಯತೆಯ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ನಮ್ಮ ಬಳಿ ಇನ್ನೂ 36 ಗಂಟೆಗಳ ಕಾಲಾವಕಾಶವಿದೆ. ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ. ಎಂದು ರಾಹುಲ್​ ದ್ರಾವಿಡ್​ ಹೇಳಿದ್ದಾರೆ.

ಇಶಾನ್​ ಕಿಶನ್​ಗೆ ಅವಕಾಶ

ಒಂದೊಮ್ಮೆ ಶುಭಮನ್​ ಗಿಲ್​ ಅವರು ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಿಂದ ಹೊರಗುಳಿದರೆ ಅವರ ಸ್ಥಾನದಲ್ಲಿ ಏಡಗೈ ಆಟಗಾರ ಇಶಾನ್​ ಕಿಶನ್​ ಆಡುವ ಸಾಧ್ಯತೆ ಅಧಿಕವಾಗಿದೆ. ರಾಹುಲ್​ ಅವರು ಕೀಪಿಂಗ್​ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ. ಭಾರತ ಮತ್ತು ಆಸೀಸ್​ ನಡುವಣ ಮೊದಲ ಮುಖಾಮುಖಿ ಅಕ್ಟೋಬರ್​ 8ರಂದು ಚೆನ್ನೈಯಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಮಳೆಯ ಭೀತಿಯೂ ಇದೆ.

ಇದನ್ನೂ ಓದಿ ICC World Cup 2023 : ಶುಭ್​ಮನ್​ ಗಿಲ್​ಗೆ ಡೆಂಗ್ಯೂ ಜ್ವರ; ವಿಶ್ವ ಕಪ್​ನಲ್ಲಿ ಭಾರತಕ್ಕೆ ಹಿನ್ನಡೆ

ಗಿಲ್ ಏಕದಿನ ಕ್ರಿಕೆಟ್​ನಲ್ಲಿ ಅದ್ಭುತ ದ್ವಿಶತಕ ಗಳಿಸುವ ಜತಗೆ ಈಗಾಗಕಲೇ ಅತಿ ಕಡಿಮೆ ಇನಿಂಗ್ಸ್​ನಲ್ಲಿ ಅತ್ಯಧಿಕ ರನ್​ ಮತ್ತು ಶತಕ ದಾಖಲಿಸಿ ಮಿಂಚುತಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಸ್ವಲ್ಪ ಕುಸಿತ ಕಂಡಿದ್ದ ಅವರು ಮುಂದಿನ ಸರಣಿಯಲ್ಲಿ ಮತ್ತೆ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ಗೆ ಮರಳಿದ್ದರು. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ ಲೀಗ್​ನಲ್ಲಿ 890 ರನ್​ಗಳೊಂದಿಗೆ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಕಳೆದ ತಿಂಗಳು ಮುಕ್ತಾಯ ಕಂಡ ಏಷ್ಯಾ ಕಪ್​ನಲ್ಲಿ 302 ರನ್​ ಬಾರಿಸಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಕಳೆದ ಕೆಲವು ಇನಿಂಗ್ಸ್​​ಗಳಲ್ಲಿ ಅವರು 104, 74, 27, 121, 19, 58 ಮತ್ತು 67 ರನ್ ಗಳಿಸಿದ್ದಾರೆ.

ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಆರ್​. ಅಶ್ವಿನ್​, ಸೂರ್ಯಕುಮಾರ್‌ ಯಾದವ್​.

Exit mobile version