Site icon Vistara News

IPL 2023 : ಶುಭ್​ಮನ್​ ಶತಕ ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ, ಎಷ್ಟಿತ್ತು ವೀಕ್ಷಕರ ಸಂಖ್ಯೆ?

Shubman Gill century celebration

ಅಹಮದಾಬಾದ್​​: ಐಪಿಎಲ್ 2023ರಲ್ಲಿ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟರ್​​ ಶುಭ್​ಮನ್ ಗಿಲ್​ ತಮ್ಮ ಬ್ಯಾಟಿಂಗ್ ವೈಭವ ಮುಂದುವರಿಸಿದ್ದಾರೆ. ಕಳೆದ ನಾಲ್ಕು ಇನಿಂಗ್ಸ್​ಗಳಲ್ಲಿ ಮೂರನೇ ಐಪಿಎಲ್ ಶತಕವನ್ನು ಬಾರಿಸಿದ್ದಾರೆ. ಅಂತೆಯೇ ಕ್ವಾಲಿಫೈಯರ್​ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 129ರನ್ ಗಳಿಸುವ ಮೂಲಕ ಗಿಲ್ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅವರ ಶತಕದ ನೆರವಿನಿಂದ ಗುಜರಾತ್​ ತಂಡ ಮೊದಲು ಬ್ಯಾಟ್​ ಮಾಡಿ 233 ರನ್ ಬಾರಿಸಿತ್ತು. ಅಂತೆಯೇ ಮುಂಬೈ ವಿರುದ್ದ 62 ರನ್​ಗಳ ವಿಜಯ ದಾಖಲಿಸಿ ಫೈನಲ್​ಗೇರಿತು.

ಇದೇ ವೇಳೆ ಐಪಿಎಲ್​ನ ಆನ್​ಲೈನ್ ಸ್ಟ್ರೀಮಿಂಗ್ ಹಕ್ಕನ್ನು ಹೊಂದಿರುವ ಜಿಯೋ ಸಿನಿಮಾ ಕೂಡ ಹೊಸ ದಾಖಲೆ ಸೃಷ್ಟಿಸಿತು. ಗಿಲ್​ ಶತಕ ಬಾರಿಸಿದ ಈ ಪಂದ್ಯವನ್ನು ಏಕಕಾಲಿಕ್ಕೆ 2.57 ಕೋಟಿ ಮಂದಿ ವೀಕ್ಷಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿಯೇ ದಾಖಲೆಯಾಗಿದೆ. ಶುಭ್​ಮನ್ ಅವರ ಶತಕಕ್ಕೆ ದಾಖಲೆಯ ಮಂದಿ ವೀಕ್ಷಕರಾದರು ಎಂದು ಜಿಯೋ ಸಿನಿಮಾ ಹೇಳಿದೆ.

ವೀಕ್ಷಕರ ಸಂಖ್ಯೆ ಗುಜರಾತ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ಕ್ವಾಲಿಫೈಯರ್ ಪಂದ್ಯ ಮತ್ತು 2019ರ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್​ ಪಂದ್ಯದ ದಾಖಲೆಯನ್ನು ಮೀರಿಸಿದೆ.

ಮಂಗಳವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗಿಲ್ ಅವರ ಶತಕದ ವೈಭವವನ್ನು ಜಿಯೋಸಿನಿಮಾ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿತು ಎಂದು ಜಿಯೊ ಸಿನಿಮಾ ತಿಳಿಸಿದೆ.

ವಯಾಕಾಮ್ 18 ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಕೂಡ ಈ ಕುರಿತು ಮಾತನಾಡಿ. “ಡಿಜಿಟಲ್ ವೇದಿಕೆಯಲ್ಲಿ ಸಮಕಾಲೀನ ವೀಕ್ಷಕರ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಜಿಯೋ ಸಿನೆಮಾ ಒಂದು ಮೈಲಿಗಲ್ಲನ್ನು ಸ್ಥಾಪಿಸಿದೆ” ಎಂದು ಹೇಳಿದ್ದಾರೆ.

ಐಪಿಎಲ್​ 2023ರ ಆರಂಭಿಕ ಏಳು ವಾರಗಳಲ್ಲಿ 1500 ಕೋಟಿ ವೀಡಿಯೊ ವೀಕ್ಷಣೆಗಳನ್ನು ದಾಖಲಿಸುವ ಮೂಲಕ ಡಿಜಿಟಲ್ ಕ್ರೀಡಾ ಜಗತ್ತಿನಲ್ಲಿ ಇದು ಜಾಗತಿಕ ಮೈಲುಗಲ್ಲು ಸ್ಥಾಪಿಸಿದೆ. ಇತ್ತೀಚೆಗೆ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ 2.5 ಕೋಟಿ ವೀಕ್ಷಕರ ದಾಖಲೆ ಸೃಷ್ಟಿಯಾಗಿತ್ತು. ಈ ಮೂಲಕ ಜಿಯೊ ಸಿನಿಮಾ ಹಲವಾರು ಮೈಲುಗಲ್ಲುಗಳನ್ನು ದಾಟುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : IPL 2023 : ಆರ್​ಸಿಬಿ ಸೋಲುತ್ತಿದ್ದಂತೆ ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ ನವಿನ್​ ಉಲ್ ಹಕ್​!

ಜಿಯೋ ಸಿಸಿಮಾದ ಟಾಟಾ ಐಪಿಎಲ್ 2023 ಪ್ರಸ್ತುತಿಯು ನಿರಂತರವಾಗಿ ಹೊಸ ಸಾಧನೆ ಮಾಡುತ್ತಿದೆ. ಋತುವಿನಾದ್ಯಂತ ಪ್ರತಿ ವಾರ ದಾಖಲೆಗಳ ಮೇಲೆ ದಾಖಲೆಗಳನ್ನು ಮುರಿದಿದೆ. ಇದು ಕ್ರಿಕೆಟ್ ಅಭಿಮಾನಿಗಳ ಆದ್ಯತೆಯ ಬದಲಾವಣೆಯ ಪುರಾವೆಯಾಗಿದೆ. ಏಪ್ರಿಲ್ 17 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಎಸ್ ಧೋನಿ ನೇತೃತ್ವದ ಸಿಎಸ್​ಕೆ ತಂಡ ಆಡುವಾಗ 2.4 ಕೋಟಿ ವೀಕ್ಷಕರು ಪಂದ್ಯ ವೀಕ್ಷಿಸಿದ್ದರು ಎಂಬುದಾಗಿಯೂ ಜಿಯೋ ಸಿನಿಮಾ ಹೇಳಿದೆ.

Exit mobile version