ಬರ್ಮಿಂಗ್ಹಮ್: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಜುಡೊ ಪಟು ಸುಶೀಲಾದೇವಿ ಲಿಕ್ಮಬಂ ಮಹಿಳೆಯರ ೪೮ ಕೆ.ಜಿ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತ ಒಟ್ಟು ಪದಕಗಳ ಸಂಖ್ಯೆ ಏಳಕ್ಕೆ ಏರಿದೆ. ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚು ಭಾರತದ ಖಾತೆ ಸೇರಿಕೊಂಡಿದೆ
೪೮ ಕೆ.ಜಿ ವಿಭಾಗದ ಫೈನಲ್ನಲ್ಲಿ ಅವರು ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್ಬೂಯಿ ವಿರುದ್ಧ ಸೋಲುವ ಮೂಲಕ ರಜತ ಪದಕ ತಮ್ಮದಾಗಿಸಿಕೊಂಡರು. ಇದು ಅವರ ಪಾಲಿನ ಎರಡನೇ ಕಾಮನ್ವೆಲ್ತ್ ಬೆಳ್ಳಿ ಪದಕ.೨೦೧೮ ಗೋಲ್ಡ್ ಕೋಸ್ಟ್ನಲ್ಲೂ ಅವರು ರಜತ ಪದಕ ತಮ್ಮದಾಗಿಸಿಕೊಂಡಿದ್ದರು.
ತಮ್ಮ ಗೆಲುವಿನ ಬಳಿಕ ಮಾತನಾಡಿದ ಅವರು “ಚಿನ್ನದ ಪದಕ ಗೆಲ್ಲುವುದೇ ನನ್ನ ಯೋಜನೆಯಾಗಿತ್ತು. ಅದಕ್ಕಾಗಿ ಸತತವಾಗಿ ಪ್ರಯತ್ನ ಪಟ್ಟೆ. ಆದರೆ, ನನಗೆ ಗೆಲುವು ಸಾಧಿಸಲು ಆಗಲಿಲ್ಲ,” ಎಂದು ಹೇಳಿದ್ದಾರೆ.