Site icon Vistara News

Asian Games 2023 : ವಿಶ್ವ ದಾಖಲೆಯೊಂದಿಗೆ ಶೂಟಿಂಗ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಸಿಫ್ಟ್​ ಕೌರ್​

Sift Kaur

ನವದೆಹಲಿ: ಏಷ್ಯನ್ ಗೇಮ್ಸ್ ನ (Asian Games 2023) ಮಹಿಳೆಯರ 50 ಮೀಟರ್ 3 ರೈಫಲ್ ಪೊಸಿಷನ್​ ವಿಭಾಗದ ಫೈನಲ್​ನಲ್ಲಿ 469.6 ಅಂಕಗಳನ್ನು ಗಳಿಸುವ ಮೂಲಕ ಭಾರತದ ಶೂಟರ್ ಸಿಫ್ಟ್ ಕೌರ್ ಸಮ್ರಾ ಭಾರತಕ್ಕೆ ಐದನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಈ ಮೂಲಕ ಈ ವರ್ಷದ ಆರಂಭದಲ್ಲಿ ಬಾಕುವಿನಲ್ಲಿ ಗ್ರೇಟ್ ಬ್ರಿಟನ್​​ನ ಸಿಯೋನೈಡ್ ಮೆಕಿಂತೋಷ್ (467) ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಮುರಿದರು. ಸಿಫ್ಟ್ ಅವರು ಏಷ್ಯನ್ ದಾಖಲೆ ಮತ್ತು ಏಷ್ಯನ್ ಗೇಮ್ಸ್ ದಾಖಲೆಯನ್ನೂ ಮುರಿದಿದ್ದಾರೆ.

ಫೈನಲ್​​ನ್ಲಿ, ಸಿಫ್ಟ್ ಮತ್ತು ಆಶಿ ಇಬ್ಬರೂ ಬಲವಾದ ಮುನ್ನಡೆಯನ್ನು ಕಾಯ್ದುಕೊಂಡಿದ್ದರು. ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕದ ಸ್ಥಾನಗಳಲ್ಲಿದ್ದರು. ಮೊಣಕಾಲೂರಿದ ಸುತ್ತಿನಲ್ಲಿ ಸಿಫ್ಟ್ 154.6 ಅಂಕಗಳನ್ನು ಗಳಿಸಿದರೆ, ಅವರ ಸಹವರ್ತಿ 152.5 ಅಂಕಗಳನ್ನು ಗಳಿಸಿದರು. ಇದು ಸಿಫ್ಟ್ ಗೆ ಗುರಿಯಾಗುವ ಕೊನೆಯಲ್ಲಿ 312.5 ಮತ್ತು ಆಶಿಗೆ 311.6 ಆಯಿತು. ಎಲಿಮಿನೇಷನ್ ನಡೆಯುವ ಸ್ಟ್ಯಾಂಡಿಂಗ್ ಪೊಸಿಷನ್​​ ಕೊನೆಯ ಶಾಟ್​​ನಲ್ಲಿ ಆಸಿ ಅವರು ಕಳಪೆ 8.9 ಅಂಕಗಳನ್ನು ಗಳಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಇದರೊಂದಿಗೆ ಏಷ್ಯನ್ ಗೇಮ್ಸ್​ನ ನಾಲ್ಕನೇ ದಿನವಾದ ಬುಧವಾರ ಬೆಳಗ್ಗಿನಿಂದ ಭಾರತಕ್ಕೆ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿಯ ಪದಕ ದೊರಕಿದಂತಾಗಿದೆ. ಸಿಫ್ಟ್​ ಕೌರ್ ಅವರಿದ್ದ 3ಪಿ ತಂಡ ಬೆಳ್ಳಿಯ ಪದಕವನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡಿತ್ತು. ಈ ತಂಡದಲ್ಲಿ ಆಶಿ ಚೌಕ್ಸೆ ಕೂಡ ಇದ್ದರು. ಇದರೊಂದಿಗೆ ಹಾಲಿ ಆವೃತ್ತಿಯ ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ : Asian Games 2023 : ಶೂಟಿಂಗ್​ನಲ್ಲಿ ಭಾರತಕ್ಕೆ ಚಿನ್ನ, 25 ಮೀಟರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಮಹಿಳೆಯರ ಸಾಧನೆ

ಭಾರತದ ಪದಕಗಳ ಪಟ್ಟಿ

4ನೇ ದಿನದಲ್ಲಿ ಭಾರತದ ಫಲಿತಾಂಶಗಳು

ವುಶು: ಪುರುಷರ ದಾವೋಶು ಫೈನಲ್​​ನಲ್ಲಿ ರೋಹಿತ್ ಜಾಧವ್ 8ನೇ ಸ್ಥಾನ

ಈಜು: ಮಹಿಳೆಯರ 100 ಮೀಟರ್ ಬಟರ್ ಫ್ಲೈ ಹೀಟ್ಸ್ ನಲ್ಲಿ ನೀನಾ ವೆಂಕಟೇಶ್ 1:03:89 ಸಮಯದೊಂದಿಗೆ ಫೈನಲ್ ಗೆ ಅರ್ಹತೆ ಪಡೆಯಲು ವಿಫಲರಾದರು

ಈಜು: ಮಹಿಳೆಯರ 100 ಮೀಟರ್ ಬ್ಯಾಕ್​ಸ್ಟ್ರೋಕ್​ ಸ್ಟ್ರೋಕ್ಸ್​ ಹೀಟ್ಸ್​​ನಲ್ಲಿ ಮಾನಾ ಪಟೇಲ್ 13ನೇ ಸ್ಥಾನ ಪಡೆದರು.

ಶೂಟಿಂಗ್: ಭಾರತದ ಆಶಿ ಚೌಕ್ಸೆ, ಮನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ 50 ಮೀಟರ್ ರೈಫಲ್ 3 ಸ್ಥಾನಗಳ ಮಹಿಳಾ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು.

ಮಹಿಳೆಯರ 50 ಮೀಟರ್ ರೈಫಲ್ ಸಿಫ್ಟ್​ ಕೌರ್​ಗೆ ಚಿನ್ನ, ಆಶಿಗೆ ಕಂಚಿನ ಪದಕ.

Exit mobile version