Site icon Vistara News

IPL 2023 : ಎರಡೆರಡು ಬಾರಿ ಲಾಮ್ರೋರ್​ ಕ್ಷಮೆ ಕೋರಿದ ಸಿರಾಜ್​; ಏನಾಯಿತು ಅವರಿಗೆ?

Siraj apologized to Lamror twice; What happened to them?

#image_title

ಬೆಂಗಳೂರು: ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ವೇಗದ ಬೌಲರ್​ ಮೊಹಮ್ಮದ್ ಸಿರಾಜ್ ಸಹ ಆಟಗಾರ ಮಹಿಪಾಲ್​ ಲಾಮ್ರೋರ್​ ಬಳಿ ಎರಡೆರಡು ಸಲ ಕ್ಷಮೆ ಕೋರಿದ್ದಾರೆ. ಕ್ಷಮೆ ಕೋರುವ ವಿಡಿಯೊವನ್ನು ಆರ್​​ಸಿಬಿ ಯೂಟ್ಯೂಬ್ ಚಾನೆಲ್​ನಲ್ಲಿ ಪ್ರಕಟಿಸಿದೆ. ಸಿರಾಜ್​ ಕ್ಷಮೆ ಕೋರುವುದಕ್ಕೂ ಕಾರಣವಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಮೊಹಮ್ಮದ್​ ಸಿರಾಜ್ ಕೋಪದಿಂದ ಲಾಮ್ರೋರ್​ ಅವರನ್ನು ನಿಂದಿಸಿದ್ದರು. ಅದನ್ನು ಮುಂದುವರಿಸದೇ ಕ್ಷಮೆ ಕೋರಿ ಮುಕ್ತಾಯಗೊಳಿಸಿದ್ದಾರೆ. ಹೀಗಾಗಿ ಆರ್​ಸಿಬಿ ಫ್ರಾಂಚೈಸಿ, ಈ ವಿಷಯವನ್ನು ಅಭಿಮಾನಿಗಳಿಗೆ ತಿಳಿಸುವ ಉದ್ದೇಶದಿಂದ ವಿಡಿಯೊ ಹಾಕಿದೆ.

ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಆರ್​ಸಿಬಿ ತಂಡ ವಿಜಯ ಸಾಧಿಸಿತ್ತು. 190 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ 182 ರನ್​ಗಳಿಗೆ ಇನಿಂಗ್ಸ್​ ಮುಗಿಸಿದ ಕಾರಣ ಆರ್​ಸಿಬಿಗೆ ಜಯ ಸಿಕ್ಕಿತ್ತು. ಪಂದ್ಯದ 19ನೇ ಓವರ್​ ಸಿರಾಜ್​ ಎಸೆದಿದ್ದರು. ಆ ಓವರ್​ನ ಕೊನೇ ಎಸೆತವನ್ನು ಬ್ಯಾಟರ್​ ಧ್ರುವ್​ ಜುರೇಲ್​ ಲಾಂಗ್​ ಆನ್​ ಕಡೆ ಕಳುಹಿಸಿದ್ದರು. ಅಲ್ಲಿ ಫೀಲ್ಡ್​ ಮಾಡುತ್ತಿದ್ದ ಲಾಮ್ರೋರ್​ ಚೆಂಡನ್ನು ವಾಪಸ್ ಎಸೆಯುವುದು ತಡವಾಯಿತು. ಹೀಗಾಗಿ ರಾಜಸ್ಥಾನ್​ ತಂಡ ಎರಡು ರನ್​ ಗಳಿಸಿತು. ಇದರಿಂದ ಕೋಪಗೊಂಡ ಸಿರಾಜ್​ lಲಾಮ್ರೊರ್​​ಗೆ ನಿಂದಿಸಿದ್ದರು.

ಇದನ್ನೂ ಓದಿ : IPL 2023: ಪತ್ನಿಯೊಂದಿಗೆ ಮಸ್ತ್ ಸ್ಟೆಪ್ಸ್‌​ ಹಾಕಿ ಗಾಯಗೊಂಡ ವಿರಾಟ್​ ಕೊಹ್ಲಿ; ಆರ್​ಸಿಬಿ ಗತಿಯೇನು?

ಮೈದಾನದಿಂದ ವಾಪಸಾದ ತಕ್ಷಣ ಮೊಹಮ್ಮದ್​ ಸಿರಾಜ್​ ಲಾಮ್ರೊರ್​ ಕ್ಷಮೆ ಕೋರಿದ್ದಾರೆ. ಅದೇ ರೀತಿ ವಿಡಿಯೊದ ಮೂಲಕ ಮತ್ತೊಮ್ಮೆ ಕ್ಷಮೆ ಕೋರಿದ್ದಾರೆ. ನನಗೆ ತುಂಬಾ ಸಿಟ್ಟು ಬಂದಿತ್ತು. ನಾನು ಎರಡು ಬಾರಿ ಈಗಾಗಲೇ ಕ್ಷಮೆ ಕೋರಿದ್ದೇನೆ. ಈ ಕೋಪವನ್ನು ಮೈದಾನಕ್ಕಿಂತ ಹೊರಗಡೆ ತರುವುದು ನನಗೆ ಇಷ್ಟವಿಲ್ಲ. ಪಂದ್ಯ ಮುಗಿದ ತಕ್ಷಣವೇ ಎಲ್ಲವೂ ಮುಕ್ತಾಯಗೊಂಡಿದೆ,” ಎಂದು ಸಿರಾಜ್​ ವಿಡಿಯೊದಲ್ಲಿ ಹೇಳಿದ್ದಾರೆ. ಲಾಮ್ರೊರ್ ಕೂಡ ಸಿರಾಜ್​ ಕ್ಷಮೆಯನ್ನು ಸ್ವೀಕರಿಸಿದ್ದಾರೆ. ”ಸಿರಾಜ್​ ಭಾಯ್​ ನನಗೇನೂ ಬೇಸರವಿಲ್ಲ. ದೊಡ್ಡ ದೊಡ್ಡ ಪಂದ್ಯಗಳ ವೇಳೆ ಇಂಥ ಸಣ್ಣ ಸಂಗತಿಗಳು ನಡೆಯುತ್ತವೆ,” ಎಂದು ಅವರು ಹೇಳಿದ್ದಾರೆ.

ಆರ್​ಸಿಬಿಗೆ ನಾಲ್ಕನೇ ಜಯ

ಪಂದ್ಯದಲ್ಲಿ ಆರ್​ಸಿಬಿ ತಂಡ 7 ರನ್​ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ತಾನಾಡಿದ 7 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿ 8 ಅಂಕ ಸಂಪಾದಿಸಿದೆ. ಆರ್​ಸಿಬಿ ಪರ ಬ್ಯಾಟಿಂಗ್​ನಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್(77) ಮತ್ತು ಫಾಫ್​ ಡು ಪ್ಲೆಸಿಸ್(62)​ ಮಿಂಚಿದರೆ, ಬೌಲಿಂಗ್​ನಲ್ಲಿ ಹರ್ಷಲ್​ ಪಟೇಲ್​ 3 ವಿಕೆಟ್ ಕಿತ್ತರು.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಐಪಿಎಲ್​ನ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್​ ರಾಯಲ್ಸ್​ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸಿ ಸಣ್ಣ ಅಂತರದಿಂದ ಸೋಲು ಕಂಡಿತು.

Exit mobile version