Site icon Vistara News

Team India : ಬೌಲಿಂಗ್ ಬಲ ಹೆಚ್ಚಳಕ್ಕೆ ತಂತ್ರ ಹೇಳಿಕೊಟ್ಟ ಮಾಜಿ ಕೋಚ್​

Bharat Arun

ಬೆಂಗಳೂರು: ದಕ್ಷಿಣ ಆಫ್ರಿಕಾ (IND vs SA) ವಿರುದ್ಧದ ಟೆಸ್ಟ್​ ಪಂದ್ಯದ ಎರಡೂ ಇನ್ನಿಂಗ್ಸ್​ಗಳಲ್ಲಿ ಭಾರತೀಯ (Team India) ಬ್ಯಾಟರ್​ಗಳು ಕೇವಲ 376 ರನ್ ಗಳಿಸಲು ಸಾಧ್ಯವಾಗಿತ್ತು. ಅದೇ ಪಿಚ್​ನಲ್ಲಿ ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್​ 185 ರನ್ ಗಳಿಸಿದ್ದಾರೆ. ಸೆಂಚೂರಿಯನ್​ನಲ್ಲಿ ನಡೆದ ಪಂದ್ಯದ ವೈಫಲ್ಯಕ್ಕೆ ಜಸ್ಪ್ರೀತ್ ಬುಮ್ರಾ (Jasprt Bumrah) ಹೊರತುಪಡಿಸಿ ಉಳಿದ ಬೌಲರ್​ಗಳ ತಂತ್ರಗಾರಿಕೆಯ ವೈಫಲ್ಯವೇ ಕಾರಣವಾಗಿದೆ. ಕೇಪ್​ಟೌಟ್​ನಲ್ಲಿ (Cape Town) ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಿರ್ಣಾಯಕ ಟೆಸ್ಟ್ ಪಂದ್ಯ ಈ ಕಾರಣಕ್ಕೆ ಕಳೆಗಟ್ಟಿದೆ. ಈ ಕುರಿತು ಮಾತನಾಡಿದ ಭಾರತದ ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ (Bharat Arun) ಹಾಲಿ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಅವರಿಗೆ ನೀಡಿದ ಸಲಹೆಯೆಂದರೆ ಪ್ರತಿ ಬೌಲರ್​ಗಳ ಜತೆ ಕುಳಿತು ಸಮಾಲೋಚನೆ ನಡೆಸುವುದಾಗಿದೆ.

ಭರತ್ ಅರುಣ್ ಭಾರತೀಯ ಬೌಲಿಂಗ್ ಕೋಚ್ ಆಗಿದ್ದ ಅವಧಿಯಲ್ಲಿ, ವೇಗದ ಬೌಲರ್​ಗಳು ಉತ್ತಮ ಪ್ರದರ್ಶನ ನೀಡಿದ್ದರು. ಇದು ವಿದೇಶಿ ಪರಿಸ್ಥಿತಿಗಳಲ್ಲಿಯೂ ಅತ್ಯುತ್ತಮ ಬೌಲಿಂಗ್ ಘಟಕಗಳಲ್ಲಿ ಒಂದಾಗಿತ್ತು. ಆದರೆ ಸೆಂಚೂರಿಯನ್ನಲ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಹೊರತುಪಡಿಸಿ ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ದುರ್ಬಲ ಎನಿಸಿಕೊಂಡರು. ಬುಮ್ರಾ-ಸಿರಾಜ್ ಜೋಡಿಯೂ ದಕ್ಷಿಣ ಆಫ್ರಿಕಾ ಬ್ಯಾಟರ್​ಗಳಿಗೆ ಒತ್ತಡ ಹೇರುವಲ್ಲಿ ವಿಫಲಗೊಂಡರು. ಪ್ರಸಿದ್ಧ್ ಕೃಷ್ಣ 20 ಓವರ್​ಗಳಲ್ಲಿ 93 ರನ್ ಬಿಟ್ಟುಕೊಟ್ಟರೆ, ಶಾರ್ದೂಲ್ ಠಾಕೂರ್ 19 ಓವರ್​ಗಳಲ್ಲಿ ಕೇವಲ 1 ವಿಕೆಟ್ ಪಡೆದುಕೊಂಡು 101 ರನ್ ನೀಡಿದರು.

ಇದನ್ನೂ ಓದಿ : David Warner : ವಿಶ್ವದ ಭಯಂಕರ ಬೌಲರ್​ ಯಾರೆಂದು ವಿವರಿಸಿದ ಡೇವಿಡ್​ ವಾರ್ನರ್​

ಟೆಸ್ಟ್ ಪಂದ್ಯವನ್ನು ಗೆಲ್ಲುವುದು ಅಥವಾ ಸೋಲುವುದು ಸರಿ ಎಂದು ನಾನು ಭಾವಿಸುತ್ತೇನೆ. ಆದರೆ ಕೊನೆಯ ಟೆಸ್ಟ್​​ನಲ್ಲಿ ಸೋತ ರೀತಿ ಸರಿಯಾಗಿಲ್ಲ. ಇದೊಂದು ರೀತಿಯ ಶರಣಾಗತಿ ಎಂದು ಅವರು ಹೇಳಿದ್ದಾರೆ.

ಭರತ್ ಅರುಣ್ ಸಲಹೆ ಇದು

ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಕೇಪ್​ಟೌನ್​ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ಭರತ್ ಅರುಣ್, ತಾವು ಈಗ ಡ್ರೆಸ್ಸಿಂಗ್ ರೂಮ್ನಲ್ಲಿದ್ದರೆ, ಪ್ರತಿಯೊಬ್ಬ ಬೌಲರ್​ಗಳ ಜತೆ ಕುಳಿತು ಮಾತನಾಡುತ್ತಿದ್ದೆ ಎಂದು ಹೇಳಿದ್ದಾರೆ.

“ನಾನು ಪ್ರತಿಯೊಬ್ಬ ಬೌಲರ್​ ಜತೆ ಕುಳಿತು ಮಾತನಾಡುತ್ತಿದ್ದೆ. ಅವರ ಬೌಲಿಂಗ್​ ಲೈನ್ ಮತ್ತು ಲೆಂಗ್ತ್​ ಗಳನ್ನು ಪರಿಶೀಲನೆ ನಡೆಸುತ್ತಿದ್ದೆ. ಬೌಲಿಂಗ್ ಮಾಡುವಾಗ ಅವರ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ಅರಿತುಕೊಳ್ಳುತ್ತಿದ್ದೆ. ಬೌಲರ್​ ಏನನ್ನು ಕಾರ್ಯಗತಗೊಳಿಸಲು ಬಯಸುತ್ತಾನೆ ಮತ್ತು ಅದನ್ನು ಪೂರ್ಣಗೊಳಿಸುತ್ತಾನೆಯೇ ಎಂಬುದನ್ನು ತಿಳಿದುಕೊಳ್ಳುತ್ತಿದ್ದೆ ಎಂದು ಅವರು ಹೇಳಿದ್ದಾರೆ.

ಭಾರತ ತಂಡ ಮಾಡಿದ ತಪ್ಪೇನು?

ಬ್ರಿಸ್ಬೇನ್​​ನಲ್ಲಿ ಆಸೀಸ್ ತಂಡವನ್ನು ಸೋಲಿಸಲು ಭಾರತಕ್ಕೆ ಸಹಾಯ ಮಾಡಿದ ಹೊಸ ಬೌಲರ್​ಗಳ ಗುಂಪನ್ನು ಹೊಂದಿರುವ ಭರತ್ ಅರುಣ್, ಸೆಂಚೂರಿಯನ್ನಲ್ಲಿ ಕಳಪೆ ಪ್ರದರ್ಶನದ ನಂತರ ಭಾರತೀಯ ಬೌಲರ್​ಗಳು ಖಂಡಿತವಾಗಿಯೂ ಪುಟಿದೇಳಲಿದ್ದಾರೆ ಎಂದು ಹೇಳಿದ್ದಾರೆ.

ಒಂದೋ ಬೌಲರ್​ಗಳ ಕಾರ್ಯನಿರ್ವಹಣೆಯಲ್ಲಿ ಅಥವಾ ಆಲೋಚನಾ ಪ್ರಕ್ರಿಯೆಯಲ್ಲಿ ನೀವು ತಪ್ಪಾಗಬಹುದು. ಪ್ರತಿಯೊಬ್ಬ ಬೌಲರ್​ ಜತೆ ಕುಳಿತು ಅದನ್ನು ಕಾರ್ಯಗತಗೊಳಿಸಬೇಕಾಗಿದೆ. ಅವರು ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ಪ್ರದೇಶಗಳನ್ನು, ಅವರು ಬ್ಯಾಟರ್​ಗಳಿಗೆ ತೊಂದರೆ ಕೊಟ್ಟ ಪ್ರದೇಶಗಳನ್ನು ಸಹ ಅವರಿಗೆ ತೋರಿಸಿ ಧೈರ್ಯ ತುಂಬಬೇಕಾಗಿದೆ.

ತರಬೇತುದಾರರು ಕಠಿಣವಾಗಿರಬೇಕು ಮತ್ತು ರಚನಾತ್ಮಕ ಟೀಕೆಗಳು ಮಾತ್ರ ಭಾರತವು ಸರಣಿಯನ್ನು 1-1 ರಿಂದ ಸಮಬಲಗೊಳಿಸಲು ಪುಟಿದೇಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ನಮ್ಮಲ್ಲಿರುವ ಎಲ್ಲಾ ಬೌಲರ್​ಗಳು ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಇದನ್ನು ಹಿಂದೆಯೂ ಮಾಡಿದ್ದಾರೆ. ಅವರು ಅದನ್ನು ಮತ್ತೆ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಯಾವುದೇ ಕಾರಣ ಕಾಣುತ್ತಿಲ್ಲ. ಆದರೆ ಅವರನ್ನು ಮರಳಿ ತರುವ ಕೆಲಸವಾಗಬೇಕು. ರಚನಾತ್ಮಕ ಟೀಕೆ ಮುಂದುವರಿಯುವ ಮಾರ್ಗ ಎಂದು ನಾನು ಭಾವಿಸುತ್ತೇನೆ. ಒಮ್ಮೆ ನೀವು ಆ ವಿಷಯಗಳನ್ನು ಸರಿಯಾಗಿ ನಡೆದ ನಂತರ, ನಮ್ಮಲ್ಲಿರುವ ಈ ಬೌಲಿಂಗ್ ದಾಳಿಯ ಮೂಲಕ ವಿದೇಶದಲ್ಲಿ ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಕಷ್ಟು ಅವಕಾಶ ಸೃಷ್ಟಿಸುತ್ತದೆ “ಎಂದು ಅವರು ಹೇಳಿದರು.

Exit mobile version