Site icon Vistara News

Cricket : ಆರು ಎಸೆತಕ್ಕೆ ಆರು ವಿಕೆಟ್ ಉರುಳಿಸಿದ ಬಾಲಕ! ಒಂದೇ ದಿನದಲ್ಲಿ ವರ್ಲ್ಡ್​​ ಫೇಮಸ್​​!

Cricket

#image_title

ನವ ದೆಹಲಿ: ಯಾವುದೇ ರೀತಿಯ ಕ್ರಿಕೆಟ್​ನಲ್ಲಿ (Cricket) ಬೌಲರ್​ ಒಬ್ಬರು ಹ್ಯಾಟ್ರಿಕ್​ ವಿಕೆಟ್​ ಪಡೆಯುವುದು ದೊಡ್ಡ ಸಾಧನೆ. ಆದರೆ, ಸತತವಾಗಿ ಆರು ಎಸೆತಕ್ಕೆ ಆರು ವಿಕೆಟ್​ ಪಡೆಯುವುದು ದೊಡ್ಡ ಸಾಧನೆ. ಇದು ಅಷ್ಟು ಸುಲಭವಲ್ಲ. ಯಾವುದೋ ಒಂದು ಗಳಿಗೆಯಲ್ಲಿ ಇಂಥದ್ದೊಂದು ದಾಖಲೆ ಸೃಷ್ಟಿಸಲು ಸಾಧ್ಯವಿದೆ. ಈ ರೀತಿಯದ್ದೊಂದು ಸಾಧನೆ ಮಾಡಿದ್ದಾನೆ 12 ವರ್ಷದ ಬಾಲಕ. ಇದು ನಡೆದಿರುವು ಇಂಗ್ಲೆಂಡ್​ನ ಕ್ಲಬ್ ಕ್ರಿಕೆಟ್​​ನಲ್ಲಿ

ಈ ಹುಡುಗ ಡಬಲ್​ ಹ್ಯಾಟ್ರಿಕ್ ಸಾಧನೆ ಮಾಡಿದ ಮೊಟ್ಟ ಮೊದಲ ಕ್ರಿಕೆಟಿಗ ಎಂಬ ಸಾಧನೆ ಮಾಡಿದ್ದಾನೆ. ಆತನ ಹೆಸರು ಅಲಿವರ್​ ವೈಟ್​​ಹೌಸ್​. ಬ್ರೋಮ್ಸ್​ಗ್ರೊವ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿರುವ ವೈಟ್​ಹೌಸ್ ಕಳೆದ ತಿಂಗಳು ಈ ಸಾಧನೆ ಮಾಡಿದ ಬಾಲಕ. ಕೂಕ್​ಹಿಲ್​ ಕ್ಲಬ್​ ವಿರುದ್ಧದ ಪಂದ್ಯದಲ್ಲಿ ಆರು ಎಸೆತಗಳಲ್ಲಿ ಎದುರಾಳಿ ತಂಡದ ಆರು ವಿಕೆಟ್​ ಉರುಳಿಸಿದ ವೈಟ್​​ಹೌಸ್​ ಒಟ್ಟು 2 ಓವರ್​ ಎಸೆದು ಒಂದೈ ರನ್ ನೀಡದೆ ಎಂಟು ವಿಕೆಟ್ ಪಡೆದಿದ್ದಾರೆ.

ಅವರು ಮಾಡಿರುವ ಸಾಧನೆಯ ಮಹತ್ವವನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬ್ರೋಮ್ಸ್​ಗ್ರೋವ್​ ಕ್ರಿಕೆಟ್ ಕ್ಲಬ್​​ ತಂಡದ ನಾಯಕ ಜೇಡನ್ ಲೆವಿಟ್ ಬಿಬಿಸಿ ಜತೆ ಮಾತನಾಡುತ್ತಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಒಂದು ಓವರ್​ನಲ್ಲಿ ಡಬಲ್ ಹ್ಯಾಟ್ರಿಕ್ ಸಾಧನೆ ಮಾಡುವುದು ನನ್ನ ಪಾಲಿಗೆ ಸಂಪೂರ್ಣ ಆಶ್ಚರ್ಯಕರ ಸಂಗತಿ. ಇದು ಅದ್ಭುತ ಪ್ರಯತ್ನ. ನನಗೆ ತುಂಬಾ ವಯಸ್ಸಾಗುವವರೆಗೂ ಇದರ ಮಹತ್ವವನ್ನು ಅರಿತುಕೊಳ್ಳಲಾಗುವುದಿಲ್ಲ ಎಂದು ಭಾವಿಸುತ್ತೇನೆ ಎಂದು ವೈಟ್​ಹೌಸ್​ ಹೇಳಿದ್ದಾರೆ.

ಇದನ್ನೂ ಓದಿ : Sachin Tendulkar: ಗೋವಾದಲ್ಲಿ ‘ದಿಲ್ ಚಾಹ್ತಾ ಹೈ’ ಎಂದ ಸಚಿನ್​ ತೆಂಡೂಲ್ಕರ್​

ವೈಟ್​ಹೌಸ್​ ಡಬಲ್​ ಹ್ಯಾಟ್ರಿಕ್​ ಸಾಧನೆ ಮಾಡಿರುವುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಈ ಮೂಲಕ ಅವರು ಇಂಟರ್ನೆಟ್​ ಸೆನ್ಸೇಷನ್ ಎನಿಸಿಕೊಂಡಿದ್ದಾರೆ. ಅಂದ ಹಾಗೆ ಅಲಿವರ್ ವೈಟ್​ಹೌಸ್​ ಕ್ರೀಡಾಸಕ್ತರ ಕುಟುಂಬದಿಂದ ಬಂದ ಕುಡಿ. ಅವರ ತಾಯಿಯ ತಾಯಿ ಅಂದರೆ ಅಜ್ಜಿ 1969 ರ ವಿಂಬಲ್ಡನ್ ಟೆನಿಸ್ ಚಾಂಪಿಯನ್ ಆನ್ ಜೋನ್ಸ್. ಇದು ಕೂಡ ಅವರ ಕ್ರೀಡಾ ಪರಾಕ್ರಮಕ್ಕೆ ಪ್ರೇರಣೆಯಾಗಿದೆ.

Exit mobile version