Site icon Vistara News

ಐಪಿಎಲ್​ ವೇಳೆ ಕೆಜಿಎಫ್​ ಡೈಲಾಗ್​ ಹೊಡೆದ ಗ್ರೀನ್​ಗೆ ಸಿಕ್ಸರ್​ ರುಚಿ ತೋರಿಸಿದ ಸೂರ್ಯ

He looks off balance, but that is Suryakumar Yadav as he goes attacking

ಇಂದೋರ್​: ಐಪಿಎಲ್​ನಲ್ಲಿ(IPL) ಮುಂಬೈ ಇಂಡಿಯನ್ಸ್​(mumbai indians) ಪರ ಆಡುವ ಕ್ಯಾಮರೂನ್​ ಗ್ರೀನ್(Cameron Green)​ ಅವರು ಸಂದರ್ಶನವೊಂದರಲ್ಲಿ ಯಶ್​ ಅಭಿನಯದ ಕೆಜಿಎಫ್(KGF)​ ಸಿನೆಮಾದ ಡೈಲಾಗ್​ ಒಂದನ್ನು ಹೊಡೆದಿದ್ದರು. ‘ಸ್ಕೈ ಈಸ್​ ಮೈ ಡ್ಯಾಡ್​'(SKY Is My Dad) ಎಂದು ಹೇಳಿದ್ದರು. ಆದರೆ ಈ ವಿಡಿಯೊ ಈಗ ವೈರಲ್(viral video)​ ಆಗಿದೆ.

ಗ್ರೀನ್​ ಅವರು ಮುಂಬೈ ತಂಡದ ಸಹ ಆಟಗಾರ ಸೂರ್ಯಕುಮಾರ್​ ಯಾದವ್(Suryakumar Yadav) ಜತೆಗಿನ ಸಂದರ್ಶನದಲ್ಲಿ ಈ ಡೈಲಾಗ್​ ಹೊಡೆದಿದ್ದರು. ಈ ವಿಡಿಯೊ ಈಗ ವೈರಲ್​ ಆಗಲು ಪ್ರಮುಖ ಕಾರಣ, ಆಸೀಸ್​ ವಿರುದ್ಧದ ದ್ವಿತೀಯ ಏಕದಿನ(India vs Australia, 2nd ODI) ಪಂದ್ಯದಲ್ಲಿ ಸೂರ್ಯಕುಮಾರ್​ ಅವರು ಗ್ರೀನ್​ ಅವರ ಓವರ್​ನಲ್ಲಿ ಸತತ ನಾಲ್ಕು ಸಿಕ್ಸರ್​ ಬಾರಿಸಿದ್ದಾರೆ. ಇದನ್ನು ನೆಟ್ಟಿಗರು ಒಂದಕ್ಕೊಂದು ಲಿಂಕ್​ ಮಾಡಿದ್ದಾರೆ. ಅಂದು ಗ್ರೀನ್​ ಅವರು ಸೂರ್ಯಕುಮಾರ್​ ಬಳಿ “ಇಫ್​ ಯುವರ್​ ಬ್ಯಾಡ್​, ಸ್ಕೈ ಈಸ್​ ಮೈ ಡ್ಯಾಡ್” ಎಂದು ಹೇಳಿದ್ದರು. ಇದೀಗ ಅವರಿಗೆ ಸಿಕ್ಸರ್​ ರುಚಿ ತೋರಿಸಿದ್ದಾರೆ.

ಈ ಹಿಂದಿನ ಆಸೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್​ ಗೋಲ್ಡನ್​ ಡಕ್​ ಸಂಕಟಕ್ಕೆ ಸಿಲುಕಿ ಎಲ್ಲಡೆ ಟೀಕೆಗೆ ಒಳಗಾಗಿದ್ದ ಸೂರ್ಯಕುಮಾರ್​ ಈ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಅದರಲ್ಲೂ ಇಂದಿನ ಪಂದ್ಯದಲ್ಲಿ ಕೇವಲ 24 ಎಸೆತದಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ತಮ್ಮ ಎಂದಿನ ಶೈಲಿಯಾದ ನಟರಾಜ ಭಂಗಿಯಲ್ಲಿ ಮೈದಾನದ ಮೂಲೆ ಮೂಲೆಗೂ ಸಿಕ್ಸರ್​ ಬೌಂಡರಿ ಬಾರಿಸಿ ಮೆರೆದಾಡಿದರು.

ಗ್ರೀನ್​ ಅವರ ಓವರ್​ಗೆ ಸತತ 4 ಸಿಕ್ಸರ್​ ಬಾರಿಸಿದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ಇಂದೋರ್‌ನಲ್ಲಿ ಪಂದ್ಯ ನೋಡಲು ಬಂದ ಪ್ರೇಕ್ಷಕರಿಗೆ ಸೂರ್ಯ ಅವರು ತಮ್ಮ ಸಿಗ್ನೇಚರ್ ಸಿಕ್ಸರ್​ ಮೂಲಕ ಚಿಕಿತ್ಸೆ ನೀಡಿದ್ದಾರೆ ಎಂದು ಬರೆದುಕೊಂಡಿದೆ.

ಇದನ್ನೂ ಓದಿ IND vs AUS 2nd ODI: ಗಿಲ್​-ಅಯ್ಯರ್​​ ಬೊಂಬಾಟ್​ ಶತಕ; ಆಸೀಸ್​ ಗೆಲುವಿಗೆ ಬೃಹತ್​ ಗುರಿ

ಸೂರ್ಯಕುಮಾರ್​ ಸಿಕ್ಸರ್​ ವಿಡಿಯೊ

ಸೂರ್ಯಕುಮಾರ್​ ಅವರು ಕೊನೆಯ ತನಕ ನಿಂತು ಉತ್ತಮ ಆಡವಾಡಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. ಕೇವಲ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅವರು ಅಂತಿವಾಗಿ ತಲಾ 6 ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ ಅಜೇಯ 72 ರನ್​ ಗಳಿಸಿದರು. ರಾಹುಲ್​ ಮತ್ತು ಸೂರ್ಯ ಸೇರಿಕೊಂಡು 5ನೇ ವಿಕೆಟ್​ಗೆ 53 ರನ್​ ರಾಶಿ ಹಾಕಿದರು. ಇಶಾನ್​ ಕಿಶನ್​ ಕೂಡ ಬಿರುಸಿನ ಬ್ಯಾಟಿಂಗ್​ ನಡೆಸಿ 18 ಎಸೆತದಲ್ಲಿ 31 ರನ್​ ಪೇರಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.

Exit mobile version