Site icon Vistara News

SL vs IND : ಲಂಕಾ ಪ್ರವಾಸಕ್ಕೆಅಭಿಷೇಕ್​ ನಾಯರ್​​ ಬ್ಯಾಟಿಂಗ್ ಕೋಚ್​​

SL vs IND

ಬೆಂಗಳೂರು: ಐಪಿಎಲ್​ ಫ್ರಾಂಚೈಸಿ ಕೆಕೆಆರ್ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ಭಾರತ ತಂಡದ ಸಹಾಯಕ ಸಿಬ್ಬಂದಿಗಳಲ್ಲಿ ಒಬ್ಬರನ್ನಾಗಿ ನೇಮಿಸುವ ಸಾಧ್ಯತೆಯಿದೆ. ಶ್ರೀಲಂಕಾ ಪ್ರವಾಸದಲ್ಲಿ (SL vs IND) ನಾಯರ್ ಭಾರತ ತಂಡ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ತಂಡದ ಮುಖ್ಯ ತರಬೇತುದಾರರಾಗಿ ಗೌತಮ್ ಗಂಭೀರ್ ಅವರ ಮೊದಲ ನೇಮಕವಾಗಿದೆ. ಆರು ವರ್ಷಗಳಿಂದ ಕೆಕೆಆರ್​​ ತಂಡದ ಬ್ಯಾಟಿಂಗ್​ ಕೋಚ್ ಆಗಿದ್ದ ನಾಯರ್ ಅದಕ್ಕಿಂತ ಮೊದಲು ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ಸುಧಾರಣೆಗಾಗಿ ಶ್ರಮಿಸಿದ್ದರು.

ನಾಯರ್ ಅವರೊಂದಿಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತೊಬ್ಬ ಮಾಜಿ ಕೆಕೆಆರ್ ಆಟಗಾರ – ಪ್ರಸ್ತುತ ಅಮೇರಿಕಾದಲ್ಲಿ ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಎಲ್ಎಕೆಆರ್ ಫ್ರಾಂಚೈಸಿಯಲ್ಲಿ ಸಹಾಯಕ ತರಬೇತುದಾರರಾಗಿ ಕೆಲಸ ಮಾಡುತ್ತಿರುವ ರಿಯಾನ್ ಟೆನ್ ಡೊಸ್ಚಾಟ್ ಅವರನ್ನು ಸೇರಿಸಿಕೊಳ್ಳುವ ನಿರೀಕ್ಷೆಯಿದೆ.

ನಾಯರ್ ಮತ್ತು ದೋಸ್ಚಾಟ್ ಇಬ್ಬರೂ ಬೇರೆಬೇರೆ ಅವಧಿಯಲ್ಲಿ ಕೆಕೆಆರ್ ವ್ಯವಸ್ಥೆಯಲ್ಲಿದ್ದರು. ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ರಿಂಕು ಸಿಂಗ್ ಮತ್ತು ಇತರರಿಗೆ ಕಠಿಣ ಸಮಯದಲ್ಲಿ ಸಹಾಯ ಮಾಡಿದ ಇತಿಹಾಸವನ್ನು ನಾಯರ್ ಹೊಂದಿದ್ದಾರೆ. ಐಪಿಎಲ್​ 2024 ರ ಋತುವಿನಲ್ಲಿ ಕಠಿಣ ಸೋಲಿನ ನಂತರ ನಾಯರ್ ಡ್ರೆಸ್ಸಿಂಗ್ ರೂಮ್​ನಲ್ಲಿ ಪ್ರೇರಣೆ ಕೊಟ್ಟಿರುವ ವಿಷಯವನ್ನೂ ಆಟಗಾರ ವರುಣ್​ ಚಕ್ರವರ್ತಿ ಆ ಬಳಿಕ ಹೇಳಿಕೊಂಡಿದ್ದರು.

“ಕಳೆದ ಪಂದ್ಯದಲ್ಲಿ, ಹೆಚ್ಚು ರನ್ ಬಿಟ್ಟುಕೊಟ್ಟ ನಂತರ ಆ ಆವೃತ್ತಿ ನನಗೆ ನುಂಗಲಾರದ ತುತ್ತಾಗಿತ್ತು. ಆದರೆ ಇಡೀ ತಂಡವು ನಮ್ಮನ್ನು ಪ್ರೇರೇಪಿಸಿತು. ಅಭಿಷೇಕ್ ನಾಯರ್ ಮತ್ತು ಶಾರುಖ್ ಖಾನ್ ಕೂಡ ಬಂದು ನನ್ನೊಂದಿಗೆ ಮಾತನಾಡಿದರು. ನನ್ನನ್ನು ಪ್ರೇರೇಪಿಸಿದರು”ಎಂದು ಚಕ್ರವರ್ತಿ ಐಪಿಎಲ್ ಸಮಯದಲ್ಲಿ ಟ್ವಿಟರ್ ಹೇಳಿದ್ದರು.

ಇದನ್ನೂ ಓದಿ: Paris Olympic 2024 : ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್​ ಕರ್ಣಂ ಮಲ್ಲೇಶ್ವರಿ ಸಾಧನೆಯ ವಿವರ ಇಲ್ಲಿದೆ

ಪರಾಸ್ ಮಾಂಬ್ರೆ (ಬೌಲಿಂಗ್ ಕೋಚ್), ಟಿ ದಿಲೀಪ್ (ಫೀಲ್ಡಿಂಗ್ ಕೋಚ್) ಮತ್ತು ವಿಕ್ರಮ್ ರಾಥೋರ್ (ಬ್ಯಾಟಿಂಗ್ ಕೋಚ್) ಸೇರಿದಂತೆ ಭಾರತೀಯ ಪುರುಷರ ತಂಡದ ಸಹಾಯಕ ಸಿಬ್ಬಂದಿಗಳಾಗಿ ಮುಂದುವರಿಯುವುದಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜುಲೈ 9 ರ ಮಂಗಳವಾರ ಪತ್ರಿಕಾ ಪ್ರಕಟಣೆಯ ಮೂಲಕ ಈ ನಿರ್ಧಾರ ಪ್ರಕಟಿಸಿತ್ತು. ಅಲ್ಲಿ ಭಾರತೀಯ ತಂಡದೊಂದಿಗೆ ಅವರ ಅಧಿಕಾರವಧಿಯನ್ನು ಬಣ್ಣಿಸಲಾಗಿತ್ತು.

Exit mobile version