ಕೊಲೊಂಬೊ: ವಿರಾಟ್ ಕೊಹ್ಲಿ ( ಅಜೇಯ 122 ರನ್), ಕೆ. ಎಲ್ ರಾಹುಲ್ (ಅಜೇಯ 111 ರನ್) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಸ್ಪಿನ್ನರ್ ಕುಲ್ದೀಪ್ ಯಾದವ್ (25 ರನ್ಗಳಿಗೆ 5 ವಿಕೆಟ್) ಅವರ ಮಾರಕ ದಾಳಿಯ ನೆರವಿನಿಂದ ಮಿಂಚಿದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 228 ರನ್ಗಳ ಭರ್ಜರಿ ಜಯ ದಾಖಲಿಸಿದೆ.
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋಲು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 356 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ 32 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 ರನ್ ಬಾರಿಸಿತು. ಹ್ಯಾರಿಸ್ ರವೂಫ್ ಹಾಗೂ ನಾಸಿಮ್ ಶಾ ಬ್ಯಾಟಿಂಗ್ ಮಾಡಿದ ಕಾರಣ ಪಾಕಿಸ್ತಾನ ತಂಡ ಆಲ್ಔಟ್ ಎಂದು ಪರಿಗಣಿಸಿ ಭಾರತಕ್ಕೆ ಜಯ ನೀಡಲಾಯಿತು.
ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಮತ್ತೆ ಪಂದ್ಯ ಅರಂಭಗೊಂಡಿದೆ. ಪೂರ್ಣ 50 ಓವರ್ಗಳ ಇನಿಂಗ್ಸ್ ಆಡಿಸಲು ಅಂಪೈರ್ಗಳು ನಿರ್ಧರಿಸಿದ್ದಾರೆ.
3 ಓವರ್ಗಳಲ್ಲಿ 15 ರನ್ ಬಾರಿಸಿದ ಪಾಕಿಸ್ತಾನ ತಂಡ. ವಿಕೆಟ್ಗಾಗಿ ಹೊಂಚು ಹಾಕುತ್ತಿದೆ ಭಾರತ ಬಳಗ.
ಏಕ ದಿನ ಮಾದರಿಯಲ್ಲಿ 13 ಸಾವಿರ ರನ್ಗಳನ್ನು ಪೂರೈಸಿದ ವಿರಾಟ್ ಕೊಹ್ಲಿ
77ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ ರನ್ ಮೆಷಿನ್ ವಿರಾಟ್ ಕೊಹ್ಲಿ
ಶತಕ ಬಾರಿಸಿ ವಿರಾಟ್ ಕೊಹ್ಲಿ. 47ನೇ ಶತಕ ಬಾರಿಸಿದ ಕೊಹ್ಲಿ.