ಕೊಲೊಂಬೊ: ವಿರಾಟ್ ಕೊಹ್ಲಿ ( ಅಜೇಯ 122 ರನ್), ಕೆ. ಎಲ್ ರಾಹುಲ್ (ಅಜೇಯ 111 ರನ್) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಸ್ಪಿನ್ನರ್ ಕುಲ್ದೀಪ್ ಯಾದವ್ (25 ರನ್ಗಳಿಗೆ 5 ವಿಕೆಟ್) ಅವರ ಮಾರಕ ದಾಳಿಯ ನೆರವಿನಿಂದ ಮಿಂಚಿದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 228 ರನ್ಗಳ ಭರ್ಜರಿ ಜಯ ದಾಖಲಿಸಿದೆ.
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋಲು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 356 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ 32 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 ರನ್ ಬಾರಿಸಿತು. ಹ್ಯಾರಿಸ್ ರವೂಫ್ ಹಾಗೂ ನಾಸಿಮ್ ಶಾ ಬ್ಯಾಟಿಂಗ್ ಮಾಡಿದ ಕಾರಣ ಪಾಕಿಸ್ತಾನ ತಂಡ ಆಲ್ಔಟ್ ಎಂದು ಪರಿಗಣಿಸಿ ಭಾರತಕ್ಕೆ ಜಯ ನೀಡಲಾಯಿತು.
ಏಕ ದಿನ ಮಾದರಿಯಲ್ಲಿ 1000 ರನ್ಗಳ ಜತೆಯಾಟ ನೀಡಿದ ರಾಹುಲ್ ಮತ್ತು ವಿರಾಟ್ ಕೊಹ್ಲಿ
2 ವಿಕೆಟ್ಗೆ 250 ರನ್ ಬಾರಿಸಿದ ಭಾರತ
ಅರ್ಧ ಶತಕ ಬಾರಿಸಿದ ವಿರಾಟ್ ಕೊಹ್ಲಿ
ಮೋಡ ಕವಿದ ವಾತಾವರಣ ಇದ್ದರೂ ಮಳೆ ಬಂದಿಲ್ಲ. ಈ ನಡುವೆ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
107 ಎಸೆತಗಳಲ್ಲಿ 104 ರನ್ ಬಾರಿಸಿದ ರಾಹುಲ್, ಕೊಹ್ಲಿ ಜೋಡಿ.