ಕೊಲೊಂಬೊ: ವಿರಾಟ್ ಕೊಹ್ಲಿ ( ಅಜೇಯ 122 ರನ್), ಕೆ. ಎಲ್ ರಾಹುಲ್ (ಅಜೇಯ 111 ರನ್) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಸ್ಪಿನ್ನರ್ ಕುಲ್ದೀಪ್ ಯಾದವ್ (25 ರನ್ಗಳಿಗೆ 5 ವಿಕೆಟ್) ಅವರ ಮಾರಕ ದಾಳಿಯ ನೆರವಿನಿಂದ ಮಿಂಚಿದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 228 ರನ್ಗಳ ಭರ್ಜರಿ ಜಯ ದಾಖಲಿಸಿದೆ.
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋಲು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 356 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ 32 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 ರನ್ ಬಾರಿಸಿತು. ಹ್ಯಾರಿಸ್ ರವೂಫ್ ಹಾಗೂ ನಾಸಿಮ್ ಶಾ ಬ್ಯಾಟಿಂಗ್ ಮಾಡಿದ ಕಾರಣ ಪಾಕಿಸ್ತಾನ ತಂಡ ಆಲ್ಔಟ್ ಎಂದು ಪರಿಗಣಿಸಿ ಭಾರತಕ್ಕೆ ಜಯ ನೀಡಲಾಯಿತು.
ಅಷ್ಟರೊಳಗೆ ಆರಂಭವಾಗದೇ ಹೋದರೆ ಓವರ್ಗಳ ಕಡಿವಾಗುವ ಸಾಧ್ಯತೆಗಳಿವೆ.
4.40 ರ ಒಳಗೆ ಪಂದ್ಯವೇನಾರೂ ಆರಂಭವಾದರೆ ಪೂರ್ಣ 50 ಓವರ್ಗಳ ಪಂದ್ಯ ನಡೆಯಲಿದೆ.
ಕೊಲೊಂಬೊದಲ್ಲಿ ನಿಂತ ಮಳೆ.ಮುಖ ತೋರಿದ ಸೂರ್ಯ. ಅಭಿಮಾನಿಗಳಿಗೆ ಖುಷಿ.
ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಮಳೆ ಆರಂಭವಾಗಿತ್ತು. ನಾವೆಲ್ಲರೂ ನಿರಾಶೆಗೊಂಡಿದ್ದೇವೆ. ನಾವೆಲ್ಲರೂ ಈ ಪಂದ್ಯವನ್ನು ವೀಕ್ಷಿಸಲು ಬಯಸಿದ್ದೆವು. ನಾನು ಈ ಪಂದ್ಯಕ್ಕಾಗಿ ಭಾರತದಿಂದ ಬಂದಿದ್ದೇನೆ ಮತ್ತು ಭಾರತ ಗೆಲ್ಲಬೇಕೆಂದು ನಾವು ಬಯಸುತ್ತೇವೆ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.