ಕೊಲೊಂಬೊ: ವಿರಾಟ್ ಕೊಹ್ಲಿ ( ಅಜೇಯ 122 ರನ್), ಕೆ. ಎಲ್ ರಾಹುಲ್ (ಅಜೇಯ 111 ರನ್) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಸ್ಪಿನ್ನರ್ ಕುಲ್ದೀಪ್ ಯಾದವ್ (25 ರನ್ಗಳಿಗೆ 5 ವಿಕೆಟ್) ಅವರ ಮಾರಕ ದಾಳಿಯ ನೆರವಿನಿಂದ ಮಿಂಚಿದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 228 ರನ್ಗಳ ಭರ್ಜರಿ ಜಯ ದಾಖಲಿಸಿದೆ.
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋಲು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 356 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ 32 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 ರನ್ ಬಾರಿಸಿತು. ಹ್ಯಾರಿಸ್ ರವೂಫ್ ಹಾಗೂ ನಾಸಿಮ್ ಶಾ ಬ್ಯಾಟಿಂಗ್ ಮಾಡಿದ ಕಾರಣ ಪಾಕಿಸ್ತಾನ ತಂಡ ಆಲ್ಔಟ್ ಎಂದು ಪರಿಗಣಿಸಿ ಭಾರತಕ್ಕೆ ಜಯ ನೀಡಲಾಯಿತು.
ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ.
ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣ ಕೆಸರು ಗೆದ್ದೆಯಂತಾಗಿದ್ದು, ಪಂಧ್ಯ ಆರಂಭದ ಸಾಧ್ಯತೆ ಬಹುತೇಕ ಇಲ್ಲ ಎಂದು ಹೇಳಲಾಗುತ್ತಿದೆ.
ಮಳೆಯ ಕುರಿತು ಆರ್ ಅಶ್ವಿನ್ ಎಕ್ಸ್ ಮಾಡಿದ್ದು, ಕೊಲೊಂಬೊದಲ್ಲಿ ಪಂದ್ಯ ಅಸಾಧ್ಯ. ಇಳಯರಾಜ ಸಾರ್ ಹಾಡುವ ಮತ್ತು ಬಿಸಿ ಚಹಾ ಕುಡಿಯಬಹುದು ಎಂದು ಬರೆದುಕೊಂಡಿದ್ದಾರೆ.
ಜೋರು ಮಳೆ ಬರುತ್ತಿದ್ದರೂ ತಮ್ಮ ತಮ್ಮ ಬಸ್ಗಳ ಮೂಲಕ ಸ್ಟೇಡಿಯಮ್ ತಲುಪಿದ ಎರಡೂ ದೇಶಗಳ ಆಟಗಾರರು.
ಬೆಳಗ್ಗಿನಿಂದಲೇ ಮಳೆ ಸುರಿಯಲು ಆರಂಭಿಸಿದ ಕಾರಣ ಕ್ರೀಡಾಂಗಣಕ್ಕೆ ಮುಚ್ಚಿರುವ ಹೊದಿಕೆಯನ್ನು ತೆಗೆದು ಹಾಕಲು ಸಾಧ್ಯವೇ ಆಗಿಲ್ಲ.