Site icon Vistara News

Soha Ali Khan : ಆಸ್ಟ್ರೇಲಿಯಾದ ಎಂಸಿಜಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿ

Soha Alikhan

ನವದೆಹಲಿ: ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಮಗಳು ಮತ್ತು ನಟಿ ಸೋಹಾ ಅಲಿ ಖಾನ್ ಗುರುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ (ಎಂಸಿಜಿ) ಭೇಟಿ ನೀಡಿ ತಮ್ಮ ತಂದೆ ಒಮ್ಮೆ ಆಡಿದ ಸ್ಥಳವನ್ನು ವೀಕ್ಷಿಸಿದರು. ಎಂಸಿಜಿ ಸೋಹಾ ಅಲಿ ಖಾನ್ ಅವರನ್ನು ಅವರ ಪತಿ ಕುನಾಲ್ ಕೆಮ್ಮು ಅವರೊಂದಿಗೆ ಸ್ವಾಗತಿಸಿದೆ. ಅವರು ತಮ್ಮ ‘ಎಕ್ಸ್’ ಹ್ಯಾಂಡಲ್ನಲ್ಲಿ ಹೃತ್ಪೂರ್ವಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಪಟೌಡಿ ಭಾರತ ತಂಡ ಮಾಜಿ ನಾಯಕರಾಗಿದ್ದರು, ಅವರು 46 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 2793 ರನ್ ಗಳಿಸಿದ್ದಾರೆ. ಅವರು 34.91 ಸರಾಸರಿಯಲ್ಲಿ ಆರು ಶತಕಗಳು ಮತ್ತು 16 ಅರ್ಧಶತಕಗಳನ್ನು ಗಳಿಸಿದ್ದರು. 1967-1968ರ ಮೆಲ್ಬೋರ್ನ್ ಟೆಸ್ಟ್​ನ ಮೋಡ ಕವಿದ ವಾತಾವರಣದಲ್ಲಿ ತಂಡವನ್ನು ಕ್ರಿಕೆಟ್​​ನ ನವಾಬ್ ಮುನ್ನಡೆಸಿದ್ದರು. ಹಸಿರು, ಬೌನ್ಸಿ ಎಂಸಿಜಿ ಮೇಲ್ಮೈಯಲ್ಲಿ 75 ಮತ್ತು 85 ರನ್​ ಬಾರಿಸಿದ್ದರು. ಅವರ ಈ ಇನ್ನಿಂಗ್ಸ್ ಅನ್ನು ಅತ್ಯುತ್ತಮ ಇನಿಂಗ್ಸ್​ ಎಂದು ಕರೆಯಲಾಗುತ್ತದೆ. ಅವರ ಜೀವನ ಶ್ರೇಷ್ಠ ಅತ್ಯಧಿಕ ಸ್ಕೋರ್​ 203 ರನ್.

ಎರಡನೇ ಟೆಸ್ಟ್​ನಲ್ಲಿ ಏನೋ ಕೊರತೆ ಇದೆ ಎಂದ ಸಚಿನ್​

ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ರೋಚಕವಾಗಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲ ದಿನವೇ 23 ವಿಕೆಟ್​​ಗಳು ಉರುಳಿವೆ. ಈ ಬಗ್ಗೆ ಎಲ್ಲರೂ ಚರ್ಚೆ ನಡೆಸುತ್ತಿರುವ ನಡುವೆ ಭಾರತ ತಂಡದ ಮಾಜಿ ಆಟಗಾರ ಹಾಗೂ ದಿಗ್ಗಜ ಸಚಿನ್​ ತೆಂಡೂಲ್ಕರ್ (Sachin Tendulkar) ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ಸಿರಾಜ್ ಅವರ ವೃತ್ತಿಜೀವನದ ಅತ್ಯುತ್ತಮ ಅಂಕಿಅಂಶಗಳಾದ 15 ರನ್​ಗೆ 6 ವಿಕೆಟ್​ ಸಾಧನೆಯಿಂದಾಗಿ ಭಾರತ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿತ್ತು. ಟೀಮ್ ಇಂಡಿಯಾ ಆರಂಭಿಕ ಸೆಷನ್ನಲ್ಲಿ ದಕ್ಷಿಣ ಆಫ್ರಿಕಾದ ಸಂಪೂರ್ಣ ಬ್ಯಾಟಿಂಗ್ ಲೈನ್ಅಪ್ ಅನ್ನು ಕೇವಲ 55 ರನ್​ಗಳಿಗೆ ನಿಯಂತ್ರಿಸಿತ್ತು. ನಂತರದ ಎರಡು ಸೆಷನ್ ಗಳಲ್ಲಿ ಆತಿಥೇಯ ತಂಡ ಭಾರತವನ್ನು 153 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಪ್ರತಿರೋಧ ತೋರಿತು. ದಿನದ ಕೊನೆಯ ಗಂಟೆಯಲ್ಲಿ ದಕ್ಷಿಣ ಆಫ್ರಿಕಾ ತನ್ನ ಎರಡನೇ ಬ್ಯಾಟಿಂಗ್ ವೇಳೆ ಇನ್ನೂ 3 ವಿಕೆಟ್​​ಗಳನ್ನು ಕಳೆದುಕೊಂಡಿತು. ಅದೇ ರೀತಿ ಡಿನ್​ ಎಲ್ಗರ್ ಬಳಗ 36 ರನ್​ಗಳ ಕೊರತೆಯನ್ನು ಎದುರಿಸುತ್ತಿದೆ.

Exit mobile version