Site icon Vistara News

Rishabh Pant : ಮುಂದಿನ ಐಪಿಎಲ್​ಗೆ ರಿಷಭ್​ ರೆಡಿ? ಗಂಗೂಲಿ ಹೇಳಿದ್ದೇನು?

Rishabh Pant

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ. ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್​ ರಿಷಭ್ ಪಂತ್ (Rishabh Pant) ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲು ಇನ್ನು ಹೆಚ್ಚು ದಿನಗಳು ಬಾಕಿ ಇಲ್ಲ . ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ 4 ದಿನಗಳ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಭಾಗವಹಿಸಲು ದೆಹಲಿಯ ಸ್ಟಾರ್ ಆಟರಾಗ ಕೋಲ್ಕೊತಾಗೆ ತೆರಳಿದ್ದಾರೆ. ಹೀಗಾಗಿ ಅವರು ಶೀಘ್ರದಲ್ಲಿಯೇ ಮರಳುವ ಸೂಚನೆ ನೀಡಿದಂತಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ, 26ರ ಹರೆಯದ ರಿಷಭ್​ ಉತ್ತಮ ಸ್ಥಿತಿಯಲ್ಲಿದ್ದು, 2024ರ ಐಪಿಎಲ್ ಆವೃತ್ತಿಯಲ್ಲಿ ಆಡಲಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.

“ರಿಷಭ್ ಪಂತ್ ಉತ್ತಮ ಫಾರ್ಮ್​ನಲ್ಲಿದ್ದ ಅವರು ಮುಂದಿನ ಋತುವಿನಿಂದ ಆಡಲಿದ್ದಾರೆ. ಅವರು ಈಗ ಅಭ್ಯಾಸ ಮಾಡುವುದಿಲ್ಲ. ಅವರು ನವೆಂಬರ್ 11 ರವರೆಗೆ ಇಲ್ಲಿರುತ್ತಾರೆ. ಮುಂಬರುವ ಹರಾಜನ್ನು ಗಮನದಲ್ಲಿಟ್ಟುಕೊಂಡು ಪಂತ್ ತಂಡದ ನಾಯಕರಾಗಿರುವುದರಿಂದ ನಾವು ಅವರೊಂದಿಗೆ ತಂಡದ ಬಗ್ಗೆ ಚರ್ಚಿಸಿದ್ದೇವೆ,” ಎಂದು ಗಂಗೂಲಿ ಡಿಯಾ ಟುಡೇಗೆ ಮಾಹಿತಿ ನೀಡಿದ್ದಾರೆ. ಶಿಬಿರದ ಸಮಯದಲ್ಲಿ ರಿಷಭ್ ಪಂತ್ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಶೇಷವೆಂದರೆ, ರಿಷಭ್ ಪಂತ್ ಕಳೆದ ವರ್ಷ ಡಿಸೆಂಬರ್​ನಿಂದ ಕ್ರಿಕೆಟ್​ನಿಂದ ದೂರವಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್​ 2022 ರ ಡಿಸೆಂಬರ್​ನಲ್ಲಿ ಗಂಭೀರ ಕಾರು ಅಪಘಾತಕ್ಕೆ ಒಳಗಾಗಿದ್ದರು. ಕ್ರಿಕೆಟಿಗನ ಮೊಣಕಾಲಿಗೆ ಗಂಭೀರ ಗಾಯವಾಗಿದ್ದು, 2 ತಿಂಗಳಿಗೂ ಹೆಚ್ಚು ಕಾಲ ಹಾಸಿಗೆ ಹಿಡಿದಿದ್ದರು.

ಜೂನ್​ನಿಂದ ಪುನಶ್ಚೇತನ

ಈ ವರ್ಷದ ಜೂನ್​​ನಲ್ಲಿ ಪಂತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನವನ್ನು ಪ್ರಾರಂಭಿಸಿದ್ದರು. ಆಗಸ್ಟ್​​ನಲ್ಲಿ ಬೆಂಗಳೂರಿನಲ್ಲಿ ನಡೆದ ಸ್ಥಳೀಯ ಪಂದ್ಯದ ವೇಳೆ ರಿಷಭ್ ಪಂತ್ ಕೆಲವು ಎಸೆತಗಳನ್ನು ಎದುರಿಸಿದ್ದರು.

ಇದನ್ನೂ ಓದಿ : Rachin Ravindra : ಆರ್​ಸಿಬಿ ಸೇರುತ್ತಾರೆ ರಚಿನ್ ರವೀಂದ್ರ; ಸುಳಿವು ಬಿಟ್ಟುಕೊಟ್ಟ ಕಿವೀಸ್ ತಾರೆ

ಇದಕ್ಕೂ ಮುನ್ನ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ರಿಷಭ್ ಪಂತ್ ಅವರು ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದ ಬದಲು ಜನವರಿಯಲ್ಲಿ ನಡೆಯಲಿರುವ ಭಾರತ ಮತ್ತು ಅಪಘಾನಿಸ್ತಾನ ನಡುವಿ ಸರಣಿಯಲ್ಲಿ ಮರಳಬಹುದು ಎಂದು ದೃಢಪಡಿಸಿದ್ದರು.

“ಇದು ಇನ್ನೂ ಆರಂಭಿಕ ದಿನಗಳು. ಅವರು ನೆಟ್ಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಒಳ್ಳೆಯದು. ಆದರೆ ಅವರಿಗೆ ಇನ್ನೂ ಸ್ವಲ್ಪ ಸಮಯ ಬೇಕು. ಅವರು ದೇಶೀಯ ಕ್ರಿಕೆಟ್​ಗೆ ಹಿಂತಿರುಗಿ ಆತ್ಮವಿಶ್ವಾಸವನ್ನು ಮರಳಿ ಪಡೆಯಬೇಕಾಗಿದೆ. ಬಹುಶಃ, ಎಲ್ಲವೂ ಸರಿಯಾಗಿ ನಡೆದರೆ, ಅಫ್ಘಾನಿಸ್ತಾನದ ವಿರುದ್ಧ ಮರಳಲು ಸಾಧ್ಯವಿದೆ. ಆದರೆ ಅದು ಇನ್ನೂ ಖಚಿತವಾಗಿಲ್ಲ, “ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ, ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ 2024 ಹರಾಜಿಗೆ ಎಲ್ಲಾ ಫ್ರಾಂಚೈಸಿಗಳು ಸಿದ್ಧತೆಗಳನ್ನು ಪ್ರಾರಂಭಿಸಿವೆ. ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ ಉಳಿಸಿಕೊಂಡ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫ್ರಾಂಚೈಸಿಗಳಿಗೆ ನವೆಂಬರ್ 26 ರ ಗಡುವನ್ನು ನಿಗದಿಪಡಿಸಿದೆ.

ಪಂತ್​ ಗಾಯದ ಸುಧಾರಣೆ ದಿನಗಳ ವಿವರ

Exit mobile version