Site icon Vistara News

IPL 2023 : ಕೊಹ್ಲಿಗೂ ನನ್ನ ಟ್ವೀಟ್​ಗೂ ಸಂಬಂಧವೇ ಇಲ್ಲ, ನೆಟ್ಟಿಗರ ಮೇಲೆ ಗಂಗೂಲಿ ಕೆಂಡಾಮಂಡಲ

Sourav Ganguly

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್​ ಮಾಡಿದವರಿಗೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಉತ್ತರ ಕೊಡುವುದು ಕಡಿಮೆ. ಬಹುತೇಕ ಆರೋಪಗಳನ್ನು ಅವರು ನಿರ್ಲಕ್ಷಿಸುತ್ತಾರೆ. ಆದರೆ, ಈ ಬಾರಿ ಅವರು ಸಂಯಮ ಕಳೆದುಕೊಂಡಿದ್ದು, ತಮ್ಮ ಟ್ವೀಟ್ ತಿರುಚಲು ಪ್ರಯತ್ನಿಸುತ್ತಿರುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಐಪಿಎಲ್ 2023ರಲ್ಲಿ (IPL 2023) ಗುಜರಾತ್ ಟೈಟನ್ಸ್ ಆರಂಭಿಕ ಬ್ಯಾಟ್ಸ್​ಮನ್​ ಶುಭ್​ಮನ್ ಗಿಲ್ ಹಾಲಿ ಆವೃತ್ತಿಯ ತಮ್ಮ ಎರಡನೇ ಶತಕವನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಆರ್​ಸಿಬಿಯ ವಿರುದ್ಧ ಗುಜರಾತ್​ ಜೈಂಟ್ಸ್ ತಂಡ ಗೆಲುವು ಸಾಧಿಸಿತ್ತು. ಇದೇ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ್ದ ಆರ್​ಸಿಬಿಯ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿಯೂ ಶತಕ ಬಾರಿಸಿದ್ದರು. ಈ ಬಗ್ಗೆ ಟ್ವೀಟ್​ ಮಾಡಿದ್ದ ಸೌರವ್​ ಗಂಗೂಲಿ ಗಿಲ್​ ಅವರನ್ನು ಶ್ಲಾಘಿಸಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸಿ ಸಾಕಷ್ಟು ಮಂದಿ, ಸೌರವ್​ ಗಂಗೂಲಿ ಅವರು ವಿರಾಟ್ ಕೊಹ್ಲಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದಾಗಿ ಸಾಕಷ್ಟು ಮಂದಿ ಬರೆದಿದ್ದರು. ಇದಕ್ಕೆ ಕೆಂಡಾಮಂಡಲವಾಗಿರುವ ಗಂಗೂಲಿ ಪ್ರತ್ಯುತ್ತರ ಕೊಟ್ಟಿದ್ದಾರೆ.

ಗಂಗೂಲಿ ಅವರು ಶುಭ್​ಮನ್​ ದೊಡ್ಡ ಅಭಿಮಾನಿ. ಆರ್​ಸಿಬಿ ವಿರುದ್ಧ ಅವರು ಶತಕ ಬಾರಿಸಿದ್ದನ್ನು ಉಲ್ಲೇಖಿಸಿ ಬರೆದ ಅವರು “ಈ ದೇಶವು ಎಂತಹ ಪ್ರತಿಭೆಯನ್ನು ಉತ್ಪಾದಿಸುತ್ತದೆ .. ಶುಬ್ಮನ್ ಗಿಲ್.. ವಾವ್.. ಎರಡು ಶತಕಗಳು., “ಎಂದು ಟ್ವೀಟ್​ ಮಾಡಿದ್ದರು.

ಅಭಿಮಾನಿಗಳು ಗಂಗೂಲಿ ಅವರ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರು ಮತ್ತು ಭಾರತದ ಮಾಜಿ ನಾಯಕ ಉದ್ದೇಶಪೂರ್ವಕವಾಗಿ ಕೊಹ್ಲಿಯ ಹೆಸರನ್ನು ಉಲ್ಲೇಖಿಸಲಿಲ್ಲ ಎಂದು ಭಾವಿಸಿದ್ದರು. ಅದೇ ದಿನ ಮಧ್ಯಾಹ್ನದ ಪಂದ್ಯದಲ್ಲಿ ಶತಕ ಬಾರಿಸಿದ ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಗಂಗೂಲಿ ಹೊಗಳಿದ್ದಾರೆ ಎಂದು ಅನೇಕರು “ಎರಡು ಶತಕಗಳು” ಎಂದು ಗ್ರಹಿಸಿದ್ದರು.

ಇದನ್ನೂ ಓದಿ : ತ್ರಿಪುರಾದಲ್ಲಿ ದಾದಾ ಹೊಸ ಇನಿಂಗ್ಸ್ ಶುರು​; ಸೌರವ್​ ಗಂಗೂಲಿ ಬಿಜೆಪಿ ಸೇರ್ಪಡೆ ವಿಷಯ ಮತ್ತೆ ಮುನ್ನೆಲೆಗೆ!

ಭಾರಿ ಟೀಕೆಗಳನ್ನು ಎದುರಿಸಿದ ನಂತರ, ಗಂಗೂಲಿ ಒಂದೆರಡು ದಿನಗಳ ನಂತರ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದಾರೆ. ” ಒಂದು ತ್ವರಿತ ಔಈಜ್ಞಾಪನೆ.. ಟ್ವೀಟ್​ ತಿರುಚುವ ಮೊದಲು ಇಂಗ್ಲಿಂಗ್​ ಬಗ್ಗೆ ಅರ್ಧ ಮಾಡಿಕೊಳ್ಳಿ. ಯಾಕೆಂದರೆ ಎರಡು ಶತಕಗಳು ಎಂದರೆ ಗಿಲ್​ ಹಾಲಿ ಆವೃತ್ತಿಯಲ್ಲಿ ಬಾರಿಸಿರುವ ಎರಡು ಶತಕಗಳು. ಇಂಗ್ಲಿಷ್ ಗೊತ್ತಿಲ್ಲದಿದ್ದರೆ ಇಂಗ್ಲಿಷ್​ ಬಗ್ಗೆ ತಿಳಿದುಕೊಳ್ಳಿ ಎಂದು ಗಂಗೂಲಿ ಬರೆದಿದ್ದಾರೆ.

ಭಾರತದ ಮಾಜಿ ಆರಂಭಿಕ ಆಟಗಾರ ಈ ಟ್ವೀಟ್​​ಗೂ ಕೊಹ್ಲಿಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಹೇಳಿದ್ದಾರೆ.

Exit mobile version