ನವ ದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬೈಲಾ(Constitution)ಗೆ ಬದಲಾವಣೆ ತರಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ಸೂಚಿಸಿದೆ. ಇದರಿಂದ ಅಧ್ಯಕ್ಷ (Sourav Ganguly) ಹಾಗೂ ಕಾರ್ಯದರ್ಶಿ ಜಯ್ ಶಾ (Jay Shah) ಅವರ ಅಧಿಕಾರದ ಅವಧಿ ವಿಸ್ತರಣೆ ಸಾಧ್ಯವಾಗಲಿದೆ.
ಬಿಸಿಸಿಐ ಪ್ರಸ್ತಾಪದಂತೆ ಬೈಲಾಗೆ ಬದಲಾವಣೆ ತರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿರುವುದರಿಂದ ಸತತ ಎರಡನೇ ಅವಧಿಗೆ ಅಧ್ಯಕ್ಷ ಅಥವಾ ಕಾರ್ಯದರ್ಶಿಯು ಸತತ ಎರಡನೇ ಬಾರಿಗೆ ಆಯ್ಕೆಯಾಗಬಹುದಾಗಿದೆ. ಮೊದಲು “ಕೂಲಿಂಗ್ ಆಫ್ ಪೀರಿಯಡ್” ನಿಯಮದ ಅಡಿಯಲ್ಲಿ ಸತತ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಏನಿದು ಕೂಲಿಂಗ್ ಆಫ್ ಪೀರಿಯಡ್?
ಕೂಲಿಂಗ್ ಆಫ್ ಪೀರಿಯಡ್ ನಿಯಮದ ಅಡಿಯಲ್ಲಿ ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿಯು ಸತತ ಎರಡನೇ ಅವಧಿಗೆ ಅಧಿಕಾರ ವಿಸ್ತರಣೆ ಮಾಡಿಕೊಳ್ಳುವ ಹಾಗಿರಲಿಲ್ಲ. ಹಾಗಾಗಿ, ಅಧಿಕಾರ ವಿಸ್ತರಣೆಗೆ ಬಿಸಿಸಿಐ ಕೋರ್ಟ್‌ಗೆ ಪ್ರಸ್ತಾಪ ಸಲ್ಲಿಸಿತ್ತು.
ಈಗ ಎಷ್ಟು ವರ್ಷ ಆಡಳಿತ ಸಾಧ್ಯ?
ಸುಪ್ರೀಂ ಕೋರ್ಟ್ ಒಪ್ಪಿಗೆಯಂತೆ ಇನ್ನುಮುಂದೆ ಬಿಸಿಸಿಐ ಅಧ್ಯಕ್ಷ ಹಾಗೂ ಕಾರ್ಯದರ್ಶಿಯು ೧೨ ವರ್ಷ ಅಧಿಕಾರದಲ್ಲಿ ಇರಬಹುದಾಗಿದೆ. ಬಿಸಿಸಿಐನಲ್ಲಿ ಆರು ವರ್ಷ ಹಾಗೂ ಯಾವುದೇ ರಾಜ್ಯ ಕ್ರಿಕೆಟ್ ಅಸೋಸಿಯನ್‌ನಲ್ಲಿ ಆರು ವರ್ಷ ಅಧಿಕಾರದಲ್ಲಿ ಇರಬಹುದಾಗಿದೆ.
ಇದನ್ನೂ ಓದಿ | Virat kohli | ಬೆಂಬಲ ಸಿಕ್ಕಿಲ್ಲ ಎಂಬುದು ಸುಳ್ಳು, ಕೊಹ್ಲಿಗೆ ಹೇಳಿಕೆಗೆ ಬಿಸಿಸಿಐ ಅಧಿಕಾರಿಗಳ ಅಸಮಾಧಾನ