Site icon Vistara News

IPL 2023: ವೈಮನಸ್ಸು ಮರೆತು ಬೆನ್ನು ತಟ್ಟಿ ಅಭಿನಂದಿಸಿದ ವಿರಾಟ್ ಕೊಹ್ಲಿ-ಸೌರವ್​ ಗಂಗೂಲಿ

Ganguly ignored Kohli again, praising only Gill and Green!

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಸೌರವ್​ ಗಂಗೂಲಿ ಮತ್ತು ವಿರಾಟ್​ ಕೊಹ್ಲಿ ನಡುವಣ ವೈಮನಸ್ಸು ಮತ್ತು ಮುಸುಕಿನ ಸಂಘರ್ಷ ಕೊನೆಗೂ ಅಂತ್ಯಗೊಂಡಂತೆ ಕಾಣುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಡೆಲ್ಲಿ ಮತ್ತು ಆರ್​ಸಿಬಿ ವಿರುದ್ಧದ ಐಪಿಎಲ್​ ಪಂದ್ಯದಲ್ಲಿ ಉಭಯ ಆಟಗಾರರ ಮಧ್ಯೆ ನಡೆದ ಮುಸುಕಿನ ಗುದ್ದಾಟವೊಂದು ಭಾರಿ ಸುದ್ದಿಯಾಗುತ್ತು. ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಅವರು ಡಗೌಟ್​ನಲ್ಲಿ ಕುಳಿತ್ತಿದ್ದ ಸೌರವ್ ಗಂಗೂಲಿಯನ್ನು ದಿಟ್ಟಿಸಿ ನೋಡಿದ್ದ ಫೋಟೊ, ಆ ಬಳಿಕ ಆಟಗಾರರು ಸೇರಿದಂತೆ ತಂಡದ ಸಿಬ್ಬಂದಿಗಳು ಪರಸ್ಪರ ಹಸ್ತಲಾಘವ ಮಾಡಿದರೂ ಕೊಹ್ಲಿ ಮತ್ತು ಗಂಗೂಲಿ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ ವಿಡಿಯೊ ಎಲ್ಲೆಡೆ ಹರಿದಾಟಿತ್ತು. ಇದೀಗ ವೈಮನಸ್ಸು ಮರೆತು ಕೊಹ್ಲಿ ಮತ್ತು ಗಂಗೂಲಿ ಹಸ್ತಲಾಘವ ಮಾಡಿ ಪರಸ್ಪರ ಗೌರವ ತೋರುವ ಮೂಲಕ ಗಮನ ಸೆಳೆದಿದ್ದಾರೆ.

ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್​ನ 50ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಫಿಲಿಪ್ ಸಾಲ್ಟ್ ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ 16.4 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ 7 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು.

ಇದನ್ನೂ ಓದಿ IPL 2023: ಫಿಲಿಪ್ ಸಾಲ್ಟ್, ವಾರ್ನರ್​ ಜತೆ ಮೊಹಮ್ಮದ್​ ಸಿರಾಜ್​ ಕಿರಿಕ್​; ವಿಡಿಯೊ ವೈರಲ್​

ಪಂದ್ಯ ಮುಕ್ತಾಯದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಅಭಿನಂದಿಸಿದ್ದಾರೆ. ಇದೇ ವೇಳೆ ಗಂಗೂಲಿ ಮತ್ತು ವಿರಾಟ್​ ಕೊಹ್ಲಿಯೂ ತಮ್ಮ ಹಳೆಯ ದ್ವೇಷ ಮರೆತು ಒಬ್ಬರಿಗೊಬ್ಬರು ಬೆನ್ನು ತಟ್ಟಿ ಹಸ್ತಲಾಘವ ಮಾಡುವ ಮೂಲಕ ತಮ್ಮ ಶೀಲತ ಸಮರಕ್ಕೆ ಅಂತ್ಯ ಹಾಡಿದರು. ಕೊಹ್ಲಿ ಮತ್ತು ಗಂಗೂಲಿ ಅವರು ಬೆನ್ನುತಟ್ಟುತ್ತಿರುವ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇವರಿಬ್ಬರ ಮಧ್ಯೆ ಮುನಿಸಿಗೆ ಕಾರಣವೇನು?

2021 ರಲ್ಲಿ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ನಾಯಕತ್ವದಿಂದ ವಜಾಗೊಳಿ ರೋಹಿತ್​ ಶರ್ಮಾ ಅವರಿಗೆ ನಾಯಕತ್ವ ನೀಡಲಾಗಿತ್ತು. ಈ ವೇಳೆ ಸೌರವ್​ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿದ್ದರು. ಕೊಹ್ಲಿ ಏಕದಿನ ತಂಡದ ನಾಯಕತ್ವದ ಪದಚ್ಯುತಿಗೆ ಗಂಗೂಲಿಯೇ ಮೂಲ ಕಾರಣ ಎನ್ನಲಾಗಿತ್ತು. ಇದೇ ವಿಚಾರವಾಗಿ ಕೊಹ್ಲಿ ಅವರು ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸುವ ವಿಚಾರವನ್ನು ಬಿಸಿಸಿಐ ಅಧ್ಯಕ್ಷರು ನನಗೆ ಹೇಳಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಆದರೆ ಈ ಆರೋಪವನ್ನು ಗಂಗೂಲಿ ತಳ್ಳಿಹಾಕಿದ್ದರು. ಹೀಗಾಗಿ ಅಂದಿನಿಂದ ಈ ದಿಗ್ಗಜರ ನಡುವಿನ ಸಮರ ಮುಂದುವರಿದಿತ್ತು. ಆದರೆ ಇದೀಗ ಎಲ್ಲ ವೈಮನಸ್ಸು ಅಂತ್ಯ ಕಂಡಿದೆ.

Exit mobile version