ತಿರುವನಂತಪುರ : ಮೂರು ಪಂದ್ಯಗಳ ಟಿ೨೦ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ (IND vs SA) ತಂಡ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೦೬ ರನ್ ಗಳಿಸಿದೆ. ಇದರೊಂದಿಗೆ ರೋಹಿತ್ ಶರ್ಮ ನೇತೃತ್ವದ ಟೀಮ್ ಇಂಡಿಯಾ ೧೦೭ ರನ್‌ಗಳ ಗೆಲುವಿನ ಸವಾಲು ಪಡೆದುಕೊಂಡಿದೆ.
ತಿರುವನಂತಪುರದ ಗ್ರೀನ್‌ಫೀಲ್ಡ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು, ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಭಾರತದ ವೇಗದ ಬೌಲರ್‌ಗಳಾದ ದೀಪಕ್ ಚಾಹರ್ ೨೪ ರನ್ ವೆಚ್ಚದಲ್ಲಿ ೨ ವಿಕೆಟ್ ಪಡೆದರೆ, ಅರ್ಶದೀಪ್ ೩೨ ರನ್‌ಗಳಿಗೆ ೩ ವಿಕೆಟ್ ಪಡೆಯುವ ಮೂಲಕ ಎದುರಾಳಿ ತಂಡವನ್ನು ಸಂಪೂರ್ಣವಾಗಿ ನಿಯಂತ್ರಿಸಿದರು. ಕ್ವಿಂಟನ್ ಡಿ’ಕಾಕ್ ಒಂದು ರನ್ ಬಾರಿಸಿದರೆ ತೆಂಬ ಬವುಮಾ, ರೀ ರೊಸ್ಸೊ, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್ ಸೊನ್ನೆ ಸುತ್ತಿದರು. ಹೀಗಾಗಿ ೯ ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕೇಶವ್ ಮಹಾರಾಜ್ (೪೧) ಹಾಗೂ ವೇಯ್ನ್ ಪಾರ್ನೆಲ್ (೨೪) ಪ್ರವಾಸಿ ತಂಡಕ್ಕೆ ಆಧಾರವಾದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಮೂರಂಕಿ ಮೊತ್ತವನ್ನು ದಾಟಿತು.
ಸ್ಕೋರ್ ವಿವರ: ದಕ್ಷಿಣ ಆಫ್ರಿಕಾ ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೦೬ (ಕೇಶವ್ ಮಹಾರಾಜ್ ೪೧, ವೇಯ್ನ್ ಪಾರ್ನೆಲ್ ೨೪; ದೀಪಕ್ ಚಾಹರ್ ೨೪ಕ್ಕೆ೨, ಅರ್ಶ್‌ದೀಪ್ ಸಿಂಗ್ ೩೨ಕ್ಕೆ೨, ಹರ್ಷಲ್ ಪಟೇಲ್ ೨೪ಕ್ಕೆ೨, ಅಕ್ಷರ್ ಪಟೇಲ್ ೪ಕ್ಕೆ ೧).