Site icon Vistara News

IND vs SA: ‘ಚೆನ್ನಾಗಿ ಸ್ವಚ್ಛಗೊಳಿಸಲಾಗಿದೆ’ ಜಾಂಟಿ ರೋಡ್ಸ್ ಹೀಗೆ ಹೇಳಿದ್ದೇಕೆ?

jonty rhodes post

ಜೊಹಾನ್ಸ್​ ಬರ್ಗ್​: ಹಾಲಿ ಆವೃತ್ತಿಯ ವಿಶ್ವಕಪ್​ನಲ್ಲಿ ಅತ್ಯಂತ ಶ್ರೇಷ್ಠ ಪ್ರದರ್ಶನ ತೋರುತ್ತ ಮುನ್ನಗುತ್ತಿದ್ದ ದಕ್ಷಿಣ ಆಫ್ರಿಕಾ(IND vs SA) ತಂಡ ಭಾರತ ವಿರುದ್ಧ ಕೇವಲ 83 ರನ್​ಗೆ ಸರ್ವಪತನ ಕಂಡು ಅತ್ಯಂತ ಹೀನಾಯ ಸೋಲು ಕಂಡಿತು. ಈ ಸೋಲಿನ ಬಳಿಕ ತಂಡದ ಮಾಜಿ ಆಟಗಾರ ಜಾಂಟಿ ರೋಡ್ಸ್(Jonty Rhodes) ​ಅವರು ವಿಭಿನ್ನ ಶೈಲಿಯಲ್ಲಿ ಪೋಸ್ಟ್​ ಮಾಡಿ ಗಮನಸೆಳೆದಿದ್ದಾರೆ.

ದಕ್ಷಿಣ ಆಫ್ರಿಕಾದ ಲೆಜೆಂಡರಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರು ಟ್ವಿಟರ್​ ಎಕ್ಸ್ ಪೋಸ್ಟ್​ನಲ್ಲಿ ತಮ್ಮ ರಾಯಲ್ ಎನ್‌ಫೀಲ್ಡ್ ಹಂಟರ್‌ ಬೈಕ್​ ಮಕ್ಕಳಿಬ್ಬರು ಸ್ವಚ್ಛಗೊಳಿಸುತ್ತಿರುವ ಫೋಟೊವನ್ನು ಹಾಕಿ ‘ಇದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಫಲಿತಾಂಶಕ್ಕೆ ಸರಿ ಹೊಂದುತ್ತದೆ. ಚೆನ್ನಾಗಿ ಸ್ವಚ್ಛಗೊಳಿಸಲಾಗಿದೆ” ಎಂದು ಬರೆದಿದ್ದಾರೆ. ಅವರ ಈ ಪೋಸ್ಟ್​ ಹಿಂದಿರುವ ಉದ್ದೇಶವೇನಂದರೆ ದಕ್ಷಿಣ ಆಫ್ರಿಕಾದ ಕಳಪೆ ಪ್ರದರ್ಶನ ಹಾಗೂ ಭಾರತ ತಂಡ ಶ್ರೇಷ್ಠ ಪ್ರದರ್ಶನ.

ಭಾರತ ವಿರುದ್ಧ ಆಡುವ ಮುನ್ನ ದಕ್ಷಿಣ ಆಫ್ರಿಕಾ ಆಡಿದ ಏಳು ಪಂದ್ಯಗಳಲ್ಲಿ 1 ಪಂದ್ಯದಲ್ಲಿ ಸೋತು ಉಳಿದ ಆರು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ದೊಡ್ಡ ಅಂತರದ ಗೆಲುವು ಸಾಧಿಸಿ ಬೀಗಿತ್ತು. ಅಲ್ಲದೆ ಭಾರವನ್ನು ಸೋಲಿಸುವ ತಂಡವೊಂದಿದ್ದರೆ ಅವದು ದಕ್ಷಿಣ ಆಫ್ರಿಕಾ ಮಾತ್ರ ಎಂದು ಕ್ರಿಕೆಟ್​ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದೆ ದಕ್ಷಿಣ ಆಫ್ರಿಕಾ ದುರ್ಬಲ ತಂಡಗಳು ಭಾರತ ವಿರುದ್ಧ ತೋರಿದ ಪ್ರದರ್ಶನಕ್ಕಿಂತ ಅತ್ಯಂತ ಕೆಟ್ಟದಾಗಿ ಆಡಿತ್ತು. ಇದು ಜಾಂಟಿ ಅವರ ಬೇಸರಕ್ಕೆ ಪ್ರಮುಖ ಕಾರಣ.

ಇದನ್ನೂ ಓದಿ IND vs SA Live: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 243 ರನ್​ ಭರ್ಜರಿ ವಿಜಯ

ಕ್ರಿಕೆಟ್​ ಕಂಡ ಬೆಸ್ಟ್​ ಫೀಲ್ಡರ್​

ಕ್ರಿಕೆಟ್ ಲೋಕದ ಬೆಸ್ಟ್ ಫೀಲ್ಡರ್ ಯಾರು ಎಂದು ಕೇಳಿದರೆ ಕ್ರಿಕೆಟ್ ಅಭಿಮಾನಿಗಳು ತಕ್ಷಣ ಹೇಳುವ ಹೆಸರು ಜಾಂಟಿ ರೋಡ್ಸ್. ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ ಕೇವಲ ಫೀಲ್ಡಿಂಗ್ ನಲ್ಲಿ ಪಂದ್ಯದ ಸ್ಥಿತಿ ಬದಲಿಸುವ ತಾಕತ್ತು ಹೊಂದಿದ್ದರು. 54 ವರ್ಷದ ಜಾಂಟಿ ಸದ್ಯ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಫೀಲ್ಡಿಂಗ್​ ಕೋಚ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಪಂಜಾಜ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡದ ಪರ ಫೀಲ್ಡಿಂಗ್​ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದರು.​

ಬೃಹತ್​ ಮೊತ್ತದ ಗೆಲುವು ಸಾಧಿಸಿದ ಭಾರತ

ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ವಿರಾಟ್​ ಕೊಹ್ಲಿಯ ಶತಕ ಮತ್ತು ಶ್ರೇಯಸ್​ ಅಯ್ಯರ್​ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್​ ಜೋಶ್​ ಮರೆತು 27.1 ಓವರ್​ಗಳಲ್ಲಿ 83 ರನ್​ ಬಾರಿಸಿ ಸರ್ವಪತನ ಕಂಡಿತು. ಭಾರತ 243 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ ಪರ ಜಡೇಜಾ 5 ವಿಕೆಟ್​ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಮೊಹಮ್ಮದ್ ಶಮಿ ಮತ್ತು ಕುಲದೀಪ್​ ಯಾದವ್ ತಲಾ 2 ವಿಕೆಟ್​ ಕಿತ್ತರು. ಕಳೆದ ಪಂದ್ಯದಲ್ಲಿ 5 ವಿಕೆಟ್​ ಉರುಳಿಸಿದ್ದ ಸಿರಾಜ್​ ಈ ಪಂದ್ಯದಲ್ಲಿ 1 ವಿಕೆಟ್​ಗೆ ಸೀಮಿತರಾದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version