Site icon Vistara News

ಭಾರತ ವಿರುದ್ಧ ಆಡುವ ಮುನ್ನವೇ ಸೆಮಿಫೈನಲ್​ ತಲುಪಿದ ದಕ್ಷಿಣ ಆಫ್ರಿಕಾ

south africa semi final

ಬೆಂಗಳೂರು: ದಕ್ಷಿಣ ಆಫ್ರಿಕಾ(south africa) ತಂಡ ಸೆಮಿಫೈನಲ್(south africa semi final)​ ಪ್ರವೇಶ ಪಡೆಯಬೇಕಿದ್ದರೆ ಭಾನುವಾರ ನಡೆಯುವ ಭಾರತ ವಿರುದ್ಧದ ಪಂದ್ಯದಲ್ಲಿ ಗೆಲುವು ಕಾಣಬೇಕಿತ್ತು. ಆದರೆ ಇದೀಗ ಈ ಪಂದ್ಯವನ್ನು ಆಡುವ ಮುನ್ನವೇ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್​ ಪ್ರವೇಶಿಸಿದೆ. ಇದಕ್ಕೆ ಕಾರಣ ನ್ಯೂಜಿಲ್ಯಾಂಡ್​ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದ್ದು.

ಕಿವೀಸ್​ ಸೋಲಿನಿಂದ ಹರಿಣ ಪಡೆ ಸೆಮಿಗೆ

ಹೌದು ದಕ್ಷಿಣ ಆಫ್ರಿಕಾ ತಂಡ 12 ಅಂಕದೊಂದಿಗೆ 2ನೇ ಸ್ಥಾನದಲ್ಲಿತ್ತು. ನ್ಯೂಜಿಲ್ಯಾಂಡ್​ ಸೋಲು ಕಂಡ ಕಾರಣ 8 ಅಂಕದಲ್ಲೇ ಉಳಿಯಿತು. ಇನ್ನು ಕಿವೀಸ್​ಗೆ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಇದನ್ನು ಗೆದ್ದರೂ 10 ಅಂಕ ಮಾತ್ರ ಆಗಲಿದೆ. ಅತ್ತ ಪಾಕ್​ಗೂ ಇನ್ನೊಂದೆ ಪಂದ್ಯ ಬಾಕಿ ಉಳಿದಿದೆ. ಪಾಕ್​ ಕೂಡ ಈ ಪಂದ್ಯ ಗೆದ್ದರೆ 10 ಅಂಕ ಮಾತ್ರ ಸಿಗಲಿದೆ. ಏನೇ ಕಸರತ್ತು ಮಾಡಿದರೂ ಇನ್ನು ದಕ್ಷಿಣ ಆಫ್ರಿಕಾ ತಂಡದ ಅಂಕವನ್ನು ಮೀರಲು ಸಾಧ್ಯವಾಗುದಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ ಎಡರನೇ ತಂಡವಾಗಿ ಸೆಮಿಫೈನಲ್​ ಪ್ರವೇಶ ಪಡೆದಿದೆ. ಭಾರತ ತಂಡ ಲಂಕಾವನ್ನು ಮಣಿಸಿ ಮೊದಲ ತಂಡವಾಗಿ ಸೆಮಿಗೆ ಲಗ್ಗೆಯಿಟ್ಟಿತ್ತು.

ಇದನ್ನೂ ಓದಿ PAK vs NZ: ಪಾಕಿಸ್ತಾನವನ್ನು ಕಾಪಾಡಿದ ಮಳೆರಾಯ; ಕಿವೀಸ್​ ವಿರುದ್ಧ 21 ರನ್​ ಗೆಲುವು

ಒಂದೊಮ್ಮೆ ನ್ಯೂಜಿಲ್ಯಾಂಡ್​ ತಂಡ ಇಂದು ಪಾಕಿಸ್ತಾನ ವಿರುದ್ಧ ಗೆದ್ದಿದ್ದರೆ ದಕ್ಷಿಣ ಆಫ್ರಿಕಾ ತಂಡಕ್ಕೆ ಇನ್ನೊಂದು ಗೆಲುವು ಅತ್ಯಗತ್ಯವಾಗಿತ್ತು. ಸದ್ಯ ಸೆಮಿ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ತಂಡ ಯಾವುದೇ ನಿಶ್ಚಿಂತೆ ಇಲ್ಲದೆ ಭಾನುವಾರ ಭಾರತ ವಿರುದ್ಧ ಕಣಕಿಳಿಯಬಹುದಾಗಿದೆ.

ಆಫ್ಘನ್​-ಆಸೀಸ್​ಗೆ ಅವಕಾಶ

ಇನ್ನು 12 ಅಂಕ ಸಂಪಾದಿಸಲು ಅವಕಾಶವಿರುವುದು ಅಫಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಕ್ಕೆ ಮಾತ್ರ. ಆದರೆ ಇಲ್ಲಿ ಅಫಘಾನಿಸ್ತಾನ 2 ಪಂದ್ಯವನ್ನು ಗಲ್ಲಬೇಕು. ಒಂದು ಪಂದ್ಯ ಆಸೀಸ್​ ವಿರುದ್ಧವೇ ಇದೆ. ಈ ಪಂದ್ಯದಲ್ಲಿ ಆಸೀಸ್​ ಸೋಲು ಕಂಡರೂ ಸದ್ಯ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಗೆಲುವು ಮತ್ತು ಅಂತಿಮ ಪಂದ್ಯದಲ್ಲಿ ಗೆಲುವು ಕಂಡರೆ ಆಸೀಸ್​ಗೂ 12 ಅಂಕ ಆಗಲಿದೆ. ಆಗ ಆಫ್ಘನ್​ ಮತ್ತು ಆಸೀಸ್​ ಸೆಮಿಫೈನಲ್​ ಪ್ರವೇಶ ಪಡೆಯಲಿದೆ. ನ್ಯೂಜಿಲ್ಯಾಂಡ್​ ಮತ್ತು ಪಾಕಿಸ್ತಾನ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಸದ್ಯದ ಅಂಕಪಟ್ಟಿ ಹೀಗಿದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ77014+2.102
ದಕ್ಷಿಣ ಆಫ್ರಿಕಾ76112+2.290
ಆಸ್ಟ್ರೇಲಿಯಾ​6428+0.970
ನ್ಯೂಜಿಲ್ಯಾಂಡ್8448+0.398
ಪಾಕಿಸ್ತಾನ8448+0.036
ಅಫಘಾನಿಸ್ತಾನ7438-0.330
ಶ್ರೀಲಂಕಾ 7254-1.162
ನೆದರ್ಲ್ಯಾಂಡ್ಸ್7254-1.398
ಬಾಂಗ್ಲಾದೇಶ​ 7162-1.446
ಇಂಗ್ಲೆಂಡ್​​​ 6152-1.652
Exit mobile version