Site icon Vistara News

ICC World Cup 2023 : ಕೊಹ್ಲಿ ಶತಕ, ದಕ್ಷಿಣ ಆಫ್ರಿಕಾಗೆ 327 ರನ್​ ಗೆಲುವಿನ ಗುರಿ ಒಡ್ಡಿದ ಭಾರತ

kohli and jadeja

ಕೋಲ್ಕೊತಾ: ವಿರಾಟ್​ ಕೊಹ್ಲಿಯ ದಾಖಲೆಯ ಶತಕ (101 ರನ್​) ಹಾಗೂ ಶ್ರೇಯಸ್ ಅಯ್ಯರ್ ಅವರ ಉಪಯುಕ್ತ ಅರ್ಧ ಶತಕ (77 ರನ್​) ಹಾಗೂ ಕೊನೇ ಹಂತದಲ್ಲಿ ರವೀಂದ್ರ ಜಡೇಜಾ 15 ಎಸೆತಗಳಲ್ಲಿ ಬಾರಿಸಿದ 29 ರನ್​ಗಳ ನೆರವಿನಿಂದ ಮಿಂಚಿದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವ ಕಪ್​ ಪಂದ್ಯದಲ್ಲಿ (ICC World Cup 2023) 5 ವಿಕೆಟ್​ಗೆ 326 ರನ್ ಬಾರಿಸಿದೆ. ಈ ಮೂಲಕ ತೆಂಬಾ ಬವುಮಾ ನೇತೃತ್ವದ ಹರಿಣಗಳ ಪಡೆ 326 ರನ್​ಗಳ ಗೆಲುವಿನ ಗುರಿಯನ್ನು ಪಡೆದುಕೊಂಡಿದೆ. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಪಂದ್ಯವನ್ನು ಭಾರತ ತಂಡದ ಅಭಿಮಾನಿಗಳ ಪಾಲಿಗೆ ವಿಶೇಷ ಎನಿಸಿದರು.

ಇಲ್ಲಿನ ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕೆ ತಕ್ಕಂತೆ ಭಾರತ ತಂಡ ಉತ್ತಮ ಆರಂಭವನ್ನು ಪಡೆಯಿತು. 5.5 ಓವರ್​ಗಳಲ್ಲಿ 62 ರನ್ ಬಾರಿಸಿತು. ರೋಹಿತ್​ ಶರ್ಮಾ 24 ಎಸೆತಗಳಲ್ಲಿ 2 ಸಿಕ್ಸರ್ ಹಾಗಊ 6 ಫೋರ್​ಗಳ ಸಮೇತ 40 ರನ್​ ಬಾರಿಸಿದರು. ಆದರೆ ರಬಾಡ ಎಸೆತಕ್ಕೆ ಬವುಮಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅದಾದ ಬಳಿಕ ಶುಭಮನ್ ಗಿಲ್​ ಎದುರಾಳಿ ತಂಡದ ಸ್ಪಿನ್ನರ್ ಕೇಶವ್ ಮಹಾರಾಜ್​ ಚಾಣಾಕ್ಷ ಎಸೆತಕ್ಕೆ ಬೌಲ್ಡ್​ ಆದರು. ಈ ವೇಳೆ ಭಾರತ ತಂಡ 10. 3 ಓವರ್​ಗಳಲ್ಲಿ 93 ರನ್​ಗೆ 3 ವಿಕೆಟ್ ಕಳೆದುಕೊಂಡಿತು.

ಕೊಹ್ಲಿ- ಶ್ರೆಯಸ್ ಶತಕದ ಜತೆಯಾಟ

ಎರಡನೇ ವಿಕೆಟ್​ ಪತನಗೊಂಡ ತಕ್ಷಣ ಜೋಪನವಾಗಿ ಆಡಲು ಅಡಲು ಆರಂಭಿಸಿದ ಶ್ರೇಯಸ್​ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ನಿಧಾನಕ್ಕೆ ಇನಿಂಗ್ಸ್ ಕಟ್ಟಿದರು. ಮೊದಲಿಗೆ ವಿಕೆಟ್​ ಉರುಳುದಂತೆ ನೋಡಿಕೊಂಡ ಅವರು ನಂತರ ಅವರಿಬ್ಬರು ನಿಧಾನವಾಗಿ ರನ್ ಕದಿಯಲು ಆರಂಭಿಸಿದರು. ಈ ಜೋಡಿ ಮೂರನೇ ವಿಕೆಟ್​ಗೆ 134 ರನ್ ಬಾರಿಸಿತು. ಆದರೆ, ವೇಗದಲ್ಲಿ ರನ್ ಗಳಿಸಲು ಮುಂದಾದ ಅಯ್ಯರ್​ 77 ರನ್ ಬಾರಿಸಿ ಎನ್​ಗಿಡಿ ಎಸೆತಕ್ಕೆ ಕ್ಯಾಚ್ ನೀಡಿ ಔಟಾದರು.

ಶ್ರೇಯಸ್ ವಿಕೆಟ್​ ಪತನದ ಹೊರತಾಗಿಯೂ ಕೊಹ್ಲಿ ರನ್​ ಪ್ರತಿರೋಧ ಒಡುತ್ತಲೇ ಆಡಿದರು. ಆದರೆ, ಐದನೆಯವರಾಗಿ ಆಡಲು ಬಂದ ಕೆ. ಎಲ್​ ರಾಹುಲ್ 8 ರನ್​ಗೆ ಆಟ ಮುಗಿಸಿದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್​ 14 ಎಸೆತಕ್ಕೆ 22 ರನ್ ಬಾರಿಸಿ ಅಬ್ಬರಿಸುವ ಸೂಚನೆ ನೀಡಿದರೂ ಕ್ವಿಂಟನ್ ಡಿ ಕಾಕ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಕೊನೆಯಲ್ಲಿ ಬಂದ ಜಡೇಜಾ ತಂಡದ ಮೊತ್ತ 300 ರ ಗಡಿ ದಾಟುವಂತೆ ನೋಡಿಕೊಳ್ಳುವ ಜತೆಗೆ ಎದುರಾಳಿ ತಂಡಕ್ಕೆ ದೊಡ್ಡ ಮೊತ್ತದ ಗುರಿ ಒಡ್ಡಲು ನೆರವಾದರು.

ಜನ್ಮ ದಿನದಂದು ಅವಿಸ್ಮರಣೀಯ ದಾಖಲೆ ಬರೆದ ಕೊಹ್ಲಿ

ತಾ: ವಿಶ್ವ ಕ್ರಿಕೆಟ್​ನ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ (Virat kohli) ಅವರು ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್ ಅವರು ಏಕದಿನ ದಿನ ಕ್ರಿಕೆಟ್​ನಲ್ಲಿ ಬಾರಿಸಿರುವ 49 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಈಡನ್ ಗಾರ್ಡನ್ಸ್​ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ತಮ್ಮ 35ನೇ ವರ್ಷದ ಜನುದಿನದಿಂದೇ ಅವರು ಈ ಸಾಧನೆ ಮಾಡಿರುವುದು ವಿಶೇಷ ಹಾಗೂ ಅವರ ಪಾಲಿಗೆ ಸ್ಮರಣೀಯ.

ಐತಿಹಾಸಿಕ ಕೋಲ್ಕೊತಾದ ಈಡನ್​ ಗಾರ್ಡನ್ಸ್​ನ ಸ್ಟೇಡಿಯಮ್​ನಲ್ಲಿ ಅವರು ಸಾಧನೆ ಮಾಡಿರುವುದು ಭಾರತ ಕ್ರಿಕೆಟ್​ ಕ್ಷೇತ್ರದ ಪಾಲಿಗೆ ಇನ್ನೂ ವಿಶೇಷ. ವಿರಾಟ್​ ಕೊಹ್ಲಿ ಈಗ 79 ಅಂತಾರಾಷ್ಟ್ರಿಯ ಶತಕದ ಸರದಾರ. ಅವರು ಖಾತೆಯಲ್ಲೀಗ 79 ಶತಕಗಳಿವೆ. ಅದರಲ್ಲಿ 29 ಶತಕ ಟೆಸ್ಟ್​ ಕ್ರಿಕೆಟ್​ನಲ್ಲಾದರೆ ಒಂದು ಶತಕ ಟಿ20 ಕ್ರಿಕೆಟ್​ನಲ್ಲಾಗಿದೆ. ಗರಿಷ್ಠ ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಸಚಿನ್​ ತೆಂಡೂಲ್ಕರ್​ 100 ಶತಕಗಳನ್ನು ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅವರಿಗಿಂತ 21 ಶತಕಗಳಿಂದ ಹಿಂದಿದ್ದಾರೆ.

Exit mobile version