Site icon Vistara News

ICC World Cup 2023 : ಗೆಲುವಿನೊಂದಿಗೆ ಅಭಿಯಾನ ಮುಗಿಸುವುದೇ ಅಫಘಾನಿಸ್ತಾನ?

South Africa Team

ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನವೆಂಬರ್ 10ರಂದು ನಡೆಯಲಿರುವ ಏಕದಿನ ವಿಶ್ವಕಪ್ 2023ರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದೆ. ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ವ್ಯತಿರಿಕ್ತ ಸೋಲುಗಳಿಂದ ಹೊರಬರಬೇಕಾಗಿದೆ. ಆಯಾ ಪಂದ್ಯಗಳ ತಂಡ ಪ್ರದರ್ಶನದ ಬಗ್ಗೆ ಸಮಾನವಾಗಿ ಆಘಾತಕ್ಕೊಳಗಾಗಿದ್ದಾರೆ. ನವೆಂಬರ್ 5 ರ ಭಾನುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಜೇಯ ಭಾರತೀಯ ತಂಡವನ್ನು ಎದುರಿಸಿತ್ತು. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಎರಡು ತಂಡಗಳು ಮುಖಾಮುಖಿಯಾಗುವುದರೊಂದಿಗೆ ಇದು ನಿಕಟ ಸ್ಪರ್ಧೆ ಎನಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ, ಮೆನ್ ಇನ್ ಬ್ಲೂ ತಂಡವು ತೆಂಬಾ ಬವುಮಾ ಮತ್ತು ಬಳಗವನ್ನು 243 ರನ್ ಗಳ ಅಂತರದಿಂದ ಸೋಲಿಸಿತ್ತು.

ಅಫ್ಘಾನಿಸ್ತಾನವು ನವೆಂಬರ್ 7 ರ ಮಂಗಳವಾರ ಮುಂಬೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಿತ್ತು. ಐದು ಬಾರಿಯ ಚಾಂಪಿಯನ್ಸ್ ಆಸ್ಟ್ರೇಲಿಯಾ ಗೆಲುವಿಗೆ 292 ರನ್​ಗಳ ಗುರಿ ನೀಡಿತ್ತು. ಕಾಂಗರೂ ಪಡೆ 7 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತ್ತು. ಗ್ಲೆನ್ ಮ್ಯಾಕ್ಸ್ವೆಲ್ 128 ಎಸೆತಗಳಲ್ಲಿ 201* ರನ್ ಗಳಿಸುವ ಮೂಲಕ ಸಾರ್ವಕಾಲಿಕ ಅತ್ಯುತ್ತಮ ಏಕದಿನ ಇನ್ನಿಂಗ್ಸ್ ಆಡಿದರು. ಆ ಪಂದ್ಯವನ್ನು ಗೆದ್ದಿದ್ದರೆ ಅಫ್ಘಾನಿಸ್ತಾನಕ್ಕೆ ಸೆಮಿಫೈನಲ್​ ಪ್ರವೇಶಿಸಲು ಉತ್ತಮ ಅವಕಾಶವಿತ್ತು. ಈಗಲೂ ಅವಕಾಶ ಇದೆ. ಆದರೆ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನಿರೀಕ್ಷಿಸಲಾಗದ ಅಂತರದಿಂದ ಗೆಲ್ಲಬೇಕಾಗಿದೆ. ಜತೆಗೆ ಇತರ ಕೆಲವು ಫಲಿತಾಂಶಗಳು ತಮ್ಮಗೆ ಅನುಕೂಲಕರವಾಗಿರಬೇಕಾಗುತ್ತದೆ.

ದಕ್ಷಿಣ ಆಫ್ರಿಕಾ ಸೆಮೀಸ್​ಗೆ

ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್ ಗೆ ಅರ್ಹತೆ ಪಡೆದಿದ್ದು, ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಪ್ರಸ್ತುತ ನಡೆಯುತ್ತಿರುವ ಆವೃತ್ತಿಯ ಮಾರ್ಕ್ಯೂ ಈವೆಂಟ್ ನಲ್ಲಿ ದಕ್ಷಿಣ ಆಫ್ರಿಕಾಕ್ಕಿಂತ ಬೇರೆ ಯಾವುದೇ ತಂಡವು ಹೆಚ್ಚು ರನ್ ಗಳಿಸಿಲ್ಲ. ಕ್ವಿಂಟನ್ ಡಿ ಕಾಕ್, ಏಡೆನ್ ಮಾರ್ಕ್ರಮ್, ರಾಸ್ಸಿ ವಾನ್ ಡೆರ್ ಡುಸೆನ್ ಮತ್ತು ಹೆನ್ರಿಕ್ ಕ್ಲಾಸೆನ್ ಅದ್ಭುತ ಫಾರ್ಮ್​​ನಲ್ಲಿದ್ದಾರೆ. ಆದಾಗ್ಯೂ, ನಾಯಕ ಬವುಮಾ ವೈಫಲ್ಯ ಕಂಡಿದ್ದಾರೆ. ಆರು ಪಂದ್ಯಗಳಲ್ಲಿ ಅವರು 20.33 ಸರಾಸರಿಯಲ್ಲಿ ಕೇವಲ 122 ರನ್ ಗಳಿಸಿದ್ದಾರೆ.

ಜೆನ್ಸನ್​ಗೆ ಅಗ್ರಸ್ಥಾನ

ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮಾರ್ಕೊ ಜೆನ್ಸನ್​ ಅಗ್ರಸ್ಥಾನದಲ್ಲಿದ್ದಾರೆ. 8 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದಾರೆ. ಆದಾಗ್ಯೂ, ಅವರು ಕೆಲವು ಪಂದ್ಯಗಳಲ್ಲಿ ದುಬಾರಿ ಎಂಬುದು ಸಾಬೀತಾಗಿದೆ, ಮತ್ತು ಅವರ ಎಕಾನಮಿ ರೇಟ್ 6.42 ಇದೆ. ಕೇಶವ್ ಮಹಾರಾಜ್ ದಕ್ಷಿಣ ಆಫ್ರಿಕಾ ಪರ ಎಂಟು ಪಂದ್ಯಗಳಲ್ಲಿ 26.75 ಸರಾಸರಿಯಲ್ಲಿ 12 ವಿಕೆಟ್​ಗಳನ್ನು ಪಡೆದಿದ್ದಾರೆ.

ಭಾರತ ವಿರುದ್ಧದ ಪಂದ್ಯದಲ್ಲಿ ಜೆರಾಲ್ಡ್ ಕೊಟ್ಜೆ ಬದಲಿಗೆ ತಬ್ರೈಜ್ ಶಮ್ಸಿ ಸ್ಥಾನ ಪಡೆದಿದ್ದರು ಆರು ಪಂದ್ಯಗಳಲ್ಲಿ 21.79 ಸರಾಸರಿಯಲ್ಲಿ 14 ವಿಕೆಟ್​ಗಳನ್ನು ಪಡೆದಿರುವ ಯುವ ಬಲಗೈ ವೇಗಿಯನ್ನು ಶಮ್ಸಿ ಬದಲಿಗೆ ತಂಡಕ್ಕೆ ಮರಳಿ ಕರೆತರಬಹುದು. ಕಳೆದ ಪಂದ್ಯದಲ್ಲಿ ಲುಂಗಿ ಎನ್ಗಿಡಿ ಪಾದದ ಗಾಯದಿಂದ ಬಳಲುತ್ತಿದ್ದರು/ ಅವರು ಸಮಯಕ್ಕೆ ಸರಿಯಾಗಿ ಫಿಟ್ ಆಗದಿದ್ದರೆ, ಕೊಟ್ಜೆ ಅವರ ಸ್ಥಾನವನ್ನು ತುಂಬಬಹುದು.

ಜದ್ರಾನ್​ ಬಲ

ಅಫ್ಘಾನಿಸ್ತಾನದ ಇಬ್ರಾಹಿಂ ಜದ್ರಾನ್​​ ಆಸ್ಟ್ರೇಲಿಯಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ವಿಶ್ವಕಪ್​​ನಲ್ಲಿ ಶತಕ ಗಳಿಸಿದ ಮೊದಲ ಆಫ್ಘಾನ್ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 8 ಪಂದ್ಯಗಳಲ್ಲಿ 51.57ರ ಸರಾಸರಿಯಲ್ಲಿ 361 ರನ್ ಗಳಿಸಿರುವ 21ರ ಹರೆಯದ ಅಫ್ಘಾನಿಸ್ತಾನದ ಆಟಗಾರ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆ ತಂಡದ ಆಟಗಾರ ಎನಿಸಿಕೊಂಡಿದ್ದಾರೆ. ರಹಮತ್ ಶಾ ಮತ್ತು ಹಶ್ಮತುಲ್ಲಾ ಶಾಹಿದಿ ಕೂಡ ಪಂದ್ಯಾವಳಿಯ ವಿವಿಧ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Virat kohli : ಜಾಗತಿಕ ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಯಲ್ಲೂ ಕೊಹ್ಲಿಗೆ ಮುಂಚೂಣಿ ಸ್ಥಾನ

ಬೌಲಿಂಗ್ ವಿಭಾಗವೂ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಅಫ್ಘಾನಿಸ್ತಾನ ಯಾವಾಗಲೂ ಸ್ಪಿನ್-ಪ್ರಾಬಲ್ಯದ ತಂಡವೆಂದು ಹೆಸರುವಾಸಿಯಾಗಿದೆ. ಆದರೆ ಫಜಲ್ಹಾಕ್ ಫಾರೂಕಿ ಮತ್ತು ನವೀನ್-ಉಲ್-ಹಕ್ ಅವರಂತಹ ವೇಗಿಗಳ ಪ್ರದರ್ಶನವು ಅವರಿಗೆ ಸಾಕಷ್ಟು ತೃಪ್ತಿಯನ್ನು ತಂದಿದೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ನಾಲ್ಕು ಸ್ಪಿನ್ನರ್​ಗಳನ್ನು ಆಡಿಸಿತು. ಎಡಗೈ ವೇಗಿ ನೂರ್ ಅಹ್ಮದ್ ಬದಲಿಗೆ ಫಜಲ್ಹಾಕ್ ಫಾರೂಕಿ ಅವರನ್ನು ಮರಳಿ ಕರೆತರಲು ತಂಡ ನಿರ್ಧರಿಸಬಹುದು/ ಏಕೆಂದರೆ ಎಡಗೈ ವೇಗಿ ಹೊಸ ಚೆಂಡಿನೊಂದಿಗೆ ಕೆಲವು ಪ್ರಭಾವಶಾಲಿ ಬೌಲಿಂಗ್ ಮಾಡುತ್ತಾರೆ.

ಪಿಚ್ ವರದಿ

ನರೇಂದ್ರ ಮೋದಿ ಸ್ಟೇಡಿಯಂ 2023ರ ಏಕದಿನ ವಿಶ್ವಕಪ್​​ನಲ್ಲಿ ಇದುವರೆಗೆ ಮೂರು ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಚೇಸಿಂಗ್ ತಂಡಗಳು ಎರಡು ಪಂದ್ಯಗಳನ್ನು ಗೆದ್ದಿದ್ದರೆ, ಮೊದಲು ಬ್ಯಾಟಿಂಗ್ ಮಾಡುವ ತಂಡವು ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ಪಿಚ್​ಗಳು ಬ್ಯಾಟಿಂಗ್ ಗೆ ಸಾಕಷ್ಟು ಉತ್ತಮವಾಗಿವೆ. ಬೌಲರ್ ಗಳಿಗೆ ಹೊಸ ಚೆಂಡಿನೊಂದಿಗೆ ಅನುಕೂಲವಿದೆ. ಹೊನಲು ಬೆಳಕಿನಲ್ಲಿ ಸ್ಪಿನ್ನರ್​ಗಳಿಗೂ ಅವಕಾಶವಿದೆ.

ತಂಡಗಳು

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆ), ಟೆಂಬಾ ಬವುಮಾ (ಸಿ), ರಾಸ್ಸಿ ವಾನ್ ಡೆರ್ ಡುಸೆನ್, ಐಡೆನ್ ಮಾರ್ಕ್ರಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್ಗಿಡಿ / ಜೆರಾಲ್ಡ್ ಕೊಟ್ಜೆ, ತಬ್ರೈಜ್ ಶಮ್ಸಿ.

ಅಫಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ಸಿ), ಅಜ್ಮತುಲ್ಲಾ ಒಮರ್ಜೈ, ಇಕ್ರಮ್ ಅಲಿಖಿಲ್ (ವಿಕೆ), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಾಕ್ ಫಾರೂಕಿ, ನವೀನ್-ಉಲ್-ಹಕ್.

ಮುಖಾಮುಖಿ ವಿವರ

ನೇರ ಪ್ರಸಾರ ವಿವರಗಳು

Exit mobile version