Site icon Vistara News

IND vs SA: ದ್ವಿತೀಯ ಟಿ20 ಪಂದ್ಯದ ಹವಾಮಾನ ವರದಿ ಹೇಗಿದೆ?

St Georges Park Gqeberha

ಗ್ಕೆಬರ್ಹಾ (ಸೇಂಟ್ ಜಾರ್ಜ್ ಪಾರ್ಕ್): ಡರ್ಬಾನ್​ನಲ್ಲಿ ಭಾನುವಾರ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ನಡುವಣ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಇತ್ತಂಡಗಳ ದ್ವಿತೀಯ ಮುಖಾಮುಖಿ ಮಂಗಳವಾರ ಗ್ಕೆಬರ್ಹಾ ಸೇಂಟ್ ಜಾರ್ಜ್ ಪಾರ್ಕ್​ನಲ್ಲಿ(St George’s Park, Gqeberha) ನಡೆಯಲಿದೆ. ಈ ಪಂದ್ಯಕ್ಕೂ ಮಳೆ ಭೀತಿ ತಪ್ಪಿದ್ದಲ್ಲ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಹವಾಮಾನ ವರದಿ ಹೇಗಿದೆ?

ವೆದರ್​ ಟಾಟ್​ ಕಾಮ್​​​ ಪ್ರಕಾರ ಪಂದ್ಯ ನಡೆಯುವ ಗ್ಕೆಬರ್ಹಾದಲ್ಲಿ ಮಂಗಳವಾರ ಶೇ. 60ರಷ್ಟು ಮಳೆಯಾಗುವ ಸಾಧ್ಯತೆಯಿದೆ ಮತ್ತು ಪಂದ್ಯ ಸಂಪೂರ್ಣವಾಗಿ ನಡೆಯುವುದು ಅನುಮಾನ ಎಂದು ತಿಳಿಸಿದೆ. ಬೆಳಗಿನಿಂದಲೇ ಇಲ್ಲಿ ಮಂಜಿನ ವಾತಾವಣರಣ ಇರಲಿದೆ ಎಂದು ಕೂಡ ವರದಿಯಾಗಿದೆ. ಒಂದೊಮ್ಮೆ ಈ ಪಂದ್ಯವೂ ಮಳೆಯಿಂದ ರದ್ದಾದರೆ. ಅಂತಿಮ ಪಂದ್ಯ ಸರಣಿ ನಿರ್ಣಾಯಕವಾಗಲಿದೆ.

ಪಿಚ್​ ರಿಪೋರ್ಟ್​

ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿನ ಪಿಚ್​ ಮೇಲ್ಮೈ ಬ್ಯಾಟರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಆಟ ಸಾಗುತ್ತಲೇ ಹೋದಾಗ ಸ್ಪಿನ್ನರ್‌ಗಳು ಸ್ವಲ್ಪ ಸಹಾಯವನ್ನು ಪಡೆಯಬಹುದು. ಇಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡಗಳೇ ಹೆಚ್ಚಾಗಿ ಗೆದ್ದಿದೆ. ಪಿಚ್​ ತಿರುವು ಪಡೆಯುವ ಕಾರಣ ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ನಡೆಸುವುದು ಕಷ್ಟಕರ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವುದು ಉತ್ತಮ.

ಟಿ20 ಮುಖಾಮುಖಿ

ಇತ್ತಂಡಗಳು ಇದುವರೆಗೆ 24 ಟಿ20 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಭಾರತವು 13 ಪಂದ್ಯಗಳನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ 10 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ, ‘ಮೆನ್ ಇನ್ ಬ್ಲೂ’ ಏಳು ಪಂದ್ಯಗಳನ್ನು ಆಡಿ ಐದರಲ್ಲಿ ಗೆದ್ದಿದ್ದರೆ, ಆತಿಥೇಯರು ಎರಡರಲ್ಲಿ ಗೆದ್ದಿದ್ದಾರೆ. ಬಲಾಬಲದ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದೆ.

ಇದನ್ನೂ ಓದಿ Match Fixing : ಮ್ಯಾಚ್​ ಫಿಕ್ಸಿಂಗ್ ಮಾಡಿದರೇ ಬಾಂಗ್ಲಾದ ಬ್ಯಾಟರ್​?

ಉಭಯ ತಂಡಗಳು

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ),ರವೀಂದ್ರ ಜಡೇಜಾ (ಉಪನಾಯಕ) ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ , ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹಾರ್.

ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಮ್ಯಾಥ್ಯೂ ಬ್ರೀಟ್ಜ್‌ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ (1 ನೇ ಮತ್ತು 2 ನೇ ಟಿ20), ಡೊನೊವನ್ ಫೆರೀರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್ (1 ನೇ ಮತ್ತು 2 ನೇ ಟಿ20), ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ (1ನೇ ಮತ್ತು 2ನೇ ಟಿ20), ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಲಿಜಾದ್ ವಿಲಿಯಮ್ಸ್.

Exit mobile version