Site icon Vistara News

IPL 2023 : ಡೆಲ್ಲಿ ತಂಡ ಬಿಟ್ಟು ಏಕಾಏಕಿ ತವರಿಗೆ ಮರಳಿದ ದಕ್ಷಿಣ ಆಫ್ರಿಕಾದ ವೇಗದ ಬೌಲರ್​

Royal Challengers Bangalore, Royal Challengers Bangalore

ನವ ದೆಹಲಿ: ​ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧದ ಪಂದ್ಯಕ್ಕೆ ಕೆಲವು ಹೊತ್ತು ಬಾಕಿ ಇರುವಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಧಾನ ವೇಗದ ಬೌಲರ್​ ಆ್ಯನ್ರಿಚ್ ನೋರ್ಜೆ ದಕ್ಷಿಣ ಆಫ್ರಿಕಾಕ್ಕೆ ಮರಳಿದ್ದಾರೆ. ತುರ್ತು ಕಾರ್ಯದ ಹಿನ್ನೆಲೆಯಲ್ಲಿ ಅವರು ತವರಿಗೆ ವಾಪಸಾಗದಿದ್ದಾರೆ ಎಂದು ಹೇಳಲಾಗಿದೆ.. ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಂಡದ ಮಾಹಿತಿ ಪ್ರಕಾರ ಅವರು ಏಕಾಏಕಿ ನಿರ್ಗಮಿಸಿದ್ದಾರೆ. ಹೀಗಾಗಿ ಮರಳಿ ಬರುವ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ.

ವೈಯಕ್ತಿಕ ತುರ್ತು ಕಾರಣಕ್ಕೆ, ಡೆಲ್ಲಿ ಕ್ಯಾಪಿಟಲ್ಸ್ ವೇಗದ ಬೌಲರ್ ಅನ್ರಿಚ್ ನೋರ್ಜೆ ಶುಕ್ರವಾರ ತಡರಾತ್ರಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮೇ 6ರ ಪಂದ್ಯಕ್ಕೆ ಅವರು ಲಭ್ಯವಿರುವುದಿಲ್ಲ ಎಂದು ಡಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೆ ನೀಡಿದ್ದಾರೆ.

ಲೀಗ್​ನಲ್ಲಿ ಆಡಿರುವ 8 ಪಂದ್ಯಗಳಲ್ಲಿ, ಮಾರಕ ವೇಗಿ ಏಳು ವಿಕೆಟ್​​ಗಳನ್ನು ಪಡೆದಿದ್ದಾರೆ. 20 ರನ್​ಗಳಿಗೆ 2 ವಿಕೆಟ್​ ಪಡೆದಿರುವುದು ಅವರ ಅತ್ಯುತ್ತಮ ಸ್ಪೆಲ್​. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಎರಡನೇ ಡಬಲ್ ಹೆಡರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಆರ್​ಸಿಬಿ ವಿರುದ್ಧ ಆಡಲಿದೆ.

ಪ್ಲೇಆಫ್​ನಿಂದ ಹೊರಕ್ಕೆ

ಐಪಿಎಲ್ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿರುವ ಡಿಸಿ ಇದುವರೆಗೆ ಒಂಬತ್ತು ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳನ್ನು ಮಾತ್ರ ಗಳಿಸಿದೆ. ಅಗ್ರ ನಾಲ್ಕು ಸ್ಥಾನಗಳಿಗೆ ಅರ್ಹತೆ ಪಡೆಯುವ ಅವಕಾಶವನ್ನು ಹೊಂದಿದ್ದರೂ, ಮುಂಬರುವ ಒಂದೇ ಒಂದು ಪಂದ್ಯದಲ್ಲಿ ಸೋತರೆ ಪ್ಲೇಆಫ್​ನಿಂದ ಹೊರಕ್ಕೆ ಉಳಿಯಲಿದೆ.

ಡೇವಿಡ್ ವಾರ್ನರ್ ಬಳಗ ತಮ್ಮ ಅಭಿಯಾನದ ಆರಂಭದಲ್ಲಿ ಐದು ಸೋಲುಗಳನ್ನು ಕಂಡಿತು. ಆದಾಗ್ಯೂ, ಡೆಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ ಪುಟಿದೆದ್ದಿದೆ. ಕಳೆದ ಐದು ಮುಖಾಮುಖಿ ದಾಖಲೆಗಳ ಪ್ರಕಾರ, ಆರ್​ಸಿಬಿ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಡೆಲ್ಲಿ ಕೇವಲ ಒಂದು ಬಾರಿ ಗೆದ್ದಿದೆ.

ಆರ್​ಸಿಬಿ ವಿರುದ್ಧ ಗೆಲ್ಲುವುದೇ?

ಮೊದಲ ಸುತ್ತಿನಲ್ಲಿ ಸೋಲು ಕಂಡ ಡೆಲ್ಲಿ ಕ್ಯಾಪಿಟಲ್ಸ್​ ಇದೀಗ ಆರ್​ಸಿಬಿ ವಿರುದ್ಧ ದ್ವಿತೀಯ ಪಂದ್ಯವನ್ನು ಆಡಲು ಸಜ್ಜಾಗಿದೆ. ಉಭಯ ತಂಡಗಳ ಈ ಮುಖಾಮುಖಿ ಶನಿವಾರ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಸತತ ಸೋಲಿನಿಂದ ಕಂಗೆಟ್ಟಿದ ಡೆಲ್ಲಿ ಈಗ ಪತ್ರಿ ಪಂದ್ಯವನ್ನು ಗೆಲ್ಲುತ್ತಾ ಬರುತ್ತಿದೆ. ಹೀಗಾಗಿ ಆರ್​ಸಿಬಿ ವಿರುದ್ಧವೂ ಗೆಲುವು ಸಾಧಿಸೀತೇ ಎಂದು ಕಾದು ನೋಡಬೇಕಿದೆ. ಈ ಪಂದ್ಯ 16ನೇ ಆವೃತ್ತಿಯ ಐಪಿಎಲ್​ನ 50ನೇ ಪಂದ್ಯವಾಗಿದೆ.

ಸದ್ಯ ಬೌಲಿಂಗ್​ ವಿಭಾಗದಲ್ಲಿ ಡೆಲ್ಲಿ ಬಲಿಷ್ಠವಾಗಿದೆ. ಸಣ್ಣ ಮೊತ್ತವನ್ನು ಪೇರಿಸಿದರೂ, ಎದುರಾಳಿ ತಂಡ ಗೆಲುವು ಸಾಧಿಸಲು ಪಂದ್ಯದ ಕೊನೆಯ ಓವರ್ ತನಕ ಹೋರಾಟ ನಡೆಸುತ್ತಿರುವುದು ಇದಕ್ಕೆ ಉತ್ತಮ ಸಾಕ್ಷಿ. ಅನ್ರಿಚ್​ ನೋರ್ಜೆ, ಮುಕೇಶ್‌ ಕುಮಾರ್‌, ಕುಲ್​ದೀಪ್‌, ಅಕ್ಷರ್‌ ಪಟೇಲ್‌ ಮತ್ತು ಇಶಾಂತ್​ ಶರ್ಮ ಉತ್ತಮ ಬೌಲಿಂಗ್​ ಲಯದಲ್ಲಿದ್ದಾರೆ.

ಆರ್​ಸಿಬಿ ಈ ವಿಚಾರದಲ್ಲಿ ತದ್ವಿರುದ್ಧ, ವಿರಾಟ್​ ಕೊಹ್ಲಿ, ನಾಯಕ ಫಾಫ್​ ಡು ಪ್ಲೆಸಿಸ್​, ಮ್ಯಾಕ್ಸ್​ವೆಲ್​ ದೊಡ್ಡ ಮೊತ್ತ ಪೇರಿಸುವಲ್ಲಿ ಸಮರ್ಥರಿದ್ದಾರೆ. ಬೌಲಿಂಗ್​ನಲ್ಲಿ ಸಿರಾಜ್​ ಹೊರತುಪಡಿಸಿ ಉಳಿದ ಬೌಲರ್​ಗಳು ಇದುವರೆಗೂ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಿಲ್ಲ. ಜೋಶ್​ ಹ್ಯಾಜಲ್​ವುಡ್​ ತಂಡಕ್ಕೆ ಆಗಮಿಸಿದರೂ ಅವರಿಂದ ಇನ್ನೂ ಕೂಡ ಘಾತಕ ಬೌಲಿಂಗ್ ಕಂಡುಬಂದಿಲ್ಲ.​

ಇದನ್ನೂ ಓದಿ IPL 2023: ರಶೀದ್​ ಖಾನ್​ ಸ್ಪಿನ್​ ದಾಳಿಗೆ ಪತರುಗುಟ್ಟಿದ ರಾಜಸ್ಥಾನ್​ ರಾಯಲ್ಸ್​

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಇದುವರೆ ಐಪಿಎಲ್​ನಲ್ಲಿ 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ 17 ಪಂದ್ಯಗಳನ್ನು ಗೆದ್ದರೆ, ಡೆಲ್ಲಿ 10 ಪಂದ್ಯಗಳಲ್ಲಿ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಾಣದೆ ಕೊನೆಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಡೆಲ್ಲಿ ವಿರುದ್ಧ ಆರ್​ಸಿಬಿ ಆಡಿದ ಒಂದು ಪಂದ್ಯವನ್ನು ಸೋಲು ಕಂಡಿಲ್ಲ. ಹೀಗಾಗಿ ಈ ಪಂದ್ಯದ ಮೇಲು ಆರ್​ಸಿಬಿ ಮೇಲೆ ನಿರೀಕ್ಷೆಯೊಂದನ್ನು ಮಾಡಬಹುದು.

Exit mobile version