Site icon Vistara News

ಚಿರಾಗ್-ಸಾತ್ವಿಕ್​ಗೆ ಖೇಲ್ ರತ್ನ, ಮೊಹಮ್ಮದ್​ ಶಮಿಗೆ ಒಲಿದ ಅರ್ಜುನ ಪ್ರಶಸ್ತಿ

Satwiksairaj Rankireddy-Chirag Shetty For Khel Ratna

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ದೇಶದ ಶತಕೋಟಿ ಜನರ ಮನಗೆದ್ದಿದ್ದ ಮೊಹಮ್ಮದ್‌ ಶಮಿ(Mohammed Shami) ಅವರಿಗೆ ಅರ್ಜುನ ಪ್ರಶಸ್ತಿ ಹಾಗೂ ಬ್ಯಾಡ್ಮಿಂಟನ್​ ಆಟಗಾರರಾದ ಚಿರಾಗ್ ಶೆಟ್ಟಿ(Chirag Shetty) ಮತ್ತು ಸಾತ್ವಿಕ್ ಸಾಯಿರಾಜ್(Satwiksairaj) ಜೋಡಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಒಲಿದಿದೆ. ಇದನ್ನು ಕ್ರೀಡಾ ಸಚಿವಾಲಯ ಖಚಿತಪಡಿಸಿದೆ. (National Sports Awards)

ಆರಂಭದಲ್ಲಿ ಶಮಿ ಅವರ ಹೆಸರು ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವದ ಪಟ್ಟಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಬಿಸಿಸಿಐ ವಿಶೇಷ ಮನವಿ ಸಲ್ಲಿಸಿ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಇದೀಗ ಶಮಿಗೆ ಅರ್ಜುನ ಪ್ರಶಸ್ತಿ ಸಿಗುವುದು ಖಚಿತವಾಗಿದೆ. ರಾಷ್ಟ್ರಪತಿಗಳ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲ ಕ್ರೀಡಾಪಟುಗಳಿಗೆ ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ಕೇವಲ 7 ಪಂದ್ಯಗಳನ್ನು ಆಡಿ 24 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ಎರಡು ಬಾರಿ ಐದು ವಿಕೆಟ್‌ಗಳು ಮತ್ತು ಒಂದು ಬಾರಿ ಏಳು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ಶಮಿಯ ಘಾತಕ ಬೌಲಿಂಗ್​ ಮುಂದೆ ಎದುರಾಳಿ ತಂಡದ ಬ್ಯಾಟರ್​ಗಳು ರನ್​ ಗಳಿಸಲು ಪರದಾಟ ನಡೆಸಿದ್ದರು.​

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ

ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (ಬ್ಯಾಡ್ಮಿಂಟನ್).

ಅರ್ಜುನ ಪ್ರಶಸ್ತಿಯ ಪಟ್ಟಿ

ಓಜಸ್ ಪ್ರವೀಣ್ ಡಿಯೋಟಾಲೆ – ಬಿಲ್ಲುಗಾರಿಕೆ

ಅದಿತಿ ಗೋಪಿಚಂದ್ ಸ್ವಾಮಿ – ಬಿಲ್ಲುಗಾರಿಕೆ

ಶ್ರೀಶಂಕರ್ ಎಂ – ಅಥ್ಲೆಟಿಕ್ಸ್

ಪಾರುಲ್ ಚೌಧರಿ – ಅಥ್ಲೆಟಿಕ್ಸ್

ಮೊಹಮೀದ್ ಹುಸಾಮುದ್ದೀನ್ – ಬಾಕ್ಸಿಂಗ್

ಆರ್ ವೈಶಾಲಿ – ಚೆಸ್

ಮೊಹಮ್ಮದ್ ಶಮಿ – ಕ್ರಿಕೆಟ್

ಅನುಷ್ ಅಗರ್ವಾಲಾ – ಕುದುರೆ ಸವಾರಿ

ದಿವ್ಯಾಕೃತಿ ಸಿಂಗ್ – ಇಕ್ವೆಸ್ಟ್ರಿಯನ್ ಡ್ರೆಸ್ಸೇಜ್

ದೀಕ್ಷಾ ದಾಗರ್ – ಗಾಲ್ಫ್

ಕ್ರಿಶನ್ ಬಹದ್ದೂರ್ ಪಾಠಕ್ – ಹಾಕಿ

ಪುಖ್ರಂಬಂ ಸುಶೀಲಾ ಚಾನು – ಹಾಕಿ

ಪವನ್ ಕುಮಾರ್ – ಕಬಡ್ಡಿ

ರಿತು ನೇಗಿ – ಕಬಡ್ಡಿ

ನಸ್ರೀನ್ – ಖೋ-ಖೋ

ಪಿಂಕಿ – ಲಾನ್ ಬೌಲ್ಸ್

ಐಶ್ವರಿ ಪ್ರತಾಪ್ ಸಿಂಗ್ ತೋಮರ್ – ಶೂಟಿಂಗ್

ಇಶಾ ಸಿಂಗ್ – ಶೂಟಿಂಗ್

ಹರಿಂದರ್ ಪಾಲ್ ಸಿಂಗ್ ಸಂಧು – ಸ್ಕ್ವಾಷ್

ಅಹಿಕಾ ಮುಖರ್ಜಿ – ಟೇಬಲ್ ಟೆನಿಸ್

ಆಂಟಿಮ್ – ಕುಸ್ತಿ

ಸುನೀಲ್ ಕುಮಾರ್ – ಕುಸ್ತಿ

ನವೋರೆಮ್ ರೋಶಿಬಿನಾ ದೇವಿ – ವುಶು

ಶೀತಲ್ ದೇವಿ – ಪ್ಯಾರಾ ಆರ್ಚರಿ

ಇಲ್ಲೂರಿ ಅಜಯ್ ಕುಮಾರ್ ರೆಡ್ಡಿ – ಅಂಧರ ಕ್ರಿಕೆಟ್

ಪ್ರಾಚಿ ಯಾದವ್ – ಪ್ಯಾರಾ ಕ್ಯಾನೋಯಿಂಗ್

ದ್ರೋಣಾಚಾರ್ಯ ಪ್ರಶಸ್ತಿ

ಲಲಿತ್ ಕುಮಾರ್ (ಕುಸ್ತಿ), ಆರ್‌ಬಿ ರಮೇಶ್ (ಚೆಸ್), ಮಹಾವೀರ್ ಪ್ರಸಾದ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್), ಶಿವೇಂದ್ರ ಸಿಂಗ್ (ಹಾಕಿ), ಗಣೇಶ್ ಪ್ರಭಾಕರ್ ದೇವರುಖ್ಕರ್ (ಮಲ್ಲಖಾಂಬ್​).

ಧ್ಯಾನ್ ಚಂದ್ ಜೀವಮಾನ ಪ್ರಶಸ್ತಿ

ಕವಿತಾ ಸೆಲ್ವರಾಜ್ (ಕಬಡ್ಡಿ), ಮಂಜುಷಾ ಕನ್ವರ್ (ಬ್ಯಾಡ್ಮಿಂಟನ್) ವಿನೀತ್ ಕುಮಾರ್ ಶರ್ಮಾ (ಹಾಕಿ).

ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ವಿಭಾಗ)

ಜಸ್ಕಿರತ್ ಸಿಂಗ್ ಗ್ರೆವಾಲ್ (ಗಾಲ್ಫ್), ಭಾಸ್ಕರನ್ ಇ (ಕಬಡ್ಡಿ), ಜಯಂತ ಕುಮಾರ್ ಪುಶಿಲಾಲ್ (ಟೇಬಲ್ ಟೆನಿಸ್).

Exit mobile version