Site icon Vistara News

Gautam Gambhir : ಗಂಭೀರ್ ವಿರುದ್ಧ ಕಿಡಿಕಾರಿದ ಶ್ರೀಶಾಂತ್​ ಪತ್ನಿ

S Sreeshanth

ಸೂರತ್: ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್ ಸಿ) 2023ರ ಎಲಿಮಿನೇಟರ್ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ ತಂಡ ಗುಜರಾತ್ ಜೈಂಟ್ಸ್ ತಂಡವನ್ನು 12 ರನ್ ಗಳಿಂದ ಮಣಿಸಿತ್ತು. ಪಂದ್ಯದ ಬಳಿಕ ಗುಜರಾತ್ ಪರ ಆಡುತ್ತಿದ್ದ ಶ್ರೀಶಾಂತ್ ಅವರು ಕ್ಯಾಪಿಟಲ್ಸ್ ನಾಯಕ ಗೌತಮ್ ಗಂಭೀರ್ (Gautam Gambhir) ಅವರ ನಡವಳಿಕೆಯನ್ನು ಮೈದಾನದಲ್ಲಿನ ಟೀಕಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಇದು ಪಂದ್ಯಕ್ಕಿಂತಲೂ ಹೆಚ್ಚಿನ ಗಮನ ಸೆಳೆದಿದೆ.

2007ರಲ್ಲಿ ಟಿ20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದ ಗಂಭೀರ್ ಹಾಗೂ ಶ್ರೀಶಾಂತ್ ನಡುವೆ ಮೊದಲ ಇನ್ನಿಂಗ್ಸ್ ವೇಳೆ ಮಾತಿನ ಚಕಮಕಿ ನಡೆದಿದೆ. ಗಂಭೀರ್​ ಅವರು ಶ್ರೀಶಾಂತ್ ಎಸೆತಕ್ಕೆ ಕೆಲವು ಬೌಂಡರಿಗಳಿಗೆ ಹೊಡೆದಿದದ್ದರು. ಕೆಲವೇ ಕ್ಷಣದಲ್ಲಿ ಶ್ರೀಶಾಂತ್ ಅವರನ್ನು ಸ್ಲೆಡ್ಜಿಂಗ್ ಮಾಡಲು ಮುಂದಾಗಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದಿತ್ತು. ಅಂಪೈರ್​ಗಳು ಮಧ್ಯಪ್ರವೇಶಿಸಿದ್ದರು. ಪಂದ್ಯದ ನಂತರದ ಸಂದರ್ಶನ ವೇಖೆ ಕೇರಳದ ವೇಗಿ, ಗಂಭೀರ್ ತಮ್ಮ ಬಗ್ಗೆ ಅನಗತ್ಯವಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದರು. ಈ ವಿಡಿಯೊ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಗಂಭೀರ್ ತನ್ನನ್ನು ಫಿಕ್ಸರ್ ಎಂದು ಕರೆದರು ಮತ್ತು ಪದೇ ಪದೇ ನಿಂದಿಸಿದರು ಎಂದು ಶ್ರೀಶಾಂತ್ ಪ್ರತ್ಯೇಕ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.

“ನಾನು ಅವರಿಗೆ ಒಂದೇ ಒಂದು ಕೆಟ್ಟ ಪದವನ್ನು ಬಳಸಿಲ್ಲ ಅಥವಾ ಒಂದೇ ಒಂದು ನಿಂದನಾತ್ಮಕ ಪದವನ್ನು ಬಳಸಿಲ್ಲ. ನಾನು ಕೇಳಿದೆ. ನೀವು ಏನು ಹೇಳುತ್ತಿದ್ದೀರಿ? ಎಂದಷ್ಟೇ ಕೇಳಿದೆ. ವಾಸ್ತವವಾಗಿ, ನಾನು ವ್ಯಂಗ್ಯವಾಗಿ ನಗುತ್ತಲೇ ಇದ್ದೆ. ಆದರೆ ಅವರು ನನ್ನನ್ನು “ಫಿಕ್ಸರ್, ಫಿಕ್ಸರ್, ನೀವು ಫಿಕ್ಸರ್, ಎಫ್ *** ಆಫ್ ಫಿಕ್ಸರ್” ಎಂದು ಕರೆಯುತ್ತಿದ್ದರು. ಅವರು ನನ್ನನ್ನು ಫಿಕ್ಸರ್ ಎಂದು ಕರೆಯುತ್ತಲೇ ಇದ್ದರು,” ಎಂದು ಶ್ರೀಶಾಂತ್ ಹೇಳಿಕೊಂಡಿದ್ದಾರೆ.

ಈ ಘಟನೆಯ ಬಗ್ಗೆ ಶ್ರೀಶಾಂತ್ ಪೋಸ್ಟ್ ಮಾಡಿದ ಮೊದಲ ವೀಡಿಯೊದಲ್ಲಿ ಹಲವರು ಆಕ್ಷೇಪಗಳನ್ನು ಅವರು ಮಾಡಿದ್ದಾರೆ. ಗಂಭೀರ್ ತಮ್ಮ ಮಾಜಿ ಸಹ ಆಟಗಾರ ವೀರೇಂದ್ರ ಸೆಹ್ವಾಗ್ ಸೇರಿದಂತೆ ತಮ್ಮ ಸಹೋದ್ಯೋಗಿಗಳನ್ನು ಗೌರವಿಸುವುದಿಲ್ಲ. ಕ್ರಿಕೆಟ್ ಕಾರ್ಯಕ್ರಮಗಳಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಕೇಳಿದಾಗ, ಅವರು ವಿಷಯವನ್ನು ತಪ್ಪಿಸುತ್ತಾರೆ ಎಂದು 40 ವರ್ಷದ ಶ್ರೀಶಾಂತ್​ ಹೇಳಿಕೊಂಡಿದ್ದಾರೆ.

ಪತ್ನಿಯ ಕೋಪ

ಶ್ರೀಶಾಂತ್ ಅವರ ಪತ್ನಿ ಭುವನೇಶ್ವರಿ ಶ್ರೀಶಾಂತ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ನಲ್ಲಿ ಕಾಮೆಂಟ್ ಮಾಡಿ ಗಂಭೀರ್ ಅವರ ವರ್ತನೆಯನ್ನು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ : Gautam Gambhir : ಗಂಭೀರ್​ ನಗುವಿಗೆ ಗಂಭೀರವಾಗಿ ತಿರುಗೇಟು ಕೊಟ್ಟ ಶ್ರೀಶಾಂತ್​!

ಶ್ರೀಶಾಂತ್​ ಅವರ ಮಾತುಗಳನ್ನು ಕೇಳಿದ ಬಳಿಕ ಆಘಾತವಾಗಿದೆ. ಅವರೊಂದಿಗೆ ಅನೇಕ ವರ್ಷಗಳಿಂದ ಭಾರತಕ್ಕಾಗಿ ಆಡಿದ ಆಟಗಾರ ಈ ಮಟ್ಟಕ್ಕೆ ಇಳಿಯಬಹುದು ಎಂದು ಅಂದುಕೊಂಡಿರಲಿಲ್ಲ. ಸಕ್ರಿಯ ಕ್ರಿಕೆಟ್​ನಿಂದ ನಿವೃತ್ತಿಯಾಗಿ ಇಷ್ಟು ವರ್ಷಗಳ ನಂತರವೂ ಅವರು ಈ ರೀತಿ ಮಾತನಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಈ ರೀತಿಯ ನಡವಳಿಕೆಯು ಕ್ರಿಕೆಟ್​ ಅಂಗಳದಲ್ಲಿ ತೋರಿಸುತ್ತಾರೆ ಎಂಬುದು ನಿಜವಾಗಿಯೂ ಆಘಾತಕಾರಿ” ಎಂದು ಭುವನೇಶ್ವರಿ ಕಾಮೆಂಟ್​ ಮಾಡಿದ್ದಾರೆ.

Exit mobile version