ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ಫ್ರಾಂಚೈಸಿ ಅತ್ಯಂತ ಜಿದ್ದಾಜಿದ್ದಿನಿಂದ ಬಿಡ್ ಮಾಡುತ್ತಿದೆ. ಆಸ್ಟ್ರೇಲಿಯಾದ ಏಕದಿನ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು 20.5 ಕೋಟಿ ರೂ.ಗೆ ಖರೀದಿಸುವ ಮೂಲಕ ಅವರು ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಮಾಡಿ ಗಮನ ಸೆಳೆದಿದೆ. ಎಸ್ಆರ್ಎಚ್ ಬಿಡ್ಡಿಂಗ್ ಟೇಬಲ್ ಅನ್ನು ಕಾವ್ಯಾ ಮಾರನ್ (Kavya Maran ) ಮುನ್ನಡೆಸಿದರು. ಅದೇ ರೀತಿ ಐಪಿಎಲ್ ಹರಾಜಿನಲ್ಲಿ ಬಿಡ್ಡಿಂಗ್ ವೇಳೆ ಅವರ ಪ್ರತಿಕ್ರಿಯೆಗಳು ವೈರಲ್ ಆಗುತ್ತಿವೆ.
Kavya Maran's Day 🥰 pic.twitter.com/wRdnJlRJI5
— AdityaVarma (@AdityaVarma45_) December 19, 2023
ಕಾವ್ಯಾ ಮಾರನ್ ಯಾರು?
ಕಾವ್ಯಾ ಮಾರನ್ ಐಪಿಎಲ್ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ನ ಸಿಇಒ ಮತ್ತು ಮಾಲೀಕರಾಗಿದ್ದಾರೆ. ಅವರು ವ್ಯಾಪಾರ ಕುಟುಂಬಕ್ಕೆ ಸೇರಿದವರು. ಅವರ ತಂದೆ ಸನ್ ಗ್ರೂಪ್ನ ಅಧ್ಯಕ್ಷ ಮತ್ತು ಸ್ಥಾಪಕರು. ಐಪಿಎಲ್ ಸೇರಿದಂತೆ ಹಲವಾರು ಜಾಗತಿಕ ಕ್ರಿಕೆಟ್ ಲೀಗ್ಗಳಲ್ಲಿ ಅವರು ತಂಡಗಳನ್ನು ಖರೀದಿಸಿದ್ದಾರೆ. ಅದೇ ರೀತಿ ಲೀಗ್ಗಳ ಪಂದ್ಯಗಳ ವೇಳೆ ಡಗ್ಔಟ್ನಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Kavya Maran's Day 🥰 pic.twitter.com/wRdnJlRJI5
— AdityaVarma (@AdityaVarma45_) December 19, 2023
ಫ್ರಾಂಚೈಸಿಗಳ ಬಿಡ್ಡಿಂಗ್ ನಿರ್ಧಾರಗಳನ್ನು ಕಾರ್ಯತಂತ್ರಗೊಳಿಸುವಲ್ಲಿ ಚಾತುರ್ಯದ ಮೂಲಕ ಕಾವ್ಯಾ ಮಾರನ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತಕ್ಕೆ ಸೇಲ್ ಆದ ಕಮಿನ್ಸ್
ದುಬೈ: ಪ್ರಸಕ್ತ ಸಾಗುತ್ತಿರುವ ಐಪಿಎಲ್ 2024 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಅವರು ಬೃಹತ್ ಮೊತ್ತಕ್ಕೆ ಸೇಲ್ ಆಗುವ ಮೂಲಕ ಐಪಿಎಲ್ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ : IPL 2024 Auction : 24.75 ಕೋಟಿ ರೂ. ಪಡೆದು ಸಾರ್ವಕಾಲಿಕ ದಾಖಲೆ ಬರೆದ ಸ್ಟಾರ್ಕ್
ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರ್ರನ್ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರ ಎನಿಸಿಕೊಂಡಿದ್ದರು. 2023ರಲ್ಲಿ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಆದರೆ ಈಗ ಈ ದಾಖಲೆ ಪತನಗೊಂಡಿದೆ. ಕಮಿನ್ಸ್ ಅವರು 20.50 ಕೋಟಿಗೆ ಸೇಲ್ ಆಗುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ.
ನಿರೀಕ್ಷೆಯಂತೆ ದೊಡ್ಡ ಮೊತ್ತ ಪಡೆದ ಡ್ಯಾರಿಲ್ ಮಿಚೆಲ್
ನ್ಯೂಜಿಲ್ಯಾಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಮತ್ತು ಆಲ್ರೌಂಡರ್ ಆಗಿರುವ ಡ್ಯಾರಿಲ್ ಮಿಚೆಲ್ ಅವರಿಗೂ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಅವರು ದೊಡ್ಡ ಮೊತ್ತ ಜೇಬಿಗಿಳಿಸಿದ್ದಾರೆ.14 ಕೋಟಿ ರೂ. ಮೊತ್ತಕ್ಕೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇಲ್ ಆಗಿದ್ದಾರೆ
ಯಾವುದೇ ಹಂತದಲ್ಲಿಯೂ ತಂಡಕ್ಕೆ ಆಸರೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇವರಿಗಿದೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿಯೂ ಮಿಚೆಲ್ ಗಮನಾರ್ಹ ಪ್ರದರ್ಶನ ತೋರಿದ್ದರು. 552 ರನ್ ಬಾರಿಸಿ ವಿಶ್ವಕಪ್ನಲ್ಲಿ ಅತ್ಯಧಿಕ ರನ್ಗಳಿಸಿದ 5ನೇ ಆಟಗಾರನಾಗಿ ಹೊರಮೊಮ್ಮಿದ್ದರು.
ಇದನ್ನೂ ಓದಿ IPL Auction 2024 Live: ನಿರೀಕ್ಷೆಯಂತೆ ದೊಡ್ಡ ಮೊತ್ತ ಪಡೆದ ಡ್ಯಾರಿಲ್ ಮಿಚೆಲ್
ಹೆಡ್-ರಚಿನ್ಗೆ ಸಿಗಲಿಲ್ಲ ದೊಡ್ಡ ಮೊತ್ತ
ಟ್ರಾವಿಸ್ ಹೆಡ್ ಮತ್ತು ರಚಿನ್ ರವೀಂದ್ರ ಅವರಿಗೆ ಈ ಬಾರಿಯ ಹರಾಜಿನಲ್ಲಿ ಕನಿಷ್ಠ 15 ಕೋಟಿ ಮೊತ್ತಕ್ಕೆ ಸೇಲ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಅಲ್ಲದೆ ಉಭಯ ಆಟಗಾರರು ಹರಾಜಿನ ಹೈಲೆಟ್ ಕೂಡ ಆಗಿದ್ದರು. ಆದರೆ ಈ ಎಲ್ಲ ನಿರೀಕ್ಷೆ ಹುಸಿಯಾಗಿದೆ. ಹಡ್ ಕೇವಲ 6.80 ಕೋಟಿ ರೂ.ಗೆ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇಲ್ ಆದರೆ, ರಚಿನ್ ಅವರು 1.80 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ್ದಾರೆ. ಅವರ ಮೂಲಬೆಲೆ 50 ಲಕ್ಷ ಆಗಿತ್ತು.