Site icon Vistara News

SRH vs RR: ರಾಜಸ್ಥಾನ್​-ಹೈದರಾಬಾದ್​ ಐಪಿಎಲ್​ ದಾಖಲೆ, ಹವಾಮಾನ ವರದಿ ಹೇಗಿದೆ?

SRH vs RR

SRH vs RR: Rajasthan-Hyderabad IPL record, how is the weather report?

ಚೆನ್ನೈ: ಐಪಿಎಲ್​ನ ದ್ವಿತೀಯ ಕ್ವಾಲಿಫೈಯರ್(SRH vs RR Qualifier 2)​ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ(MA Chidambaram Stadium, Chennai) ನಾಳೆ(ಶುಕ್ರವಾರ) ನಡೆಯುವ ಈ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್(SRH vs RR)​ ಮತ್ತು ಸನ್​ರೈಸರ್ಸ್​ ಹೈದರಾಬಾದ್​(Sunrisers Hyderabad) ತಂಡಗಳು ಕಾದಾಟ ನಡೆಸಲಿವೆ. ಗೆದ್ದವರು ಮೇ 26ರಂದು ನಡೆಯುವ ಫೈನಲ್​ನಲ್ಲಿ ಕೆಕೆಆರ್​ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ. ರಾಜಸ್ಥಾನ್(Rajasthan Royals) ಮತ್ತು ಹೈದರಾಬಾದ್​ ತಂಡದ ನಾಕೌಟ್​/ಪ್ಲೇ ಆಫ್​ ಸಾಧನೆಯ ಇಣುಕು ನೋಡ ಇಂತಿದೆ.

ಲೀಗ್​ನಲ್ಲಿ 1 ರನ್​ ಗೆಲುವು


ಈ ಬಾರಿಯ ಲೀಗ್​ನಲ್ಲಿ ಇತ್ತಂಡಗಳು ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಅತ್ಯಂತ ರೋಚವಾಗಿ ಸಾಗಿದ ಈ ಪಂದ್ಯವನ್ನು ಸನ್​ರೈಸರ್ಸ್​ ಹೈದರಾಬಾದ್​ 1 ರನ್​ ಅಂತರದಿಂದ ಗೆದ್ದು ಬೀಗಿತ್ತು. ಭುನೇಶ್ವರ್​ ಕುಮಾರ್​ ಅವರು ಅಂತಿಮ ಎಸೆತದಲ್ಲಿ ರೋಮ್ಮನ್​ ಪೋವೆಲ್​ ಅವರನ್ನು ಎಲ್​ಬಿಡ್ಲ್ಯು ಮಾಡುವ ಮೂಲಕ ಈ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಸೋಲಿಗೆ ರಾಜಸ್ಥಾನ್​ ಕ್ವಾಲಿಫೈಯರ್​ ಪಂದ್ಯದಲ್ಲಿ ಸೇಡು ತೀರಿಸಲು ಪಣ ತೊಟ್ಟಿದೆ.

ರಾಜಸ್ಥಾನ್​ ನಾಕೌಟ್​/ ಪ್ಲೇ ಆಫ್​ ಸಾಧನೆ


2008ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಚಾಂಪಿಯನ್​

2013ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2015ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2018ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2022ರಲ್ಲಿ ಲೀಗ್​ನಲ್ಲಿ 2ನೇ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

ಬಲಾಬಲ


ಉಭಯ ತಂಡಗಳು ಇದುವರೆಗಿನ ಐಪಿಎಲ್ ಪಂದ್ಯದಲ್ಲಿ ಒಟ್ಟು 19 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಹೈದರಾಬಾದ್​ 10, ರಾಜಸ್ಥಾನ್​ 9 ಪಂದ್ಯಗಳನ್ನು ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹೈದರಾಬಾದ್​ ಬಲಿಷ್ಠವಾಗಿದೆ. ಜತೆಗೆ ಈ ಬಾರಿ ತಂಡ ಬಲಿಷ್ಠವಾಗಿಯೂ ಗೋಚರಿಸಿದೆ.

ಹೈದರಾಬಾದ್​ ನಾಕೌಟ್​/ ಪ್ಲೇ ಆಫ್​ ಸಾಧನೆ


2013ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಎಲಿಮಿನೇಟರ್​ನಲ್ಲಿ ಸೋಲು

2016ರಲ್ಲಿ ಲೀಗ್​ನಲ್ಲಿ 3ನೇ ಸ್ಥಾನ. ಚಾಂಪಿಯನ್‌

2017ರಲ್ಲಿ ಲೀಗ್​ನಲ್ಲಿ 3ನೇ ಸ್ಥಾನ. ಎಲಿಮಿನೇಟರ್​ನಲ್ಲಿ ಸೋಲು

2018ರಲ್ಲಿ ಮೊದಲ ಸ್ಥಾನ. ರನ್ನರ್ ಅಪ್‌

2019ರಲ್ಲಿ 4ನೇ ಸ್ಥಾನ. ಎಲಿಮಿನೇಟರ್​ನಲ್ಲಿ ಸೋಲು

2020ರಲ್ಲಿ 3ನೇ ಸ್ಥಾನ. ಕ್ವಾಲಿಫೈಯರ್‌-2ನಲ್ಲಿ ಸೋಲು

ಇದನ್ನೂ ಓದಿ IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

ಹವಾಮಾನ ವರದಿ


ಪಂದ್ಯ ಚೆನ್ನೈಯಲ್ಲಿ ನಡೆಯುವ ಕಾರಣ ಪಂದ್ಯಕ್ಕೆ ಮಳೆ ಭೀತಿ ಇದ್ದೇ ಇದೆ. ಈಗಾಗಲೇ ತಮಿಳುನಾಡಿನಲ್ಲಿ ವರುಣನ ಆರ್ಭಟದಿಂದ ಕೆಲವು ಪ್ರದೇಶಗಳು ವಿಪರೀತ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಪಂದ್ಯಕ್ಕೂ ಮಳೆಯ ಕಾಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಂದೊಮ್ಮೆ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾದರೆ 120 ನಿಮಿಷಗಳ (2 ಗಂಟೆ) ಅವಧಿಗೆ ಪಂದ್ಯವನ್ನು ವಿಸ್ತರಿಸಬಹುದಾಗಿದೆ. ಆಗ 9.40ಕ್ಕೆ ಪಂದ್ಯ ಆರಂಭವಾಗುವುದಿದ್ದರೂ ಓವರ್‌ಗಳಲ್ಲಿ ಯಾವುದೇ ಕಡಿತ ಇರುವುದಿಲ್ಲ. ಸ್ಪಷ್ಟ ಫ‌ಲಿತಾಂಶಕ್ಕೆ ತಲಾ 5 ಓವರ್‌ಗಳ ಆಟ ನಡೆಯಬೇಕಿದೆ. ಹೆಚ್ಚುವರಿ ಅವಧಿಯಲ್ಲೂ ಇದು ಸಾಧ್ಯವಾಗದೇ ಹೋದರೆ ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಮೇಲಿದ್ದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಗುತ್ತದೆ. ಇದರ ಲಾಭ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಸಿಗಲಿದೆ. ಹೈದರಾಬಾದ್​ ತಂಡ ಲೀಗ್​ ಹಂತದಲ್ಲಿ ದ್ವಿತೀಯ ಸ್ಥಾನಿಯಾಗಿತ್ತು.

Exit mobile version