Site icon Vistara News

Virat Kohli : ಗೊತ್ತಿಲ್ಲದೇ ಹೇಳಿಕೆ ಕೊಟ್ಟೆ; ಕೊಹ್ಲಿಯ ಕ್ಷಮೆ ಕೋರಿದ ಲಂಕಾ ನಾಯಕ

Kusal Mendis

ಬೆಂಗಳೂರು: ವಿರಾಟ್​ ಕೊಹ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಹಾಲಿ ವಿಶ್ವ ಕಪ್​ನಲ್ಲಿ ಗರಿಷ್ಠ ರನ್​ ಗಳಿಕೆದಾರರ ಪಟ್ಟಿಯಲ್ಲಿ ಅವರು ನಿರಂತರ ರೇಸ್​ನಲ್ಲಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಅವರು ಏಕ ದಿನ ಕ್ರಿಕೆಟ್​ ಮಾದರಿಯಲ್ಲಿ ಸಚಿನ್​ ತೆಂಡೂಲ್ಕರ್ ಅವರು 49 ಶತಕಗಳ ದಾಖಲೆಯನ್ನು ಮುರಿದಿದ್ದಾರೆ. ಈ ಸಾಧನೆ ಅವರು ವೃತ್ತಿ ಕ್ರಿಕೆಟ್​ನಲ್ಲಿ ಅತ್ಯಂತ ಸ್ಮರಣೀಯ ಸಾಧನೆಯೂ ಹೌದು. ಹೀಗಾಗಿ ವಿಶ್ವ ಕ್ರಿಕೆಟ್​ ಕ್ಷೇತ್ರದ ಎಲ್ಲರೂ ಅವರನ್ನು ಶ್ಲಾಘಿಸಿದ್ದರು. ಏತನ್ಮಧ್ಯೆ, ಅವರ ಸಾಧನೆಯ ಬಳಿಕ ಲಂಕಾ ನಾಯಕ ಕುಸಾಲ್​ ಮೆಂಡಿಸ್​ ಅವರಿಗೆ ಈ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಆ ವೇಳೆ ಅವರು ನಿರ್ಲಕ್ಷ್ಯದ ಉತ್ತರ ಕೊಟ್ಟಿದ್ದರು. ಇದೀಗ ಅವರಿಗೆ ತಪ್ಪಿನ ಅರಿವಾಗಿದ್ದು ಕೊಹ್ಲಿಯ ಕ್ಷಮೆ ಕೋರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ, ಕೊಹ್ಲಿ ತಮ್ಮ 49ನೇ ಶತಕವನ್ನು ಗಳಿಸಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ. ಪತ್ರಕರ್ತರು ಇದ್ದಕ್ಕಿದ್ದಂತೆ ಕೇಳಿದಾಗ, ಏನು ಹೇಳಬೇಕೆಂದು ನನಗೆ ತಿಳಿದಿಲ್ಲ ಮತ್ತು ನನಗೆ ಪ್ರಶ್ನೆ ಅರ್ಥವಾಗಲಿಲ್ಲ. 49 ಶತಕಗಳನ್ನು ಗಳಿಸುವುದು ಸುಲಭವಲ್ಲ. ನಾನು ಹೇಳಿದ್ದು ತಪ್ಪು, ನಾನು ಅದಕ್ಕಾಗಿ ಕ್ಷಮೆ ಕೋರುತ್ತೇನೆ ” ಎಂದು ಕುಸಾಲ್ ಮೆಂಡಿಸ್ ಹೇಳಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಶ್ರೀಲಂಕಾದ ಪಂದ್ಯಕ್ಕೆ ಮೊದಲು ಪತ್ರಿಕಾಗೋಷ್ಠಿಯಲ್ಲಿ, ಮೆಂಡಿಸ್ ಅವರನ್ನು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು. ಭಾರತೀಯ ಬ್ಯಾಟ್ಸ್ಮನ್ ಆಗಿ ಕೊಹ್ಲಿಯನ್ನು ಅಭಿನಂದಿಸಲು ಬಯಸುತ್ತೀರಾ ಎಂದು ಕೇಳಿದ್ದರು. ಆ ವೇಳೆ ಮೆಂಡಿಸ್ “ನಾನು ಅವರನ್ನು ಏಕೆ ಅಭಿನಂದಿಸಬೇಕು?” ಎಂದು ಮರುಪ್ರಶ್ನೆ ಹಾಕಿದ್ದರು. ಮೆಂಡಿಸ್ ಅವರ ಆ ಉತ್ತರವನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಏಕೆಂದರೆ ಆಟಗಾರ ಅಹಂಕಾರದಿಂದ ಉತ್ತರಿಸಿದ್ದಾರೆ ಎಂದು ಹೇಳಲಾಗಿತ್ತು. ಈಗ ಆಟಗಾರ ತನ್ನ ಹಿಂದಿನ ಕಾಮೆಂಟ್​ಗಳಿ ಕ್ಷಮೆಯಾಚಿಸಿದ್ದಾರೆ. ಆ ಸಮಯದಲ್ಲಿ ಪ್ರಶ್ನೆಯೇ ಅರ್ಥ ಅರ್ಥವಾಗಿರಲಿಲ್ಲ ಎಂದು ಹೇಳಿದ್ದಾರೆ.

ಮೆಂಡಿಸ್ ಅವರು ಆ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಹೇಳಿಕೆಗಳಿಗಾಗಿ ವಿಷಾದಿಸುತ್ತೇನೆ ಮತ್ತು ಭಾವಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ವಿಶ್ವಕಪ್​ನಲ್ಲಿ ಲಂಕಾ ತಂಡದ ಕಳಪೆ ಪ್ರದರ್ಶನಕ್ಕಾಗಿ ತಂಡದ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಲು ಶ್ರೀಲಂಕಾ ನಾಯಕ ಪತ್ರಿಕಾಗೋಷ್ಠಿ ಕರೆದಿದ್ದರು. ಅದರಲ್ಲಿ ಅವರು ಕೊಹ್ಲಿಯ ಕ್ಷಮೆಯನ್ನೂ ಕೋರಿದ್ದಾರೆ. ತಂಡವು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾಯಿತು. ಇದು ನಿರಾಶಾದಾಯಕ ಅಭಿಯಾನಕ್ಕೆ ಕಾರಣವಾಯಿತು ಎಂದು ಮೆಂಡಿಸ್ ಒಪ್ಪಿಕೊಂಡರು. ಆಟಗಾರರು ಸಮಾನವಾಗಿ ನಿರಾಶೆಗೊಂಡಿದ್ದಾರೆ ಮತ್ತು ಅನುಭವದಿಂದ ಕಲಿಯಲು ಬದ್ಧರಾಗಿದ್ದಾರೆ ಎಂದು ಅವರು ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ.

ಕಳಪೆ ಪ್ರದರ್ಶನ ನೀಡಲು ತಂಡದ ಮೇಲೆ ಬಾಹ್ಯ ಒತ್ತಡದ ವದಂತಿಗಳನ್ನು ಮೆಂಡಿಸ್ ನಿರಾಕರಿಸಿದರು. ಅಂತಹ ಹೇಳಿಕೆಗಳನ್ನು ಆಧಾರರಹಿತವೆಂದು ಹೇಳಿದರು. ಮೈದಾನದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ತಂಡದ ಆಟಗಾರರು ನೀಡಿದ ಸಮರ್ಪಣೆಯನ್ನು ಅವರು ಒತ್ತಿಹೇಳಿದರು. ವಿಶ್ವಕಪ್ ಫಲಿತಾಂಶಗಳಿಗೆ ಯಾವುದೇ ಬಾಹ್ಯ ಪ್ರಭಾವಕ್ಕಿಂತ ಪರಿಣಾಮಕಾರಿ ಅನುಷ್ಠಾನದ ಕೊರತೆ ಕಾರಣ ಎಂದು ಹೇಳಿದರು.

ದ. ಆಫ್ರಿಕಾ ವಿರುದ್ಧ ಶತಕ ಬಾರಿಸಿದ್ದರು

ದಕ್ಷಿಣ ಆಫ್ರಿಕಾ(South Africa) ವಿರುದ್ಧದ ಭಾನುವಾರ ವಿಶ್ವಕಪ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ಶತಕ ಬಾರಿಸುವ ಮೂಲಕ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ಸಾರ್ವಕಾಲಿಕ ಏಕದಿನ ಕ್ರಿಕೆಟ್​ನ 49ನೇ(49th ODI hundred) ಶತಕದ ದಾಖಲೆಯನ್ನು ಸರಿಗಟ್ಟಿದ್ದರು. ಕೊಹ್ಲಿಯ ಈ ಸಾಧನೆಗೆ ಸ್ವತಃ ಸಚಿನ್​ ತೆಂಡೂಲ್ಕರ್​ ಸೇರಿ ಅನೇಕ ಹಾಲಿ ಮತ್ತು ಮಾಜಿ ಆಟಗಾರರು ಅಭಿನಂದನೆ ಸಲ್ಲಿಸಿದ್ದರು. ಬದ್ಧ ಎದುರಾಳಿ ಪಾಕಿಸ್ತಾನದ ಆಟಗಾರರು ಕೂಡ ಕೊಹ್ಲಿಯ ಸಾಧನೆಯನ್ನು ಕೊಂಡಾಡಿದ್ದರು. ಆದರೆ ಶ್ರೀಲಂಕಾದ ನಾಯಕ ಕುಸಾಲ್ ಮೆಂಡಿಸ್(Kusal Mendis) ಅಭಿನಂದನೆ ಸಲ್ಲಿಸುವುದನ್ನು ನಿರಾಕರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದ್ದು ನೆಟ್ಟಿಗರು ಮೆಂಡಿಸ್​ಗೆ ಕಮೆಂಟ್​ ಮೂಲಕ ಚಳಿ ಬಿಡಿಸಿದ್ದಾರೆ.

ಕೋಲ್ಕೊತಾದ ಐತಿಹಾಸಿಕ ಸ್ಟೇಡಿಯಂ ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಸೊಗಸಾದ ಬ್ಯಾಟಿಂಗ್​ ನಡೆಸಿ ಅಜೇಯ ಶತಕ ಬಾರಿಸಿ ಮಿಂಚಿದರು. ಅವರು ಶತಕ ಬಾರಿಸುತ್ತಿದ್ದಂತೆ ಸಚಿನ್​ ಅವರ ಏಕದಿನ ಕ್ರಿಕೆಟ್​ನ 49ನೇ ಶತಕದ ದಾಖಲೆ ಸರಿದೂಗಿತು. ಕೊಹ್ಲಿಯ ಈ ಸಾಧನೆಗೆ ಅನೇಕರು ಅಭಿನಂದನೆ ಸಲ್ಲಿಸಿದ್ದರು. ಈಗಲೂ ಕೂಡ ಕೆಲವರು ಅಭಿನಂದನೆ ಸಲ್ಲಿಸುತ್ತಲೇ ಇದ್ದಾರೆ.

Exit mobile version