Site icon Vistara News

ICC World Cup 2023 : ಪಾಕ್​ ತಂಡವನ್ನೇ ಕೆಳಕ್ಕೆ ಇಳಿಸಿದ ಲಂಕಾ; ಹೀಗಿದೆ ನೋಡಿ ವಿಶ್ವ ಕಪ್​ ಅಂಕಪಟ್ಟಿ

England Cricket team

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ವಿಶ್ವ ಕಪ್​ 2023ರ 25ನೇ ಪಂದ್ಯದಲ್ಲಿ (ICC World Cup 2023) ಹಾಲಿ ಚಾಂಪಿಯನ್​ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ತಂಡ 8 ವಿಕೆಟ್​ಗಳ ಸುಲಭ ಜಯ ದಾಖಲಿಸಿದೆ. ಇದು ಲಂಕಾ ತಂಡಕ್ಕೆ ಹಾಲಿ ಟೂರ್ನಿಯಲ್ಲಿ ಲಭಿಸಿದ ಸತತ ಎರಡನೇ ವಿಜಯ. ಇದೇ ವೇಳೆ ವೇಳೆ ಆಂಗ್ಲರ ಪಡೆಗೆ ಸತತ ಮೂರು ಹಾಗೂ ಒಟ್ಟು ನಾಲ್ಕನೇ ಸೋಲಾಗಿದೆ. ಈ ಪಂದ್ಯದ ಬಳಿಕ ವಿಶ್ವ ಕಪ್ ಅಂಕಪಟ್ಟಿಯಲ್ಲಿ ಸಣ್ಣ ಮಾರ್ಪಾಟು ಆಗಿದೆ. ಆದರೆ, ಅಗ್ರ ನಾಲ್ಕರಲ್ಲಿ ಯಾವುದ ಬದಲಾವಣೆ ಉಂಟಾಗಿಲ್ಲ.

ಈ ಸುದ್ದಿಗಳನ್ನೂ ಓದಿ:
Virat kohli : ಕೊಹ್ಲಿ 50ನೇ ಒಡಿಐ ಶತಕ ಬಾರಿಸುವ ದಿನಾಂಕ ತಿಳಿಸಿದ ಗವಾಸ್ಕರ್​
IPL 2024 : ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ದುಬೈನಲ್ಲಿ? ಬಿಸಿಸಿಐ ಸ್ಪಷ್ಟನೆ
Hardik Pandya : ಹಾರ್ದಿಕ್​ ಪಾಂಡ್ಯ ಬದಲಿಗೆ ಗುಜರಾತ್​​ನ ಆಲ್​ರೌಂಡರ್​ಗೆ ಚಾನ್ಸ್​?

ಈ ಪಂದ್ಯದ ಗೆಲುವಿನ ಬಳಿಕ ಆಡಿರುವ ಐದು ಪಂದ್ಯಗಳಲ್ಲಿ ಮೊದಲ ಮೂರನ್ನು ಸೋತು ನಂತರ ಎರಡು ಹಣಾಹಣಿಯಲ್ಲಿ ವಿಜಯ ಕಂಡಿರುವ ಲಂಕಾ ತಂಡ ಎರಡು ಸ್ಥಾನ ಮೇಲಕ್ಕೇರಿ ಐದನೇ ಕ್ರಮಾಂಕ ಪಡೆದಿದೆ. ಈ ತಂಡದ ಬಳಿ ಇದೀಗ 4 ಅಂಕಗಳಿದ್ದು, -0.205 ನೆಟ್​ರನ್​ರೇಟ್​ ಹೊಂದಿದೆ. ಈ ಸಂದರ್ಭದಲ್ಲಿ ಲಂಕಾ ತಂಡ ಐದನೇ ಸ್ಥಾನದಲ್ಲಿದ್ದ ಪಾಕ್​ ತಂಡವನ್ನು ಕೆಳಕ್ಕೆ ತಳ್ಳ ಆ ಸ್ಥಾನದಲ್ಲಿ ಕುಳಿತಿದೆ. ಜತೆಗೆ ಸೆಮಿಫೈನಲ್ ಆಸೆಯವನ್ನು ಜೀವಂತವಾಗಿರಿಸಿದೆ. ಇದೇ ಇಂಗ್ಲೆಂಡ್​ ಬಳಗ ಹ್ಯಾಟ್ರಿಕ್​ ಸೋಲಿನೊಂದಿಗೆ ಕೇವಲ 2 ಅಂಕಗಳನ್ನು ಹೊಂದಿದೆ. ಹೀಗಾಗಿ 8ರಿಂದ 9ನೇ ಸ್ಥಾನಕ್ಕೆ ಜಾರಿದೆ. ಈ ತಂಡ (-1.634) ಬಾಂಗ್ಲಾದೇಶಕ್ಕಿಂತಲೂ (-1.253) ಕಡಿಮೆ ನೆಟ್​ರನ್​ರೇಟ್​ ಹೊಂದಿದೆ. ಹಾಲಿ ಚಾಂಪಿಯನ್​ಗಳಿಗೆ ಇನ್ನು 4 ಪಂದ್ಯಗಳು ಬಾಕಿ ಉಳಿದಿದೆ. ಆದಾಗ್ಯೂ ಸೆಮೀಸ್​ ಅವಕಾಶ ಕ್ಷೀಣಿಸಿದೆ.

ಭಾರತಕ್ಕೆ ಅಗ್ರಸ್ಥಾನ

ಆತಿಥೇಯ ಭಾರತ ತಂಡ ಆಡಿದ ಎಲ್ಲ 5 ಪಂದ್ಯಗಳನ್ನು ಗೆದ್ದು 10 ಅಂಕದೊಂದಿಗೆ ಅಗ್ರಸ್ಥಾನ ಪಡೆದಿದೆ. 5ರಲ್ಲಿ ನಾಲ್ಕು ಪಂದ್ಯ ಗೆದ್ದ ನ್ಯೂಜಿಲ್ಯಾಂಡ್​ 8 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. 5ರಲ್ಲಿ ನಾಲ್ಕು ಪಂದ್ಯ ಗೆದ್ದು ಉತ್ತಮ ರನ್​ ರೇಟ್​ ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ದ್ವಿತೀಯ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ​ +2.370 ರನ್​ ರೇಟ್ ಹೊಂದಿದೆ. ಭಾರತ ಇನ್ನೊಂದು ಪಂದ್ಯ ಗೆದ್ದರೂ ಸೆಮಿಫೈನಲ್​ಗೆ ಅಧಿಕೃತ ಎಂಟ್ರಿ ಕೊಡಲಿದೆ. ಭಾರತದ ಬದ್ಧ ಎದುರಾಳಿ ಹ್ಯಾಟ್ರಿಕ್​ ಸೋಲು ಕಂಡ ಪಾಕಿಸ್ತಾನ 4 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ.

ನೆದರ್ಲ್ಯಾಂಡ್ಸ್​ ತಂಡ ಕೊನೇ ಸ್ಥಾನದಲ್ಲಿದ್ದರೆ ಬಾಂಗ್ಲಾದೇಶಕ್ಕೆ ಎಂಟನೇ ಸ್ಥಾನ. ಅಫಘಾನಿಸ್ತಾನ ತಂಡ 4 ಅಂಕಗಳೊಂದಿಗೆ ಏಳನೇ ಸ್ಥಾನ ಪಡೆದುಕೊಂಡಿದೆ.

2023ರ ಅಂಕಪಟ್ಟಿ ಈ ರೀತಿ ಇದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ550101.353
ದಕ್ಷಿಣ ಆಫ್ರಿಕಾ54182.370
ನ್ಯೂಜಿಲ್ಯಾಂಡ್​54181.481
ಆಸ್ಟ್ರೇಲಿಯಾ53261.142
ಶ್ರೀಲಂಕಾ5234-0.205
ಪಾಕಿಸ್ತಾನ5234-0.400
ಅಫಘಾನಿಸ್ತಾನ5234-0.969
ಬಾಂಗ್ಲಾದೇಶ5142-1.253
ಇಂಗ್ಲೆಂಡ್​ 5142-1.634
ನೆದರ್ಲ್ಯಾಂಡ್ಸ್​​ 5142-1.902

ಅಕ್ಟೋಬರ್​ 27ರಂದು ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಚೆನ್ನೈನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಗೊಂಡಿದೆ. ಪಾಕಿಸ್ತಾನ ತಂಡ ಸೆಮಿಫೈನಲ್​ಗೇರಬೇಕಾದರೆ ಇನ್ನುಳಿದಿರುವ ನಾಲ್ಕು ಪಂದ್ಯಗಳನ್ನೂ ಗೆಲ್ಲಬೇಕಾಗಿದೆ. ಆದರೆ ದಕ್ಷಿಣ ಆಫ್ರಿಕಾ ತಂಡ ವಿಶ್ವಾಸದಲ್ಲಿ ಮುನ್ನುಗ್ಗುತ್ತಿದೆ.

Exit mobile version