Site icon Vistara News

T20 World Cup | ಐರ್ಲೆಂಡ್‌ ತಂಡದ ವಿರುದ್ಧ 9 ವಿಕೆಟ್‌ ಗೆಲುವು ಸಾಧಿಸಿ ಖಾತೆ ತೆರೆದ ಶ್ರೀಲಂಕಾ

t20

ಹೋಬರ್ಟ್‌: ಟಿ20 ವಿಶ್ವ ಕಪ್‌(T20 World Cup) ನ ಭಾನುವಾರದ ಮೊದಲ ಸೂಪರ್‌ 12 ಪಂದ್ಯದಲ್ಲಿ ಹಾಲಿ ಏಷ್ಯಾಕಪ್‌ ಚಾಂಪಿಯನ್‌ ಶ್ರೀಲಂಕಾ ತಂಡ ಐರ್ಲೆಂಡ್‌ ತಂಡದ ವಿರುದ್ಧ 9 ವಿಕೆಟ್‌ ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

ಬೆಲ್ಲೆರಿವ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​​ ನಡೆಸಿದ ಐರ್ಲೆಂಡ್‌ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 128 ರನ್‌ ಗಳಿಸಿತು. ಬಳಿಕ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ 15 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ನಷ್ಟಕ್ಕೆ 133 ರನ್‌ ಪೇರಿಸಿ ಗೆಲುವು ದಾಖಲಿಸಿತು.

ಚೇಸಿಂಗ್‌ ವೇಳೆ ಬಿರುಸಿನ ಬ್ಯಾಟಿಂಗ್‌ ನಡೆಸಿದ ಕುಶಲ್‌ ಮೆಂಡಿಸ್‌, 43 ಎಸೆತಗಳಲ್ಲಿ 5 ಫೋರ್‌ ಮತ್ತು 3 ಸಿಕ್ಸರ್‌ಗಳೊಂದಿಗೆ 68 ರನ್‌ಗಳನ್ನು ಸಿಡಿಸಿ ಅಜೇಯರಾಗಿ ಉಳಿದರು. ಅವರಿಗೆ ಉತ್ತಮ ಧನಂಜಯ ಡಿ’ಸಿಲ್ವಾ (25 ಎಸೆತಗಳಲ್ಲಿ 31) ಉತ್ತಮ ಸಾಥ್‌ ನೀಡಿದರು. ಧನಂಜಯ ಅವರ ವಿಕೆಟ್‌ ಗೆರಾತ್‌ ಡೆಲಾನಿ ಪಾಲಾಯಿತು. ಬಳಿಕ ಬಂದ ಚರಿತ ಅಸಲಂಕ, 22 ಎಸೆತಗಳಲ್ಲಿ ಅಜೇಯ 31 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲು ಬ್ಯಾಟಿಂಗ್‌ ನಡೆಸಿದ ಐರ್ಲೆಂಡ್‌ ತಂಡದ ಪರ ಪಾಲ್‌ ಸ್ಟಿರ್ಲಿಂಗ್‌ (34) ಮತ್ತು ಹ್ಯಾರಿ ಟೆಕ್ಟರ್‌ (45) ಉತ್ತಮ ಪ್ರದರ್ಶನ ತೋರಿದರು. ಈ ಇಬ್ಬರ ಜವಾಬ್ದಾರಿಯು ಬ್ಯಾಟಿಂಗ್‌ ನೆರವಿನಿಂದ ತಂಡ ತನ್ನ ಸಾಧಾರಣ ಮೊತ್ತ ಕಲೆಹಾಕಿತು. ಲಂಕಾ ಪರ ಮಹೇಶ್‌ ತೀಕ್ಷಣ ಮತ್ತು ವನಿಂದು ಹಸರಂಗ ತಲಾ 2 ವಿಕೆಟ್‌ ಕಿತ್ತು ಮಿಂಚಿದರು.

ಸ್ಕೋರ್‌ ವಿವರ:

ಐರ್ಲೆಂಡ್‌: 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 128 (ಹ್ಯಾರಿ ಟೆಕ್ಟರ್‌ 45, ಪಾಲ್‌ ಸ್ಟಿರ್ಲಿಂಗ್‌ 34, ತೀಕ್ಷಣ 19ಕ್ಕೆ2, ಹಸರಂಗ 25ಕ್ಕೆ2)

ಶ್ರೀಲಂಕಾ: 15 ಓವರ್‌ಗಳಲ್ಲಿ ಒಂದು ವಿಕೆಟ್‌ನಷ್ಟಕ್ಕೆ 133 (ಕುಶಲ್‌ ಮೆಂಡಿಸ್‌ ಅಜೇಯ 68, ಚರಿತ ಅಸಲಂಕ ಅಜೇಯ 31, ಗೆರಾತ್‌ ಡೆಲಾನಿ 28ಕ್ಕೆ1)

ಇದನ್ನೂ ಓದಿ | IND VS PAK | ವಿರಾಟ್‌ ಕೊಹ್ಲಿ ಆಟ ನೋಡಲು ಪಾಕಿಸ್ತಾನದಿಂದ ಮೆಲ್ಬೋರ್ನ್‌ಗೆ ಬಂದ ಪಾಕ್‌ ಅಭಿಮಾನಿ

Exit mobile version