Site icon Vistara News

Angelo Mathews: ಕ್ರಿಕೆಟ್‌ ಇತಿಹಾಸದಲ್ಲೇ ಮೊದಲ ಬಾರಿ ಬ್ಯಾಟರ್‌ ‘ಟೈಮ್ಡ್‌ ಔಟ್‌’; ಏನಿದು ನಿಯಮ?

Sri Lanka star Angelo Mathews first batter to be timed out in cricket

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಸಾಗುತ್ತಿರುವ ಪಂದ್ಯದಲ್ಲಿ ಶ್ರೀಲಂಕಾದ ಆಟಗಾರ ಏಂಜೆಲೊ ಮ್ಯಾಥ್ಯೂಸ್‌(Angelo Mathews) ಅವರು ಬ್ಯಾಟಿಂಗ್​ ನಡೆಸದೆಯೇ ಔಟ್​ ಆಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಬ್ಯಾಟಿಂಗ್​ ನಡೆಸಲು ತಡ ಮಾಡಿದ ಕಾರಣದಿಂದ ಅವರು ಟೈಮ್ಡ್‌ ಔಟ್‌(timed out) ಆಗಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ರೀತಿ ಔಟಾದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.

ಅಸಲಿಗೆ ಔಟ್​ ಆಗಲು ಕಾರಣವೇನು?

ನಾಲ್ಕನೇ ವಿಕೆಟ್​ ಬಿದ್ದ ಬಳಿಕ ಆಡಲಿಳಿದ ಏಂಜೆಲೊ ಮ್ಯಾಥ್ಯೂಸ್ ಅವರು ಕ್ರೀಸ್​ಗೆ ಬಂದಾಗ ಹೆಲ್ಮೆಟ್​ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಇದೇ ವೇಳೆ ಅವರು ಸಹ ಆಟಗಾರನ ಬಳಿ ಬೇರೆ ಹೆಲ್ಮೆಟ್ ತರುವಂತೆ ಹೇಳಿದ್ದಾರೆ. ಹೊಸ ಹೆಲ್ಮೆಟ್ ತರುವಲ್ಲಿ ಕೊಂಚ ತಡವಾಗಿದೆ. ಇದೇ ವೇಳೆ ಬಾಂಗ್ಲಾದೇಶ ಆಟಗಾರರು ಅಂಪೈರ್​ ಬಳಿ ಐಸಿಸಿ ನಿಯಮದಂತೆ ಟೈಮ್ ಔಟ್ ಅಫೀಲ್​ ಮಾಡಿದ್ದಾರೆ. ಇದನ್ನು ಅಂಪೈರ್​ ಕೂಡ ಮಾನ್ಯ ಮಾಡಿ ಓಟ್​ ಎಂದು ತೀರ್ಪು ನೀಡಿದರು. ಆದರೆ ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಇಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗಲೇ ಇಲ್ಲ. ಎಲ್ಲರು ಅಚ್ಚರಿಯಿಂದ ಚರ್ಚಿಸತೊಡಗಿದರು.

ಔಟ್​ ನೀಡಿದ ಬಳಿಕ ಮ್ಯಾಥ್ಯೂಸ್ ಕೂಡ ಅಂಪೈರ್​ ಬಳಿಕ ಚರ್ಚೆ ನಡೆಸಿದರು. ನಾನು ಉದ್ದೇಶ ಪೂರ್ವಕವಾಗಿ ಈ ರೀತಿ ಸಮಯ ವ್ಯರ್ಥ ಮಾಡಿಲ್ಲ. ಎಂದು ಮನವರಿಕೆ ಮಾಡಿದರು. ಅಲ್ಲದೆ ಬಾಂಗ್ಲಾದೇಶ ನಾಯಕ ಶಕೀಬ್​ ಅವರರಿಗೂ ತಮ್ಮ ಸಮಸ್ಯೆಯನ್ನು ತಿಳಿಸಿದರೂ ಆದರೆ ಇದಕ್ಕೆ ಶಕೀಬ್,​ ರೂಲ್ಸ್​ ಪ್ರಕಾರ ನಾವು ಅಫೀಲ್ ಮಾಡಿದ್ದೇವೆ ಎಂದು ಹೇಳಿ ಸುಮ್ಮನಾದರು.​

ಮ್ಯಾಥ್ಯೂಸ್ ಪೆವಿಲಿಯನ್​ ಕಡೆ ಸಾಗುವ ವೇಳೆಯೂ ಬೇಸರಿಂದಲೇ ಹೆಜ್ಜೆ ಹಾಕಿದರು. ಅಲ್ಲದೆ ತಂಡದ ಸಿಬ್ಬಂದಿ ಬಳಿಯೂ ಇದೇ ವಿಚಾರವನ್ನು ಚರ್ಚಿಸಿದರು. ಈ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ ಹಂಚಿಕೊಂಡಿದೆ. ಎಂಸಿಸಿ ಪ್ರಕಾರ, ಈ ಕೆಳಗಿನ ಸಂದರ್ಭಗಳಲ್ಲಿ ಬ್ಯಾಟರ್ ಅನ್ನು ಸಮಯ ಮೀರಿದ ಔಟ್ ಎಂದು ಪರಿಗಣಿಸಲಾಗುತ್ತದೆ.

ಐಸಿಸಿ ನಿಯಮ ಏನು ಹೇಳುತ್ತದೆ?

ಆರ್ಟಿಕಲ್ 40.1.1 ನಿಯಮದ ಪ್ರಕಾರ, ಒಂದು ವಿಕೆಟ್ ಪತನದ ನಂತರ ಅಥವಾ ಬ್ಯಾಟರ್‌ನ ನಿವೃತ್ತಿಯ ಬಳಿಕ ಕ್ರೀಸ್​ಗೆ ಬರುವ ಆಟಗಾರ ನಿಗದಿತ ಸಮಯದಲ್ಲಿ ಚೆಂಡನ್ನು ಎದುರಿಸಲು ಸಿದ್ಧರಾಗಿರಬೇಕು. ಅಂದರೆ 3 ನಿಮಿಷಗಳ ಒಳಗೆ ಚೆಂಡನ್ನು ಎದುರಿಸಬೇಕು. ಒಂದು ವೇಳೆ ಈ ಪ್ರಕ್ರಿಯೆಯನ್ನು ಬ್ಯಾಟರ್ ಪೂರೈಸದಿದ್ದರೆ, ಆಗ ಸಮಯ ಮೀರಿದ (ಟೈಮ್ಡ್ ಔಟ್) ಎಂದು ತೀರ್ಪು ನೀಡಲಾಗುತ್ತದೆ.

40.1.2 ನಿಯಮದ ಪ್ರಕಾರ, ಯಾವುದೇ ಬ್ಯಾಟರ್ ಹೆಚ್ಚಿನ ವಿಳಂಬದ ಬಳಿಕ ಕ್ರೀಸ್‌ಗೆ ಬಂದರೆ, ಸ್ಟ್ಯಾಂಡಿಂಗ್ ಅಂಪೈರ್‌ಗಳು 16.3ರ ಕಾರ್ಯವಿಧಾನದ ಅಡಿಯಲ್ಲಿ ಅಳವಡಿಸಿಕೊಳ್ಳಬೇಕು. ಆದರೆ ಎದುರಾಳಿ ತಂಡದ ಆಟಗಾರರು ಔಟ್​ಗೆ ಮನವಿ ಮಾಡಿದರೆ ಮಾತ್ರ. ಅಂಪೈರ್​ ಅವರೇ ಸ್ವ ನಿರ್ಧಾರ ಕೈಗೊಳ್ಳುವಂತಿಲ್ಲ. ಈ ಟೈಮ್ಡ್ ಔಟ್ ವಿಕೆಟ್‌ ಬೌಲಿಂಗ್​ ನಡೆಸುತ್ತಿದ್ದ ಬೌಲರ್​ಗೆ ಸಿಗುವುದಿಲ್ಲ. ಇದು ತಂಡಕ್ಕೆ ಸಿಗುತ್ತದೆ.

Exit mobile version